ಜಾಗತೀಕರಣದ ಹಿನ್ನೆಲೆಯಲ್ಲಿ ಕರ್ನಾಟಕದ ಕುಶಲಕರ್ಮಿಗಳು

Author : ವಿ.ಆರ್. ಕಾರ್ಪೆಂಟರ್

Pages 122

₹ 100.00




Year of Publication: 2019
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಜೆ.ಸಿ.ರೋಡ್, ಬೆಂಗಳೂರು-01

Synopsys

ಜಾಗತೀಕರಣದ ಹಿನ್ನೆಲೆಯಲ್ಲಿ ಕರ್ನಾಟಕದ ಕುಶಲಕರ್ಮಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಯನದ ಒಂದು ಲಕ್ಷ ರೂಪಾಯಿ ಫೆಲೋಶಿಪ್ ಪಡೆದ ಕೃತಿ. ಸಂಶೋಧನಾ ಕೃತಿಯಾದ ಕರ್ನಾಟಕ ಕುಶಲಕರ್ಮಿಗಳು ಕೃತಿಯನ್ನು ನರಸಿಂಹಮೂರ್ತಿ ವಿ.ಆರ್ ಅವರು ರಚಿಸಿದ್ದಾರೆ. ಮನುಷ್ಯ ತನ್ನ ವಿಕಾಸದಲ್ಲಿ ಹಲವು ಯುಗಗಳನ್ನು ಕ್ರಮಿಸಿದ್ದಾನೆ. ನಾಗರೀಕ ಯುಗ ಎನ್ನಲ್ಪಡುವ ಈ ಯುಗಕ್ಕೆ ಕಾಲಿಡುವುದಕ್ಕೂ ಮುನ್ನಾ ಅವನ ದೇಹರಚನೆಯಲ್ಲಿಯೇ ತನ್ನ ಕ್ರಿಯಾಶೀಲತೆಯನ್ನು ಕುತೂಹಲವನ್ನು ತಣಿಸಿಕೊಳ್ಳುವುದಕ್ಕೆ ಮೆದುಳನ್ನು ಕೂಡ ದೇಹದಂತೆ ಬೆಳೆಸಿಕೊಂಡ ತನ್ನ ವಂಶವನ್ನು ಬೆಳೆಸುವುದಕ್ಕೆ ಮಕ್ಕಳನ್ನು ಮಾಡಿಕೊಂಡ ರೀತಿಯಲ್ಲಿಯೇ ಮೆದುಳಿನ ವಿಕಸನಕ್ಕೆ ಪೂರಕವಾಗಿದ್ದು ಬೇಟೆಗಾರಿಕೆ.

ಹಸಿವು ನೀಗಿಸಿಕೊಳ್ಳಲು, ಕ್ರೂರ ಮೃಗಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ತನ್ನ ಸುತ್ತ ವೈರಿಗಳೂ ಸುಳಿಯದಂತೆ ತಡೆಯಬೇಕಾದ ಆಯುಧಗಳ ಶೋಧನೆಗೆ ಈ  ಮೆದುಳು ಬಳಕೆಯಾಯಿತು. ಗಟ್ಟಿ ಚರ್ಮದ ಹಾಗೂ ತೆಳು ಚರ್ಮದ ಪ್ರಾಣಿಗಳ ಬೇಟೆಗೆ ಬೇರೆಬೇರೆ ರೀತಿಯ ಆಯುಧಗಳ ಅಗತ್ಯತೆಯನ್ನು ಅವನು ಮನಗಂಡ. ಕವಣಿಗಿಂತಲೂ ತೀಕ್ಷ್ಣಗತಿಯಲ್ಲಿ ಸಾಗಬಲ್ಲ ಬಾಣ, ಭರ್ಜಿಯ ಉಗಮಗಳು ಅವನು ಮನಗಂಡದ್ದರ ಪರಿಣಾಮ. ಹಾಗೆಯೇ ಸದಾ ಬದಲಾಗುವ ಹವಾಗುಣಕ್ಕೆ ತಕ್ಕಂತೆ ದೇಹವನ್ನು ಮುಚ್ಚಿಡುವ ಕ್ರಿಯೆಯಾಗಿ ಬಟ್ಟೆಯೂ ಕೂಡ ಆತನ ಕಲೆಗಾರಿಕೆಯ ಒಂದು ದೊಡ್ಡ ಜಿಗಿತವೇ ಆಗಿದೆ. ಇಂತಹ ಎಷ್ಟೋ ಜಿಗಿತಗಳನ್ನು ಕಂಡು ಮನುಷ್ಯ ಇವತ್ತು ಇಲ್ಲಿಯವರೆಗೂ ನಡೆದು ಬಂದು ಮುನ್ನಡೆಯುತ್ತಿದ್ದಾನೆ. 

