ಕೇಳುತ್ತ ನಡೆಯೋಣ

Author : ಕೇಶವ ಮಳಗಿ

Pages 624

₹ 300.00

Buy Now


Year of Publication: 2019
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ ಆವರಣ ಹಿಂಭಾಗ ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 202 - 23183311, 23183312

Synopsys

ಮೆಕ್ಸಿಕೋ ನಾಡಿನ ಮೂಲವಾಸಿಗಳ ಹೋರಾಟವನ್ನು ಪ್ರತಿನಿಧಿಸುವ ಜಪತಿಸ್ತ ಎಂಬ ಹೆಸರಿನ ಚಳವಳಿಯಲ್ಲಿ Asking, We walk ಎಂಬುದು ಧ್ಯೇಯವಾಕ್ಯ ವಾಗಿ ಬಳಸಲಾಗಿದೆ. ಹೋರಾಟದ ಗುರಿ ಮತ್ತು ದಾರಿಗಳೆರಡನ್ನೂ ಹೇಳುವ ವಾಕ್ಯವಿದು. ಮೂಲ ಕೃತಿ ಸಂಪುಟದಿಂದ ಕೆಲವು ಬರಹಗಳನ್ನು ಈಗ ಕನ್ನಡಕ್ಕೆ ಅನುವಾದಿಸಲಾಗಿದೆ.. Asking, We walk : South as new political Imaginary ಎಂಬುದು ನಾಲ್ಕು ಸಂಪುಟಗಳಲ್ಲಿರುವ ಒಂದು ಪುಸ್ತಕ. ಡಾ. ಕಾರಿನ್ ಕುಮಾರ್‍ ಅವರು ಈ ಕೃತಿ ಸರಣಿಯ ಮುಖ್ಯ ಸಂಪಾದಕರು. ಇವರೊಡನೆ ಜಾಗತಿಕ ನೆಲೆಯ ಹಲವು ಚಿಂತಕ – ಹೋರಾಟಗಾರರು ಈ ಕೃತಿಯ ಸಂಪಾದನಾ ಕಾರ್ಯವನ್ನು ಮಾಡಿದ್ಧಾರೆ.

ಲೋಕ ವ್ಯವಹಾರವನ್ನು ಬಣ್ಣಿಸುವವರು ಪೂರ್ವ-ಪಶ್ಚಿಮ ಎಂಬ ನೆಲೆಗಳನ್ನು ಬಳಸುವಂತೆ ಉತ್ತರ- ದಕ್ಷಿಣ ಎಂಬ ನೆಲೆಗಳನ್ನು ಬಳಸುತ್ತಾರೆ. ಉತ್ತರದ ಲೋಕ ವ್ಯವಹಾರಗಳನ್ನು ಹಲವು ಬಗೆಯಲ್ಲಿ ಪ್ರಶ್ನಿಸುತ್ತಾ ಅದನ್ನು ಎದುರಿಸುತ್ತ, ನಡೆದಿರುವ ದಕ್ಷಿಣ ಲೋಕದ ಹೋರಾಟಗಳು ಮತ್ತು ಅವುಗಳ ಹಿಂದಿರುವ ಪ್ರೇರಣೆಗಳನ್ನು ದಾಖಲಿಸುವುದು ’ಕೇಳುತ್ತ ನಡೆಯೋಣ’ ಕೃತಿಯಲ್ಲಿನ ಬರಹಗಳ ಮುಖ್ಯ ಉದ್ದೇಶವಾಗಿದೆ.

About the Author

ಕೇಶವ ಮಳಗಿ

ಸದ್ಯ ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯಲ್ಲಿ ಬೋಧಕರಾಗಿರಾಗಿರುವ ಕೇಶವ ಮಳಗಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾಗಿರುವ ಮಳಗಿ ಅವರು 80ರ ದಶಕದಲ್ಲಿ ತಮ್ಮ ಬರವಣಿಗೆ ಆರಂಭಿಸಿದರು. ತಮ್ಮ ವಿಶಿಷ್ಟ ನುಡಿಗಟ್ಟು, ಶೈಲಿ, ದನಿ ಬನಿಯ ಕತೆಗಳಿಂದ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಮಳಗಿ ಅವರು ಜನಸಾಮಾನ್ಯರು ಬದುಕನ್ನು ಘನತೆ, ಪ್ರೀತಿಯಿಂದ ಜೀವಿಸುವ ರೀತಿಯನ್ನು ಕತೆಗಳಲ್ಲಿ ಚಿತ್ರಿಸುತ್ತಾರೆ. ಆಪ್ತವಾಗಿ ಕತೆ ಹೇಳುವಂತೆ ಬರೆಯುವ ಮಳಗಿ ಅವರ 'ಕಡಲ ತೆರೆಗೆ ದಂಡೆ', 'ಮಾಗಿ ಮೂವತ್ತೈದು', 'ವೆನ್ನೆಲ ದೊರೆಸಾನಿ', 'ಹೊಳೆ ...

READ MORE

Related Books