ಕಾವ್ಯ ವೈಖರಿ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

₹ 70.00




Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ಬೇಂದ್ರೆಯವರು ೧೯೮೧ ರಲ್ಲಿ ನಿಧನರಾದ ನಂತರ ಪ್ರಕಟವಾದ ಕವಿತೆಗಳ ಸಂಕಲನ ಕಾವ್ಯವೈಖರಿ. ಮರಣೋತ್ತರ ಪ್ರಕಟವಾದ ೨ನೆಯ ಸಂಕಲನ ಇದು. ಈ ಸಂಕಲನದಲ್ಲಿ ೪೭ ಕವಿತೆಗಳಿವೆ. ಈ ಎಲ್ಲ ಕವಿತೆಗಳು ೧೯೮೧ರಲ್ಲಿಯೇ ಬರೆದವುಗಳು. ೧೯೮೧ ಜನೇವರಿ ೧ರಂದು ರಚಿಸಿದ ಆತ್ರೇಯ ದತ್ತಾದಿಂದ ಹಿಡಿದು ೮೧ರ ಅಗಷ್ಟ ೨೯ರ ವರೆಗೆ ರಚನೆಯಾದ ಕವಿತೆಗಳಿವೆ. ಮುನ್ನುಡಿ ಬರೆದಿರುವ ಪ್ರೂ ಕೆ,ಎಸ್ ಶರ್ಮಾರವರು, ಕಾರ್ಯವೈಖರಿ ಅತ್ಯಂತ ಮಹತ್ವದ ಸಂಕಲನ. ಏಕೆಂದರೆ ಅಂಬಿಕಾತನಯ ದತ್ತರ ವ್ಯಕ್ತಿ ಜೀವನದ ಕೊನೆಯ ವರ್ಷ ೧೯೮೧ರಲ್ಲಿಯೇ ಎಲ್ಲ ಕವನಗಳು ರಚಿತವಾಗಿವೆ. ೮೬ ವರ್ಷಗಳ ತುಂಬು ಜೀವನದ ಪರಿಪಾಠ ಹಾಡಾಗಿ ರೂಪ ತಾಳಿವೆ.ಅಂಬಿಕಾತನಯದತ್ತರ ಹೃದಯಾಂತರಾಳದಲಿ ಅಡಕವಾಗಿದ್ದ ಅನೇಕ ಮಹತ್ವದ ವಿಚಾರಗಳು ಇಲ್ಲಿ ಅಭಿವ್ಯಕ್ತಗೊಂಡಿವೆ ಎಂದು ಹೇಳಿದ್ದಾರೆ. ಸಂಪಾದಕರಾದ ವಾಮನ ಬೇಂದ್ರೆಯವರು ’ಭಾವ ಎಂದರೆ ಇರುವಿಕೆ ಅಭಾವ ಎಂದರೆ ಇಲ್ಲದಿರುವಿಕೆ.’ಇರುವಿಕೆಯ ಚಿಂತನೆಗಳ ಗೀತ ಬೇಂದ್ರೆಕಾವ್ಯ. ಬೇಂದ್ರೆಯವರು ೧೯೮೧ರಲ್ಲಿ ಹೇಗಿದ್ದರು? ಬೇಂದ್ರೆ ಮತ್ತು ಅಂಬಿಕಾತನಯದತ್ತರ ಸಂಬಂಧ ಭಾವದ ತುಡಿತ ಹೇಗಿತ್ತು ಎಂಬುದಕ್ಕೆ ಸಾಕ್ಷಿ ಈಗ ಪ್ರಕಟಗೊಳ್ಳುವ ಸಂಕಲನ ಎಂದಿದ್ದಾರೆ. ದೇಹಭಾವ, ಮಿತ್ರಭಾವ, ಪುತ್ರಭಾವ,ಪುತ್ರಿಭಾವ, ಯುವತಿ ಭಾವ,ನೈಧನ ಭಾವ,ಧರ್ಮ,ಅರ್ಥ,ಕಾಮ, ಮೋಕ್ಷ ಎಂಬ ಚತುರ್ವಿದ ಪುರುಷಾರ್ಥಗಳ ಕರ್ತೃವಾದ ಭಗವಂತ=ಚತುರ್ಭಾವ ಮತ್ತು ಭಕ್ತ ಎಂಬ ಸಂಬಂಧ ಭಾವ, ದಾಸ್ಯಭಾವ, ಲಾಭ ಮತ್ತು ವ್ಯಯ ಭಾವಗಳ ಸಂಕಲನ ಈ ಕಾವ್ಯವಾಗಿದೆ. ಈ ಸಂಕಲನದಲ್ಲಿ ಕತ್ತಲೆ ಮತ್ತು ಬೆಳಕಿನ ಚಿಂತನೆ ಸಾಕಷ್ಟಿದೆ. ಮೊದಲನೆಯ ಕವಿತೆ ಆತ್ರೇಯ ದತ್ತ ಬಹಳ ಮಾರ್ಮಿಕವಾದ ಕವನ. ಒಂದು ರಿತಿಯಲ್ಲಿ ಇದು ಬೇಂದ್ರೆಯವರ ಆತ್ಮಕಥೆ.’ಹಣ್ಣಿನ್ಯಾಗ ಅಡಗಿದ ಹೂವು’ ಅವರ ಜೀವನ ಗಾಥೆ.ಅವರು ನಿರಂತರವಾಗಿ ನೇಕಾರನಂತೆ ನೂಲುತ್ತ ಸಾಗಿದ್ದರು.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books