ಕಸ್ತೂರಿ ಬಾ

Author : ನಿರುಪಮಾ

Pages 120

₹ 15.00




Year of Publication: 1973
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ಕಸ್ತೂರಿ ಬಾ ಜೀವನಚರಿತ್ರೆ ಪುಸ್ತಕವನ್ನು ಲೇಖಕಿ ನಿರುಪಮಾ ಅವರು ರಚಿಸಿದ್ದಾರೆ. ಈ ಪುಸ್ತಕದಲ್ಲಿ ಮಹಾತ್ಮ ಗಾಂಧಿಯವರ ಧೀರ ಸತಿ. ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯದಿದ್ದರೂ ಮಹಾತ್ಮರ ಹೆಜ್ಜೆಯಲ್ಲೆ ನಡೆದು ಇಡೀ ಭಾರತಕ್ಕೆ ತಾಯಿಯಾದರು. ದಕ್ಷಿಣ ಆಫ್ರಿಕಾದಲ್ಲಿ, ಭಾರತದಲ್ಲಿ ಸೆರೆಮನೆಯ ವಾಸ ಅನುಭವಿಸಿ, ಸೆರೆಮನೆಯಲ್ಲಿ ತೀರಿಕೊಂಡ ತಪಸ್ವಿನಿ ಎಂದು ಕಸ್ತೂರಿ ಬಾ ಅವರ ಕುರಿತು ಇಲ್ಲಿ ವಿವರಿಸಲಾಗಿದೆ. ಅವರ ಬಾಲ್ಯ ಜೀವನ, ಗಾಂಧಿಯವರನ್ನು ವರಿಸಿದ ಪರಿ, ಮದುವೆಯ ನಂತರದ ಜೀವನ ಹೀಗೆ ಅವರ ಬದುಕಿನ ವಿವಧ ಘಟ್ಟಗಳನ್ನು ಲೇಖಕಿ ಈ ಕೃತಿಯಲ್ಲಿ ಚಿತ್ರಿಸಿದ್ದಾರೆ.

About the Author

ನಿರುಪಮಾ
(30 September 1933)

ಕನ್ನಡದ ಪ್ರಮುಖ ಬರಹಗಾರ್ತಿ, ಸಂಶೋಧಕಿ, ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಮಹಿಳಾ ಪ್ರಕಾಶಕಿ ಡಾ. ನಿರುಪಮಾ ಅವರು 1931 ಸೆಪ್ಟಂಬರ್‌ 30 ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯಲ್ಲಿ ಜನಿಸಿದರು. ಅವರ ಮೂಲ ಹೆಸರು ಪದ್ಮಾ ಆರ್. ರಾವ್ ಎಂದು. ನಿರುಪಮಾ ಅವರ ಪ್ರಾರಂಭಿಕ ಶಿಕ್ಷಣವೆಲ್ಲ ತೆಲುಗಿನಲ್ಲಿ ನಡೆಯಿತು. ಮನೆಯಲ್ಲಿ ಕನ್ನಡ ಪಾಠವೂ ನಡೆಯುತ್ತಿತ್ತು. ಎಸ್‌.ಎಸ್‌.ಎಲ್‌.ಸಿ. ಉತ್ತೀರ್ಣರಾದದ್ದು ಬಳ್ಳಾರಿಯ ಪ್ರೌಢಶಾಲೆಯಿಂದ. ಮದುವೆಯ ನಂತರ ಮೂವರು ಮಕ್ಕಳು ನೆಲೆಗೊಂಡ ನಂತರ ಎರಡು ಪಿಎಚ್‌.ಡಿ. ಪದವಿ ಪಡೆದ ವಿಶಿಷ್ಟ ಪ್ರತಿಭೆ ಇವರದ್ದು. ತಂದೆ ತಾಯಿಯರ ...

READ MORE

Related Books