ಈ ಜಿಗಿತಗಳನ್ನೆಲ್ಲಾ ಒಂದೇ ಕ್ರಮದಲ್ಲಿ ಕಾಣಿಸುವ ರೀತೆಯೇ ಕುಶಲಕಲೆ. ದೈನಂದಿನ ಬದುಕಿಗೆ ಅಗತ್ಯವಾದ ವಸ್ತುಗಳ ಪೂರೈಕೆಗೆ ಇದು ತನ್ನ ಸ್ಥಾನವನ್ನು ಪಡೆಯಿತು. ಪ್ರಕೃತಿಯಲ್ಲಿ ಸಿಗುವ ಕಚ್ಚಾ ವಸ್ತುಗಳಿಂದ ತನ್ನ ಅಗತ್ಯಕ್ಕೆ ತಕ್ಕಂತೆ  ವಿನ್ಯಾಸವನ್ನು ರೂಪಿಸಿಕೊಳ್ಳುತ್ತಾ. ಗುಂಪು ಗುಂಪಾಗಿ ಹೊರಟ ಬುಡಕಟ್ಟುಗಳು ಭೂಮಿಯ ಮೇಲೆಲ್ಲಾ ಚದುರಿಕೊಂಡು ಹೋದಂತೆ ಆಯಾ ಪ್ರದೇಶದ ಕಚ್ಛಾವಸ್ತುಗಳಿಗೆ ಅನುಗುಣವಾಗಿ ಕುಶಲಕಲೆಯೂ ಬದಲಾಗತೊಡಗಿತು. ಪ್ರಸ್ತುತ ಕುಶಲಕರ್ಮಿಗಳ ಸ್ಥಿತಿಗತಿಗಳನ್ನು ಈ ಕೃತಿ ಕಾಣಿಸುತ್ತದೆ ಎನ್ನುತ್ತಾರೆ ಲೇಖಕ ನರಸಿಂಹಮೂರ್ತಿ ವಿ.ಆರ್

About the Author

ವಿ.ಆರ್. ಕಾರ್ಪೆಂಟರ್
(28 May 1981)

ವಿ. ಆರ್. ಕಾರ್ಪೆಂಟರ್ ಯಲಹಂಕ ಸಮೀಪದ ವೆಂಕಟಾಲದಲ್ಲಿ 1981ರಲ್ಲಿ ಜನಿಸಿದರು. ಅವರ ಮೂಲ ಹೆಸರು- ನರಸಿಂಹಮೂರ್ತಿ ವಿ.ಆರ್. ತಂದೆ ರಾಮಯ್ಯ, ತಾಯಿ-ಸಿದ್ದಗಂಗಮ್ಮ. 9ನೇ ತರಗತಿಯವರೆಗೆ ವೆಂಕಟಾಲ ಮತ್ತು ಯಲಹಂಕದಲ್ಲಿ ವಿದ್ಯಾಭ್ಯಾಸ ಮಾಡಿ, ನಂತರ ಸುಮಾರು ಹದಿನೈದು ವರ್ಷಗಳ ಕಾಲ ಬಡಗಿ ವೃತ್ತಿ. ಅದರ ನಡುವೆಯೇ ಲಂಕೇಶ್ ಪತ್ರಿಕೆಯ ಪ್ರಭಾವದಿಂದ ಸಾಹಿತ್ಯ ಲೋಕಕ್ಕೆ ಬಂದ ಅವರು ಒಂದಷ್ಟು ಕಾಲ ಕನ್ನಡ ಟೈಮ್ಸ್ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಸಿಗ್ನಲ್ ಟವರ್, ಐದನೇ ಗೋಡೆಯ ಚಿತ್ರಗಳು, ಕಾರ್ಪೆಂಟರ್ ಪದ್ಯಗಳು (ಕವನ ಸಂಕಲನ), ಅಪ್ಪನ ಪ್ರೇಯಸಿ ಮತ್ತು ನೀಲಿಗ್ರಾಮ (ಕಾದಂಬರಿಗಳು) ಪ್ರಕಟವಾಗಿವೆ. ಕಾರ್ಪೆಂಟರ್ ...

READ MORE

Related Books