ಕಥನಶಾಸ್ತ್ರ

Author : ಜಿ.ಎಸ್. ಆಮೂರ

Pages 92

₹ 30.00
Year of Publication: 2001
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಕರ್ನಾಟಕ ಸಾಹಿತ್ಯ ಅಕಾಡೆಮಿ, ಜೆ.ಸಿ ರಸ್ತೆ, ಬೆಂಗಳೂರು - 560002

Synopsys

ಕನ್ನಡದ ಹಿರಿಯ ವಿದ್ವಾಂಸರಾದ ಡಾ, ಜಿ,ಎಸ್.ಆಮೂರ ಅವರು ’ಕಥನ ಶಾಸ್ತ್ರ’ ಪುಸ್ತಕವನ್ನು ರಚಿಸಿದ್ದಾರೆ. ’ ಕಥೆ’ ಎನ್ನುವುದರ ಹಿನ್ನೆಲೆ, ಬಳಕೆ, ಕಥಾ ಪ್ರಬಂಧ, ಕಥನಕ್ರಿಯೆ ಮತ್ತು ಕಾಲ, ಪಾತ್ರಗಳು,ಕಥನಕ್ರಿಯೆಯ ಕೇಂದ್ರೀಕರಣ, ಕಥನದ ಸ್ತರಗಳು ಹಾಗೂ ಕಥನಕಾರರ ಶೈಲಿ, ಬಳಕೆ, ಭಾಷೆ, ಕಥಾ ಪ್ರಬಂಧ, ಕಲ್ಪನೆ ಇವುಗಳ ಸಂಕ್ಷಿಪ್ತ ಪರಿಚಯ, ವಿಮರ್ಶಾತ್ಮಕ ಚರ್ಚೆ, ಬರಹಗಳು ’ಕಥನ ಶಾಸ್ತ್ರ’ ದಲ್ಲಿವೆ.

ಕಥನ ಶಾಸ್ತ್ರ ಎಷ್ಟೇ ವೈಜ್ಞಾನಿಕವಾದರೂ ಅಸು ಕಾದಂಬರಿಯೊಂದರ ಸಂಪೂರ್ಣ ಮೀಮಾಂಸೆಯಾಗಲು ಸಾಧ್ಯವಿಲ್ಲ. ಆದರೆ ಕಾದಂಬರಿ ಕಥನದ ಒಂದು ರೂಪವಾದುದರಿಂದ ಅದು ಇಂಥ ಮೀಮಾಂಸೆಗೆ ಭದ್ರವಾದ ತಳಹದಿಯನ್ನು ನೀಡುತ್ತವೆ. ಕಥಾ ಪ್ರಬಂಧಗಳನ್ನು ಕಥನ ಶಾಸ್ತ್ರಜ್ಞರು ವಿಂಗಡಿಸಿರುವ ಬಗೆ, ವ್ಯಾಖ್ಯಾನ ಸಹಿತ ವಿವರಣೆಗಳನ್ನು ’ಕಥನ ಶಾಸ್ತ್ರ’ ಒಳಗೊಂಡಿದೆ.

About the Author

ಜಿ.ಎಸ್. ಆಮೂರ
(08 May 1925)

ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ 4-5 ದಶಕಗಳಿಂದಲೂ ಕನ್ನಡ-ಇಂಗ್ಲಿಷ್‌ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಮನೆಗೆ ತರುತ್ತಿದ್ದ ಸದ್ಭೋಧ ಚಂದ್ರಿಕಾ, ಕರ್ಮವೀರ ಮುಂತಾದ ಪತ್ರಿಕೆಗಳ ಸಂಗ್ರಹವೇ ಇದ್ದು ಇದನ್ನೂ ಓದುತ್ತಾ ಬಂದಂತೆಲ್ಲಾ ಆಮೂರರಿಗೆ ಸಾಹಿತ್ಯದಲ್ಲಿ ಆಸ್ಥೆ ಬೆಳೆಯ ತೊಡಗಿತು. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ...

READ MORE

Related Books