ಕಾವ್ಯಭಾಷೆ

Author : ಎಂ. ಎಚ್. ಕೃಷ್ಣಯ್ಯ

Pages 204

₹ 95.00




Year of Publication: 2000
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080-26617100/2667755

Synopsys

ಹಿರಿಯ ಸಾಹಿತಿ ಎಂ.ಎಚ್. ಕೃಷ್ಣಯ್ಯ ಅವರ ಕೃತಿ-ಕಾವ್ಯಭಾಷೆ. ಅನುಭವವೆಂಬುದೇ ಒಂದು ಪ್ರಕ್ರಿಯೆ, ಮನೋಗತವಾಗದೆ ಅರ್ಥ ದಕ್ಕುವುದಿಲ್ಲ ಎನ್ನುವ ಲೇಖಕರು, ಈ ಕೃತಿಯಲ್ಲಿ ಅಭಿವ್ಯಕ್ತಿ- ಕಾವ್ಯ- ಭಾಷೆಯ ಸಂಬಂಧದ ಕುರಿತು ಚರ್ಚಿಸಿದ್ದಾರೆ.  ನಿತ್ಯದ ಬದುಕಿನಲ್ಲಿ ಕಾವ್ಯಭಾಷೆ ಹೇಗೆಲ್ಲಾ ಹರಡಿಕೊಂಡಿರುತ್ತದೆ ಎಂಬುದನ್ನು ವಿವರಿಸುತ್ತದೆ. ಸಂಹವನ, ವ್ಯವಹಾರದಂತಹ ಕ್ಷೇತ್ರಗಳಲ್ಲಿ ಕಾವ್ಯಭಾಷೆಯನ್ನು ಹುಡುಕುವ ಯತ್ನದಂತೆಯೂ ಗ್ರಂಥ ಇದೆ. 

ಪಂಪ;  ಒಂದು ಮರು ಪರಿಶೀಲನೆ, ಆದಿಪುರಾಣ, ವಚನಗಳಲ್ಲಿ ರೂಪಕ ಚಿತ್ರಗಳು, ಬಿಎಂಶ್ರೀ: ಹೊಂಗನಸುಗಳು, ಜೀವನ ಚರಿತ್ರಾಕಾರರಾಗಿ ಡಿ.ವಿ.ಜಿ, ಶಂಬಾ.ಜೋಶಿಯವರ ವಿಚಾರ ಸಾಹಿತ್ಯ: ಸ್ಥೂಲ ನೋಟ, ಶ್ರೀ ರಾಮಾಯಣ ದರ್ಶನಂ: ಭಾಷೆ, ಶೈಲಿ, ಛಂದಸ್ಸು, ಕುವೆಂಪು ಸಾಹಿತ್ಯದಲ್ಲಿ ಚಿತ್ರಕಲೆ, ಕುವೆಂಪು ಅವರ ಸಣ್ಣ ಕಥೆ-ಚಿತ್ರಗಳಲ್ಲಿ ಉಪಮಾಶ್ರೀ, ಶ್ರೀ ಹರಿಚರಿತೆಯಲ್ಲಿ ಕಥನ ತಂತ್ರ, ಕಣವಿಯವರ ಕಾವ್ಯಭಾಷೆ, ಬಿ.ಎ. ಸನದಿಯವರ ಕವಿ-ಕಾವ್ಯ ಕಲ್ಪನೆ, ಮಗನಿಗೊಂದು ಪತ್ರ ಹೀಗೆ ವಿವಿಧ ಅಧ್ಯಾಯಗಳನ್ನು ಈ ಕೃತಿ ಒಳಗೊಂಡಿದೆ. 

ಭಾಷೆಯ ಸ್ವಭಾವ, ವರ್ತನೆ ವಿಚಿತ್ರ. ಭಾಷೆಗೆ ಬಿಚ್ಚಿಡುವ ಸಾಮರ್ಥ್ಯವಿದೆ. ಬಚ್ಚಿಡುವ ಸಾಮರ್ಥ್ಯವೂ ಇದೆ. ದಿನನಿತ್ಯದ ವ್ಯಾವಹಾರಿಕ ಸಂಪರ್ಕ-ಸಂವಹನ ಮಾಧ್ಯಮವಾಗಿಯೂ, ಕಾವ್ಯದಲ್ಲಿ ಅಭಿವ್ಯಕ್ತಿಯ ಭಾಷೆಯಾಗಿಯೂ ಅದರ ಸ್ವಣಾವದ, ಶಕ್ತಿಯ ಅರಿವಾಗುತ್ತದೆ. ಎಲ್ಲ ಕಲೆಗಳಲ್ಲೂ ಅಭಿವ್ಯಕ್ತಿಯೇ ವಿಶಿಷ್ಟ ಭಾಷೆಯಾಗುತ್ತದೆ. ವ್ಯುಕ್ತ ರೇಖೆ ಬಣ್ಣಗಳಾಚೆ, ಮಾತು ಶಬ್ದಗಳಾಚೆ ಕಣ್ಣು ಹಾಯಬೇಕು,  ಕೃತಿಯ ಅನುಭವಕ್ಕೆ. ಅನುಭವ ಎಂಬುದೇ ಒಂದು ಪ್ರಕ್ರಿಯೆ. ಮನಗತವಾಗದೇ ಅರ್ಥ ದಕ್ಕುವುದಿಲ್ಲ. ಆ ಮೂಲಕ ಚಿಂತನೆಗೆ ಉಪಯುಕ್ತ ವಿಚಾರಗಳನ್ನು ನೀಡಿದ್ದಾರೆ.  
 

About the Author

ಎಂ. ಎಚ್. ಕೃಷ್ಣಯ್ಯ
(21 July 1937)

ಸಾಹಿತಿ, ವಿಮರ್ಶಕ ಪ್ರೊ. ಎಂ. ಎಚ್. ಕೃಷ್ಣಯ್ಯ ಅವರು (ಜನನ: 21-07-1937) ಮೈಸೂರಿನಲ್ಲಿ ಜನಿಸಿದರು. ತಂದೆ ಹುಚ್ಚಯ್ಯ, ತಾಯಿ ಕೆಂಪಮ್ಮ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ. ಎ ಮತ್ತು ಎಂ. ಎ. ಪದವೀಧರರು.  ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. 1979-83ರಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ನಿರ್ದೇಶನಾಲಯದ ಯುವ ಕರ್ನಾಟಕ ಹಾಗೂ ಸ್ಫೋರ್ಟ್ಸ್ ಅರೆನಾ ಪತ್ರಿಕೆಗಳಿಗೆ ಇವರನ್ನು ಸರ್ಕಾರವು ಸಂಪಾದಕರೆಂದು ನಿಯೋಜಿಸಿತ್ತು. ಲಲಿತ ಕಲಾ ಅಕಾಡೆಮಿಯ `ಕರ್ನಾಟಕ ಕಲಾವಾರ್ತೆ '(1987-92) ಗೌರವ ಸಂಪಾದಕರು ಮತ್ತು ಕಲಾ ಪಂಥ ಮಾಲೆಯ ‘ಎಕ್ಸ್ ಪ್ರೆಷನಿಸಂ’ ಹಾಗೂ ‘ಇಂಪ್ರೆಷನಿಸಂ’ ಪುಸ್ತಕಗಳಿಗೆ ...

READ MORE

Related Books