ಕರ್ನಾಟಕದ ನಾಥಪಂಥ

Author : ರಹಮತ್ ತರೀಕೆರೆ

Pages 392

₹ 400.00




Year of Publication: 2013
Published by: ಅಭಿನವ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

‘ಕರ್ನಾಟಕದ ನಾಥಪಂಥ’ ರಹಮತ್ ತರೀಕೆರೆ ಅವರ ಕೃತಿ. ಕರ್ನಾಟಕದ ಜನಸಮುದಾಯಗಳ ಸಾಮಾಜಿಕ ಧಾರ್ಮಿಕ ಬದುಕಿನಲ್ಲಿ ಕಾಪಾಲಿಕ, ಕಾಳಾಮುಖ, ನಾಥ, ಶಾಕ್ತ, ಸೂಫೀ, ಬೌದ್ಧ, ಆರೂಢ, ಶರಣ ಮುಂತಾದ ದರ್ಶನ ಹಾಗೂ ಪಂಥಗಳ ಅಂಶಗಳು ಹಲವು ರೂಪಗಳಲ್ಲಿ ಅಡಗಿವೆ ಎನ್ನುತ್ತಾರೆ ಲೇಖಕ ರಹಮತ್ ತರೀಕೆರೆ.

 ಶರಣ ಪಂಥ ಮೇಲಾಗಿರುವಂತೆ, ಉಳಿದ ಪಂಥಗಳ ಮೇಲೆ ಆಗಬೇಕಾದಷ್ಟು ಅಧ್ಯಯನ ನಡೆದಿಲ್ಲ. ಅದರಲ್ಲೂ ನಾಥರ ಬಗ್ಗೆ ನಡೆದ ಅಧ್ಯಯನ ತೀರ ಕಡಿಮೆ. ಭಾರತದ ಪ್ರಾಚೀನ ಪಂಥಗಳಲ್ಲಿ ಒಂದಾಗಿರುವ ನಾಥವು, ನೇಪಾಳ ಟಿಬೆಟ್ ಆಫಘಾನಿಸ್ತಾನ, ಪಾಕಿಸ್ತಾನ ಒಳಗೊಂಡಂತೆ ದಕ್ಷಿಣ ಏಶಿಯಾದ ತುಂಬ ಹರಡಿತ್ತು. ದಕ್ಷಿಣ ಭಾರತದಲ್ಲಿ ಅದು ಕರ್ನಾಟಕದಲ್ಲಿ ಮಾತ್ರ ಇದೆ ಕಳೆದ 10 ಶತಮಾನಗಳಿಂದ. ನಾಡಿನಾದ್ಯಂತ ಇರುವ ಮಠಗಳು, ಜೋಗಿ-ಸಿದ್ಧ-ಭೈರವ ಹೆಸರಿನಲ್ಲಿರುವ ಊರು, ಗವಿ, ಬೆಟ್ಟ, ಕೊಳ್ಳ, ಕಣಿವೆ, ಗುಡಿ, ಸಮಾಧಿ,, ಶಿಲ್ಪ ಹಾಗೂ ಶಾಸನಗಳು, ಅದರ ಅಸ್ತಿತ್ವದ ಕುರುಹುಗಳು. ಅಲ್ಲಮನನ್ನು ಒಳಗೊಂಡಂತೆ ಅನೇಕ ಯೋಗಿಗಳು ನಾಥರನ್ನು ಮುಖಾಮುಖಿ ಮಾಡುವ ಕಥನಗಳು ಕನ್ನಡ ಸಾಹಿತ್ಯದಲ್ಲಿವೆ ಎಂದಿದ್ದಾರೆ.

ಹಾಗೆಂದು ನಾಥವು ಗತಕಾಲಕ್ಕೆ ಸಂದುಹೋಗಿರುವ ಪಂಥವಲ್ಲ. ಅದನ್ನು ಬದುಕುತ್ತಿರುವ ಕಾಪಾಲಿಕ ಜೋಗಿ ಹಣಗಿ ಮುಂತಾದ ಜೀವಂತ ಸಮುದಾಯ ಗಳಿವೆ. ಅವುಗಳ ನಿತ್ಯಬದುಕಿನಲ್ಲಿರುವ ಆಚರಣ ಲೋಕವಿದೆ. ಈ ಆಚರಣೆಗಳು ಅವರ ದುಡಿಮೆಯ ಲೋಕಕ್ಕೆ ಸಂಬಂಧಪಟ್ಟಿವೆ. ಇವನ್ನೆಲ್ಲ ಇಟ್ಟುಕೊಂಡು ಪ್ರಸ್ತುತ ಅಧ್ಯಯನ ನಡೆಸಲಾಗಿದೆ. ಈ ಹಿನ್ನೆಲೆಯಿಂದ ಇದು ನಾಥಪಂಥದ ಕೇವಲ ಗತದ ಚಿತ್ರವೂ ಅಲ್ಲ. ವರ್ತಮಾನದ ವರದಿಯೂ ಅಲ್ಲ. ಎರಡನ್ನೂ ಬೆರೆಸಿದ ಸಂಸ್ಕೃತಿ ಕಥನ. ಚರಿತ್ರೆಯ ಗತವೂ ವರ್ತಮಾನದ ಪಲ್ಲಟವೂ ಬೇರೆಯಾಗಿರಲು ಸಾಧ್ಯವಿಲ್ಲ. ಅವು ಒಂದರೊಳಗೊಂದು ಬೇರ್ಪಡಿಸಲಾಗದಂತೆ ಬೆಸೆದುಕೊಂಡಿರುತ್ತವೆ ಎಂಬುದನ್ನೂ ಕಾಣಬಹುದು.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Related Books