ಕರ್ನಾಟಕದ ಮಹಾಸಂತ ಕನಕದಾಸ

Author : ಚನ್ನಪ್ಪ ಎರೇಸೀಮೆ

Pages 184

₹ 13.00




Year of Publication: 1985
Published by: ಸಮಾಚಾರ ಹಾಗೂ ಪ್ರಸಾರ ಸಚಿವಾಲಯ
Address: ಪ್ರಕಾಶನ ವಿಭಾಗ, ಭಾರತ ಸರ್ಕಾರ, ನವದೆಹಲಿ-110001

Synopsys

ಪಂಡಿತ ಚನ್ನಪ್ಪ ಎರೇಸೀಮೆ ಹಾಗೂ ಎಂ. ಬಸವರಾಜು ಅವರು ಜಂಟಿಯಾಗಿ ಬರೆದ ಕೃತಿ-ಕರ್ನಾಟಕದ ಮಹಾ ಸಂತ ಕನಕದಾಸ. ಅಧ್ಯಾತ್ಮ ವಿದ್ಯೆಯ ಕ್ಲಿಷ್ಟ ತತ್ವಗಳನ್ನುಮಧ್ವಾಚಾರ್ಯರು ಸಂಸ್ಕೃತದಲ್ಲಿ ರಚಿಸಿದರೂ ಜನಸಾಮಾನ್ಯರಿಗೆ ಅವುಗಳ ಸಾರ ತಿಳಿಯುವಂತೆ ಮಾಡಿರುವುದು ಹರಿದಾಸರು. ಅದರಲ್ಲೂ, ಹರಿದಾಸ ಶ್ರೇಷ್ಠ ಎಂಬ ಖ್ಯಾತಿಯ ಕನಕದಾಸರು ಪ್ರಮುಖರು. ಮೂಢ ಧರ್ಮವನ್ನೇ ಜೀವನ ಆಚರಣೆಯನ್ನಾಗಿಸಿಕೊಂಡಿದ್ದ ಜನಸಾಮಾನ್ಯರನ್ನು ಕನಕದಾಸರು ನೈಜ ದೇವರ ಸ್ವರೂಪವನ್ನು ಸರಳವಾಗಿ ತಿಳಿಸಿ ಅರಿವು ಮೂಡಿಸಿದರು. ಮೌಢ್ಯತೆಯನ್ನು ಪ್ರಬಲವಾಗಿ ಖಂಡಿಸಿದರು. ಈ ಮಹಾನ್ ಸಂತನ ಜೀವನ ಚರಿತ್ರೆಯನ್ನು ಈ ಇಬ್ಬರು ಚಿಂತಕ-ಲೇಖಕರು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ.

ಜನನ, ಬಾಲ್ಯ ಮತ್ತು ಜೀವನ, ನಾಡ ಗೌಡಿಕೆ ಕೈ ತಪ್ಪಿತು, ತಿಮ್ಮಪ್ಪ ಕನಕನಾದುದು, ಕನಕ ದಂಡನಾಯಕ, ಕನಕನಾಯಕ ಕನಕದಾಸನಾದುದು, ತತ್ವ ಚಿಂತನೆಯ ಹಾದಿಯಲ್ಲಿ, ಸ್ವಲೀಲಾನಂದ ಮೂರ್ತಿ, ತೀರ್ಥಯಾತ್ರಾನಂದ, ಬೇಳೂರು ಚೆನ್ನಕೇಶವ ಸನ್ನಿಧಿಯಲ್ಲಿ, ಕನಕನ ಕಿಂಡಿ, ಕೊನೆಯ ದಿನಗಳು ಹೀಗೆ ವಿವಿಧ ಶೀರ್ಷಿಕೆಗಳಡಿ ಕನಕದಾಸರ ಸಮಗ್ರ ಚಿತ್ರಣ ನೀಡುವ ಕೃತಿ ಇದಾಗಿದೆ.

About the Author

ಚನ್ನಪ್ಪ ಎರೇಸೀಮೆ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರವಿ ಗ್ರಾಮದ ಚೆನ್ನಪ್ಪ ಎರೇಸೀಮೆ ಅವರು (1919) ಜನಿಸಿದರು. ಮುಲ್ಕಿ ಪರೀಕ್ಷೆ ಪಾಸಾದ ನಂತರ ಶಿಕ್ಷಕರಾದರು. ಕೀರ್ತನಾಕಾರ-ಪ್ರವಚನಾಕಾರರಾದರು. ನುಡಿ ಗಾರುಡಿಗ ಎಂದೇ ಪ್ರಖ್ಯಾತರು. ಶಿಕ್ಷಕ ತರಬೇತಿ ಕಾಲೇಜಿನಲ್ಲಿ 30 ವರ್ಷ ಕಾಲ ಬೋಧನೆ ನಂತರ ನಿವೃತ್ತರಾದರು. ತುಮಕೂರಿನ ಸಿದ್ಧಗಂಗಾ ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಠದ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿಯವರ ಪಟ್ಟಾಧಿಕಾರ ಮಹೋತ್ಸವ ವೇಳೆ ‘ಸಿದ್ಧಗಂಗಾ ಶ್ರೀ’ ಹಾಗೂ ವಜ್ರಮಹೋತ್ಸವ ವೇಳೆ ‘ದಾಸೋಹ ಸಿರಿ’ ಮಹಾಸಂಪುಟಗಳ ರಚನೆ-ಪ್ರಕಟಣೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಪ್ರಾಥಮಿಕ, ಪ್ರೌಢಶಿಕ್ಷಣ, ಪಿಯುಸಿ ...

READ MORE

Related Books