ಕರುಳಿನ ಬೆಲೆ ಮತ್ತು ಇತರ ನಾಲ್ಕು ನಾಟಕಗಳು

Author : ಸಂಗಮೇಶ ತಮ್ಮನಗೌಡ್ರ

Pages 112

₹ 60.00




Year of Publication: 2012
Published by: ನೀಲಾ ಪ್ರಕಾಶನ
Address: ಗುಜಮಾಗಡಿ, ತಾ: ರೋಣ, ಜಿ: ಗದಗ-582 102
Phone: 9449074397

Synopsys

ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ಬರೆದ ನಾಟಕಗಳ ಕೃತಿ-ಕರುಳಿನ ಬೆಲೆ ಮತ್ತು ಇತರ ನಾಲ್ಕು ನಾಟಕಗಳು. ಕರುಳಿನ ಬೆಲೆ, ಭೂತ ಎಲ್ಲಿಂದ ಬಂತು?, ನಾನೇಕೆ ಗುಲಾಮನಾದೆ?, ಖಳನಾಯಕನ ಕರ್ಮದಾಟ ಹಾಗೂ ಗುಲಾಬಿಯ ಗುಟ್ಟು-ಈ ಐದು ನಾಟಕಗಳನ್ನು ಇಲ್ಲಿ ಸಂಕಲನವಾಗಿವೆ. ನಾಟಕ ಓದುವವರೂ, ಅಭಿನಯಿಸುವವರೂ ಬೇಕು. ಆಗಲೇ ನಾಟಕ ಬರೆಯುವವರಿಗೆ ಹಾಗೂ ಇಡೀ ರಂಗಭೂಮಿ ಜೀವಂತ ಉಳಿಯಲು ಸಹಾಯವಾಗುತ್ತದೆ. ರಂಗಭೂಮಿಯತ್ತ ಒಂದು ಕಳಕಳಿಯ ಪ್ರಯತ್ನವಾಗಿ ನಾಟಕಗಳನ್ನು ರಚಿಸುತ್ತಿರುವುದಾಗಿ ಲೇಖಕರು ಹೇಳಿದ್ದಾರೆ.

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Related Books