ಕೀಳರಿಮೆ : ಏನು? ಏಕೆ? ಹೇಗೆ?

Author : ಜಯಪ್ರಕಾಶ್ ನಾಗತಿಹಳ್ಳಿ

₹ 85.00




Year of Publication: 2018
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ವ್ಯಕ್ತಿತ್ವ ವಿಕಸನ ತರಬೇತುದಾರರಾದ ಲೇಖಕ ಜಯಪ್ರಕಾಶ ನಾಗತಿಹಳ್ಳಿ ಅವರ ಕೃತಿ-ಕೀಳರಿಮೆ. ನಮ್ಮ ವ್ಯಕ್ತಿತ್ವದ ವಿಭಿನ್ನ ಗುಣ-ಲಕ್ಷಣಗಳು ವಿಕಸನ ಹೊಂದಬೇಕಾದರೆ ಮೊದಲು ನಮ್ಮಲ್ಲಿಯ ಕೀಳರಿಮೆಯಿಂದ ಹೊರಬೇಕು. ಮತ್ತೊಬ್ಬರೊಂದಿಗೆ ಹೋಲಿಸಿಕೊಂಡು ನಮ್ಮ ಸಾಮರ್ಥ್ಯವನ್ನು ಕೀಳಾಗಿ ಕಾಣಬಾರದು. ನಮ್ಮ ದೌರ್ಬಲ್ಯಗಳತ್ತಲೇ ಹೆಚ್ಚು ಗಮನ ನೀಡುವುದು ಸರಿಯಲ್ಲ. ನಮ್ಮ ಪ್ರತಿಭೆಯ ಅಭಿವ್ಯಕ್ತಿ ಕುರಿತಂತೆ ನಮಗೆ ತುಂಬಾ ವಿಶ್ವಾಸ ಇಟ್ಟುಕೊಳ್ಳಬೇಕು. ತಪ್ಪಿದಲ್ಲಿ, ನಮ್ಮ ಪ್ರತಿಭೆಯನ್ನು ನಾವೇ ಕೊಲೆ ಮಾಡಿಕೊಂಡಂತೆ. ಕೀಳರಿಮೆಯಿಂದ ಹೊರಬರಲು ಮೊದಲು ನಮ್ಮ ಬಗ್ಗೆ ನಮಗೆ ಪೂರ್ಣ ವಿಶ್ವಾಸದೊಂದಿಗೆ ಮುನ್ನಡೆಯುವುದನ್ನು ಕಲಿಯಬೇಕು. ಇಂತಹ ಸಲಹೆ, ಮಾರ್ಗದರ್ಶನಗಳ ಮೂಲಕ ಓದುಗರ ವಿಶ್ವಾಸವನ್ನು ಹೆಚ್ಚಿಸುವ ಹಾಗೂ ಅ ದಿಸೆಯಲ್ಲಿ ಪ್ರೇರಣೆ ನೀಡುವ ಕೃತಿ ಇದು.

About the Author

ಜಯಪ್ರಕಾಶ್ ನಾಗತಿಹಳ್ಳಿ

ಕನ್ನಡದ ಬಗ್ಗೆ ಅಪಾರ ಪ್ರೀತಿಯುಳ್ಳ ಜಯಪ್ರಕಾಶ್ ನಾಗತಿಹಳ್ಳಿ ಅವರು ಮೂಲತಃ ಸಕ್ಕರೆ ನಾಡಿನ ಮಂಡ್ಯದವರು. ಇವರು ಬೆಂಗಳೂರು ವಿಶ್ವವಿದ್ಯಾಲಯದ ವಿಜ್ಞಾನ ಪದವಿ, ತಾಂತ್ರಿಕ ಶಿಕ್ಷಣ ಮಂಡಳಿಯ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ, ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಪದವಿ ಪಡೆದುಕೊಂಡಿದ್ದಾರೆ. ಬೆಂಗಳೂರು ದೂರದರ್ಶನದ ಮಾರ್ಗವಾಚಕರಾಗಿ, ಚಂದನ ವಾಹಿನಿಯ ಸಂದರ್ಶಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಬೆಂಗಳೂರು ದಕ್ಷಿಣ ಜೇಸೀಸ್‌ನ ಅಧ್ಯಕ್ಷರಾಗಿದ್ದ ಇವರು, ಭಾರತೀಯ ಜೇಸೀಸ್‌ನ ವಲಯ-14ರ ಸಂಯೋಜನಾಧಿಕಾರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ. ವ್ಯಕ್ತಿತ್ವ ವಿಕಸನದ ಬಗೆಗೆ ಕನ್ನಡದಲ್ಲಿ ಪ್ರಪ್ರಥಮವಾಗಿ ‘ನಡೆ-ನುಡಿ' ವ್ಯಕ್ತಿತ್ವ ವಿಕಸನದ ಅಲೆಗಳು ಎಂಬ ಧ್ವನಿಸುರುಳಿಯನ್ನು ಹೊರತರುವುದು ಇವರ ಹೆಗ್ಗಳಿಕೆ. ಆನಂತರ ...

READ MORE

Related Books