ಕೊಡಗಿನ ಖಗರತ್ನಗಳು

Author : ಎಸ್. ವಿ. ನರಸಿಂಹನ್

Pages 300

₹ 250.00
Published by: ಕೂರ್ಗ್ ವೈಲ್ಡ್‌ಲೈಫ್ ಸೊಸೈಟಿ
Address: ಕೊಡಗು
Phone: 08274-257484

Synopsys

ಇದು ಕೊಡಗಿನ ಪಕ್ಷಿ ಸಂಕುಲದ ಮಾಹಿತಿಯ ಕೈ ಪಿಡಿಯಾಗಿದೆ. 310 ಪ್ರಭೇದಗಳ ಸಚಿತ್ರ ವಿವರಣೆ ಇಲ್ಲಿದೆ. ಈ ಕೃತಿಯ ವಿಶೇಷವೆಂದರೆ, ಪಕ್ಷಿಗಳ ಕುರಿತಂತೆ ಇಲ್ಲಿ ಇಂಗ್ಲಿಷ್‌ನಲ್ಲೂ, ಕನ್ನಡ ದಲ್ಲೂ ಏಕಕಾಲದಲ್ಲಿ ಮಾಹಿತಿಯನ್ನು ನೀಡಲಾಗಿದ್ದು, ಇದು ಕೃತಿಯ ಎರಡನೆ ಪರಿಷ್ಕೃತ ವಿಸ್ತತ ಆವೃತ್ತಿಯಾಗಿದೆ. ಬರೀ 4,100 ಚದರ ಕಿ.ಮೀ. ವಿಸ್ತೀರ್ಣವುಳ್ಳ ಜಿಲ್ಲೆಯಾದ ಕೊಡಗು ಪ್ರಪಂಚದಲ್ಲಿಯೇ ಜೀವ ವೈವಿಧ್ಯಕ್ಕೆ ಹೆಸರಾದ ಪಶ್ಚಿಮಘಟ್ಟಗಳಿಂದಾವೃತವಾಗಿದೆ. ಕೊಡಗಿನ ಹಕ್ಕಿಗಳ ಕುರಿತಂತೆ ನೀವು ಪಡೆಯುವ ವಿವರಗಳು, ಆ ಪ್ರದೇಶದ ವೈವಿಧ್ಯವನ್ನೂ ಸಂಕೇತಿಸುತ್ತದೆ. ಎಲ್ಲ ಪಕ್ಷಿಗಳೂ ಎಲ್ಲ ಕಡೆಗಳಲ್ಲೂ ನೆಲೆಯೂರುವುದಿಲ್ಲ. ಒಂದು ಹಕ್ಕಿಯ ಬದುಕು, ಆಹಾರ ಕ್ರಮದ ಜೊತೆಗೆ ಆ ಪ್ರದೇಶ ಸಂಬಂಧವನ್ನು ಹೊಂದಿದೆ. ಆದುದರಿಂದ, ಯಾವ ಪ್ರದೇಶದಲ್ಲಿ ಯಾವ ಪ್ರಾಣಿ ಪಕ್ಷಿಗಳು ಹೆಚ್ಚಾಗಿವೆ ಎನ್ನುವುದರ ಆಧಾರದಲ್ಲಿ ಆ ಪರಿಸರದ ವೈಶಿಷ್ಟವನ್ನು ನಾವು ಗುರುತಿಸಬಹುದು. ಕೊಡಗಿನ ಒಟ್ಟು 310 ಪಕ್ಷಿ ಪ್ರಭೇದಗಳ ಚಿತ್ರಗಳು ಮತ್ತು ಮಾಹಿತಿಗಳನ್ನು, ಜೊತೆ ಜೊತೆಯಲ್ಲಿ ಒತ್ತಟ್ಟಿಗೆ ಕಾಣಬಹುದು. ಇದು ಆಯಾ ಕುಟುಂಬದ ಹಕ್ಕಿಗಳನ್ನು ಹೋಲಿಸಿ ನೋಡಲು ಮತ್ತು ಹೆಚ್ಚು ಶ್ರಮವಿಲ್ಲದೆ ಓದಲು ಸಹಕಾರಿಯಾಗಿದೆ.

About the Author

ಎಸ್. ವಿ. ನರಸಿಂಹನ್

ವಿರಾಜಪೇಟೆಯ ವೈದ್ಯ ಡಾ. ಎಸ್.ವಿ. ನರಸಿಂಹನ್ ಪಕ್ಷಿ ತಜ್ಞರೂ ಹಾಗೂ  ಪರಿಸರ ಸಂವಹನಕಾರರೂ ಹೌದು.  ವೃತ್ತಿಯಲ್ಲಿ ವೈದ್ಯರಾಗಿರುವ  ಎಸ್. ವಿ. ನರಸಿಂಹನ್ ಪರಿಸರ ಪ್ರೇಮಿ ಹಾಗೂ ಅತ್ಯುತ್ತಮ ಚಿತ್ರಕಾರರು. ಅವರು ಪ್ರತಿ ವರ್ಷ ವನ್ಯಜೀವಿ ಸಂದೇಶಗಳಿರುವ ಸಾವಿರಾರು ಕಾರ್ಡುಗಳನ್ನು ಗೆಳೆಯರಿಗೆ, ಆಸಕ್ತರಿಗೆ ಅಕ್ಟೋಬರ್ ನಲ್ಲಿ `ವನ್ಯಜೀವಿ ಸಪ್ತಾಹ’ದ ಸಮಯದಲ್ಲಿ ಕಳುಹಿಸುವ ಯೋಜನೆ ಹಾಕಿಕೊಂಡಿದ್ದಾರೆ.   ಆ ಕಾರ್ಡುಗಳಲ್ಲಿ ಪಕ್ಷಿ, ಪ್ರಾಣಿಗಳ ಚಿತ್ರಗಳನ್ನು ಅತ್ಯದ್ಭುತವಾಗಿ ರಚಿಸಿರುತ್ತಾರೆ. ಅವು ಸಂಗ್ರಹಿಸಬಲ್ಲ ಸುಂದರ ಕಾರ್ಡುಗಳು. ಅವರ ನಿಸರ್ಗ ಪ್ರೇಮ ಹಾಗೂ ಅದಕ್ಕಾಗಿ ಅವರು ವಹಿಸುವ ಶ್ರಮದ ಬಗ್ಗೆ ಮೆಚ್ಚುವಂತದ್ದು.    ...

READ MORE

Related Books