ಕವಿಗೆ ಕವಿ ಮಣಿದ ಪರಿ

Author : ವಿದ್ಯಾರಶ್ಮಿ ಪೆಲತ್ತಡ್ಕ

Pages 84

₹ 100.00




Year of Publication: 2022
Published by: ಅಭಿನವ ಪ್ರಕಾಶನ
Address: 17/1802, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು - 560040.
Phone: 9448804905

Synopsys

ಕವಿಗೆ ಕವಿ ಮಣಿದ ಪರಿ ಗೋಕಾಕರನ್ನು ಕುರಿತ ಕವಿತೆಗಳ ಸಂಕಲನವನ್ನು ಕವಿ ವಿದ್ಯಾರಶ್ಮಿ ಪೆಲತ್ತಡ್ಕ ಅವರು ಸಂಪಾದಿಸಿದ್ದಾರೆ. ಈ ಪುಸ್ತಕದಲ್ಲಿ ಒಟ್ಟು 28ಕವಿತೆಗಳಿದ್ದು, 3 ಅನುಬಂಧಗಳಿವೆ. ಕೃತಿಯಲ್ಲಿ ಬೇಂದ್ರೆಯವರ ವಿನಾಯಕ:ನಾನು ಕಂಡಂತೆ, ರಂ.ಶ್ರೀ.ಮುಗಳಿ ಅವರ ವಿನಾಯಕನಿಗೆ, ಶಾರದಾದೇವಿಯವರ ವನಮಾಲಿಯ ಒಲವಿನೋಳೆಗಳ ಲೇಖಕ, ದಿನಕರ ದೇಸಾಯಿಯವರ ವಿನಾಯಕರಿಗೆ, ಚೆನ್ನವೀರ ಕಣವಿಯವರ ವಿನಾಯಕರಿಗೆ ವಂದನೆ, ಜಿನದತ್ತ ದೇಸಾಯಿಯವರ ಸಾಹಿತ್ಯಾದಿತ್ಯ ವಿನಾಯಕ, ಜಿ.ವಿ. ಕುಕರ್ಣಿ ಅವರ ದಾದಾ ಅವರಿಗೆ, ಯಶೋದಾ ಭಟ್ಟ ಅವರ ನನ್ನ ತಂದೆ, ಎಚ್.‌ ಎಂ. ಮರುಳಸಿದ್ಧಪ್ಪ ಅವರ ಸಮನ್ವಯ ಸಿದ್ಧ, ಸತೀಶ ಕುಲಕರ್ಣಿ ಅವರ ಸವಣೂರಿನ ಮಣ್ಣಿಗೆ, ಬಸವರಾಜ ನರೇಗಲ್ಲ ಅವರ ಗುರು ವಿನಾಯಕರು,ವಿ.ಕೃ. ಗೋಕಾಕ ಅವರ ಅರ್ಪಣ, ಚಂದ್ರಶೇಖರ ಪಾಟೀಲ ಅವರ ಶ್ರೀ ವಿನಾಯಕಾಯ ನಮಃ, ಶಾರದಾ ಗೋಕಾಕ ಅವರ ಹೋಗಿ ಬನ್ನಿ ಮುಂತಾದ ಉತ್ತಮ ಕವಿತೆಗಳನ್ನು ಈ ಕೃತಿಯಲ್ಲಿ ನಾವು ಕಾಣಬಹುದಾಗಿದೆ.

About the Author

ವಿದ್ಯಾರಶ್ಮಿ ಪೆಲತ್ತಡ್ಕ

ವಿದ್ಯಾರಶ್ಮಿ ಪೆಲತ್ತಡ್ಕ- ದಕ್ಷಿಣ ಕನ್ನಡ-ಕಾಸರಗೋಡು ಗಡಿ ಭಾಗದ ಪೆಲತ್ತಡ್ಕದವರು. ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ ಪ್ರಭ, ಸುವರ್ಣ ನ್ಯೂಸ್, ವಿಜಯ ನೆಕ್ಸ್ಟ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ. ಸದ್ಯ ವಿಜಯ ಕರ್ನಾಟಕ ದಿನಪತ್ರಿಕೆಯ ಲವಲವಿಕೆ ವಿಭಾಗದಲ್ಲಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಇವರು ಬರೆದ ಕವನ, ಕಥೆ, ಪ್ರಬಂಧಗಳು ಹಲವೆಡೆ ಪ್ರಕಟವಾಗಿವೆ.  ‘ಗೌರೀದುಃಖ’ ಇವರ ಪ್ರಕಟಿತ ಕವನ ಸಂಕಲನ.  ...

READ MORE

Related Books