ಕಾಶಿ ವಂಶಸ್ಥರು

Author : ಮೈತ್ರೇಯಿ (ಎಂ.ಶಿವಮ್ಮ)

Pages 104




Year of Publication: 2021
Published by: ಮೈತ್ರೇಶ್ರೀ
Address: #473, 3ನೇ ಕ್ರಾಸ್, 4ನೇ ಮುಖ್ಯ ರಸ್ತೆ, ಮಾರುತಿ ಲೇಔಟ್, ವಸಂತಪುರ ಬೆಂಗಳೂರು-560061
Phone: 9901851010

Synopsys

‘ಕಾಶಿ ವಂಶಸ್ಥರು’ ಕೃತಿಯು ಮೈತ್ರೇಯಿ ಅವರ ವ್ಯಕ್ತಿ ಚಿತ್ರಣವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಉಮಾರವಿ , ‘ಮೈತ್ರಿ ಎನ್ನುವ ಮಾತಿಗೆ ಮತ್ತೊಂದು ಹೆಸರು ಮೈತ್ರೇಯಿ. ತನ್ನ ಜೀವನದಲ್ಲಿ ನಡೆದಿರುವ ಎಷ್ಟೋ ಘಟನೆಗಳ ಪ್ರಭಾವವಾಗಲಿ. ತನ್ನ ಹಾದಿಯಲ್ಲಿ ಬಂದಿರುವ ಪಾತ್ರಗಳೊಂದಿಗೆ ತನ್ನ ಅನುಬಂಧವಾಗಲಿ ತಾನು ಸ್ವಾರಸ್ಯವಾಗಿ ಮೆಲುಕು ಹಾಕುವಾಗ ಎಷ್ಟೋ ಸಾರಿ ನನಗೆ ಎನಿಸಿದ್ದುಂಟು ಇಷ್ಟು ಕಾವ್ಯಮಯವಾಗಿ ಹೇಳುವ ಸನ್ನಿವೇಶಗಳು ದಾಖಲಾದರೆ ಎಷ್ಟು ಚೆನ್ನಾಗಿರಬಹುದು ಅಂತ! ಆಕೆಯಲ್ಲಿರುವ ಮಾನವತಾ ದೃಷ್ಟಿಕೋನ, ವಿಚಕ್ಷಣೆ, ಭಾವುಕತೆ, ಕಷ್ಟದಲ್ಲಿ ಇರುವವರ ನೋಡಿದಾಗ ಮಿಡಿಯುವ ಹೃದಯ, ನೂರಾರು ಸ್ನೇಹಬಂಧಗಳಷ್ಟೇ ಹೆಣೆದು ಕೊಟ್ಟಿದೆ. ಯಾರನ್ನೂ ಕಡೆಗಣಿಸದೆ ಎಲ್ಲ ಬಂಧಗಳಿಗೆ, ಬಂಧುಗಳಿಗೆ ಒಂದು ಉಚಿತ ಸ್ಥಾನವನ್ನು ಕೊಟ್ಟು ತನ್ನ ಗೌರವವನ್ನು ಸಲ್ಲಿಸಿ ತಾನು ಮಾನ್ಯ ಸ್ಥಾನದಲ್ಲಿ ನಿಲ್ಲುತ್ತಾರೆ. ತನ್ನ ಜೀವನದ ಬಗ್ಗೆ ಒಂದು ಸ್ವಷ್ಟವಾದ ವಿಶ್ಲೇಷಣೆ, ಜೀವನದ ರೀತಿ, ಆಧ್ಯಾತ್ಮಿಕ ವಿಚಾರದಲ್ಲಿ ಅವರ ನಿಲುವು, ಆದರ್ಶಪ್ರಾಯ, ದೇವರನ್ನು ದೈವ ನಿರ್ಣಯವನ್ನು ಅರ್ಥ ಮಾಡಿಕೊಳ್ಳುವುದು ತಾವರೆ ಎಲೆಯ ಮೇಲಿನ ನೀರಿನ ಹಾಗೆ ಇರುವ ಅವರ ಪ್ರಯತ್ನ ಅವರಿಂದ ತಿಳಿಯಬೇಕು. ನಾನು ಮೇಲೆ ಹೇಳಿದ ಎಲ್ಲ ಮಹತ್ವದ ವಿಷಯಗಳನ್ನು ಈ ಪುಟ್ಟ ಪುಸ್ತಕದಲ್ಲಿ ಎಲ್ಲೆಡೆಯೂ ಕಾಣಬಹುದು. ತಮ್ಮ ವಂಶದ ಮೂಲಗಳನ್ನು ಸಹ ಹುಡುಕಿ ತಮ್ಮ ಗೌರವ ಸಲ್ಲಿಸಿದ ಆಕೆಯ ವಿನಯಶೀಲ ಸ್ವಭಾವ, ನಿರಾಡಂಬರತೆ ಅಭಿನಂದನೀಯ. ಸ್ನೇಹಮಯಿ ಮೈತ್ರೇಯಿ ಮಾಡಿದ ಈ ಕೃತಿ ಪ್ರಶಂಸನೀಯ’ ಎಂದಿದ್ದಾರೆ.

About the Author

ಮೈತ್ರೇಯಿ (ಎಂ.ಶಿವಮ್ಮ)
(18 February 1955)

ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯ ವ್ಯವಸ್ಥಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಮೈತ್ರೇಯಿ (ಎಂ.ಶಿವಮ್ಮ) ಅವರು ಜನಿಸಿದ್ದು 18-02-1955 ಬೆಂಗಳೂರಿನಲ್ಲಿ. ತಂದೆ ಕೆ. ಮುನಿಸ್ವಾಮಿ ತಾಯಿ ಸಿದ್ದಗಂಗಮ್ಮ. ಇತಿಹಾಸ ವಿಷಯದಲ್ಲಿ ಎಂ.ಎ ಪದವೀಧರೆಯಾಗಿ, ಕನ್ನಡದಲ್ಲೂ ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಇವರ ಈ ಭುವಿ ಈ ಬಾಳು , ರಾಗ ಎಂಬ ಇವರ ಎರಡು ಕಾದಂಬರಿಗಳು, ಅಭಿಸಾರಿಕಾ ಮತ್ತು ಇತರ ಕತೆಗಳು, ಜೀವನ ಚರಿತ್ರೆ, ಕಾಕೋಳು ಸರೋಜಮ್ಮ , ಅಶ್ವಿನಿ ಎಂಬ ಕೃತಿಗಳು ಈಗಾಗಲೇ ಕನ್ನಡ ಸಾಹಿತ್ಯ ಲೋಕಕ್ಕೆ ಸೇರ್ಪಡೆಗೊಂಡಿದೆ. ...

READ MORE

Related Books