ಕರ್ನಾಟಕದ ವೀರಗಲ್ಲುಗಳು

Author : ಆರ್. ಶೇಷಶಾಸ್ತ್ರಿ

Pages 504

₹ 800.00




Year of Publication: 2017
Published by: ಕಾಮಧೇನು ಪುಸ್ತಕ ಭವನ
Address: ನಂ. 5/1, ನಾಗಪ್ಪ ಬೀದಿ, ಶೇಷಾದ್ರಿಪುರಂ, ಬೆಂಗಳೂರು- 560020
Phone: 9449446328

Synopsys

‘ಕರ್ನಾಟಕದ ವೀರಗಲ್ಲುಗಳು’ ಸಂಶೋಧಕ ಆರ್. ಶೇಷಶಾಸ್ತ್ರಿ ಅವರ ಕೃತಿ. ಹಿರಿಯ ಸಂಶೋಧಕ ದಿ. ಡಾ. ಎಂ. ಚಿದಾನಂದಮೂರ್ತಿ ಬೆನ್ನುಡಿ ಬರೆದಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ದೊರಕುವ ವೀರಗಲ್ಲುಗಳನ್ನು ಅತ್ಯಂತ ಶಾಸ್ತ್ರೀಯವಾಗಿ ಅಭ್ಯಸಿಸಿರುವ ಇಂತಹ ಪ್ರಯತ್ನ ಈ ಮೊದಲು ಕರ್ನಾಟಕದಲ್ಲಂತೂ ನಡೆದಿರಲಿಲ್ಲ ಎನ್ನುತ್ತಾರೆ ಚಿದಾನಂದ ಮೂರ್ತಿ.

ಶೇಷಶಾಸ್ತ್ರಿ ಕರ್ನಾಟಕದ ಮೂಲೆ ಮೂಲೆಗಳಿಗೆ ಹೋಗಿ ಇಲ್ಲಿಯವರೆಗೆ ಇತಿಹಾಸತಜ್ಞರಿಂದ ಅಲಕ್ಷ್ಯಕ್ಕೆ ಒಳಗಾಗಿದ್ದ ಶಾಸನವಿಲ್ಲದ, ಕೇವಲ ಶಿಲ್ಪವಿರುವ ವೀರಗಲ್ಲುಗಳೂ ಸೇರಿದಂತೆ ಸಾವಿರಾರು ವೀರುಗಲ್ಲುಗಳನ್ನು ಪರಾಮರ್ಶಿಸಿ, ಪ್ರಕಟವಾಗಿರುವ ಸಾವಿರಾರು ಶಾಸನಗಳ ಪಾಠಗಳನ್ನು ಪರಿಶೀಲಿಸಿ ಕರ್ನಾಟಕ ಸಂಸ್ಕೃತಿಯ ಮುಖ್ಯಭಾಗವಾದ ವೀರಜೀವನದ ಅಧ್ಯಯನಕ್ಕೆ ಒಂದು ಶ್ರೇಷ್ಟ ಕೊಡುಗೆ ಸಲ್ಲಿಸಿದ್ದಾರೆ.

ಬೀರಗೊಳ್, ರಣವೀಳ್ಯ, ವೀರಗಲ್ಲಿನ ಶಿಲ್ಪದಲ್ಲಿ ಇಬ್ಬರು ಮುಖಾಮುಖಿಯಾಗಿ ಹೋರಾಡುತ್ತಿದ್ದರೆ ಅವರಲ್ಲಿ ವೀರನನ್ನು ಗುರುತಿಸುವ ಬಗೆ ಹೀಗೆ ಎಷ್ಟೋ ಹೊಸ ವಿಷಯಗಳು ಇಲ್ಲಿವೆ. ವೀರಗಲ್ಲಿನ ಶಿಲ್ಪಗಳ ವಿಶ್ಲೇಷಣೆಯಂತೂ ಅತ್ಯಂತ ಮೌಲಿಕವಾದುದು. ಬೇರೆ ಬೇರೆ ಕಾಲದ ವೀರಗಲ್ಲುಗಳ ವೈಶಿಷ್ಟ್ಯಗಳನ್ನು ಗುರುತಿಸಿರುವುದೂ ಅಷ್ಟೇ ಮುಖ್ಯ. ಪ್ರಾಚೀನ ಕರ್ನಾಟಕದ ಬೇರೆ ಬೇರೆ ಅಧ್ಯಯನಗಳಿಗೆ ಎಡೆಮಾಡಿ ಕೊಡುವಂತಿವೆ. ಈ ಕೆಲಸದ ಹಿಂದೆ ಅಪಾರ ಶ್ರಮವಿದೆ. ಕರ್ನಾಟಕ ಸಂಸ್ಕೃತಿ, ಕನ್ನಡ ಸಾಹಿತ್ಯದ ಕ್ಷಾತ್ರದ ಹಿನ್ನೆಲೆಯನ್ನು ತಿಳಿಯಬಯಸುವವರಿಗೆ ಈ ಕೃತಿಯು ಉತ್ತಮ ಪರಾಮರ್ಶನ ಗ್ರಂಥವಾಗಿದೆ ಎಂದೂ ಸಂಶೋಧಕ ಎಂ. ಚಿದಾನಂದಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

 

About the Author

ಆರ್. ಶೇಷಶಾಸ್ತ್ರಿ

ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಶ್ರಮಿಸಿದ ಬಹುಭಾಷಾ ಪಂಡಿತರ ಪರಂಪರೆಗೆ ಸೇರಿದವರು ಡಾ. ಆರ್. ಶೇಷಶಾಸ್ತ್ರಿ. ಅಧ್ಯಾಪಕ, ಲೇಖಕ, ಅನುವಾದಕ, ಸಂಶೋಧಕರಾಗಿ ಅದರದ್ದು ಬಹುಮುಖ ಪ್ರತಿಭೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಂತೇಕಲ್ಲಹಳ್ಳಿ ಶೇಷಶಾಸ್ತ್ರಿಗಳ ಹುಟ್ಟೂರು. ಬೆಂಗಳೂರು ವಿವಿಯಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಪದವಿ ಪಡೆದ ಅವರು ಸಂಶೋಧಕ ಸಹಾಯಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು. ಆಂಧ್ರಪ್ರದೇಶದ ಅನಂತಪುರದಲ್ಲಿರುವ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಕನ್ನಡ ಅಧ್ಯಾಪಕ, ರೀಡರ್, ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ಆನಂತರದಲ್ಲಿ ತೆಲುಗು ವಿಭಾಗದ ಮುಖ್ಯಸ್ಥರಾದರು ಜೊತೆಗೆ, ಕುಪ್ಪಂನ ದ್ರಾವಿಡ ವಿವಿಯಲ್ಲಿ ಕನ್ನಡ ಮತ್ತು ಅನುವಾದ ವಿಭಾಗದ ಸ್ಥಾಪಕ ...

READ MORE

Related Books