ಕೆಂಪು ಮೇ ದಿನ

Author : ಬಿ.ಆರ್‌. ಮಂಜುನಾಥ್‌

Pages 96

₹ 80.00
Year of Publication: 2020
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಬೆಂಗಳೂರು
Phone: 08022161900

Synopsys

ಜನಗತ್ತಿನಾದ್ಯಂತ ಮೇ ಒಂದರಂದು ಆಚರಿಸುವ ‘ಮೇ ದಿನ’ದ ವಸ್ತುವುಳ್ಳ ನಾಟಕ ‘ಕೆಂಪು ಮೇ ದಿನ’. ಈ ನಾಟಕಕ್ಕೆ ಮುನ್ನುಡಿ ಬರೆಯುತ್ತಾ ಬರಗೂರು ರಾಮಚಂದ್ರಪ್ಪ ಅವರು ‘`ಮೇ ದಿನಾಚರಣೆಗೆ ಮೂಲ ಕಾರಣವಾದ ಚಳವಳಿಯ ಚಿತ್ರಣವನ್ನು ಚಾರಿತ್ರಿಕ ನೆಲೆಯಲ್ಲಿ ಕಟ್ಟಿಕೊಡುವ ನಾಟಕ ಇದಾಗಿದೆ. ಈ ನಾಟಕದಲ್ಲಿ ಗಮನಿಸಬೇಕಾದ ಒಂದು ಮುಖ್ಯ ವಿಷಯವೆಂದರೆ, ಪಾತ್ರಗಳ ವೈವಿಧ್ಯತೆ. ಇಲ್ಲಿ ಕಾರ್ಮಿಕ ನಾಯಕರಿದ್ದಾರೆ, ಕಾರ್ಮಿಕರಿದ್ದಾರೆ, ಮಹಿಳೆ ಮಕ್ಕಳಿದ್ದಾರೆ, ಉದ್ಯಮಿಯ ಮಗಳು ‘ನಿನಾ’ ಇದ್ದಾಳೆ. ಕಂಠಪಾಠ ಒಪ್ಪಿಸದೆ ಸಂದರ್ಭೋಚಿತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಇವರೆಲ್ಲ ಪರಸ್ಪರ ಅನುಸಂಧಾನಿಸುತ್ತ ನಿರ್ದಿಷ್ಟ ಗುರಿಯತ್ತ ಸಾಗುತ್ತಾರೆ. ಸೈದ್ಧಾಂತಿಕ ಅರಿವು ಮತ್ತು ಹೋರಾಟಕ್ಕೆ ಭೌಗೋಳಿಕ ಗಡಿಗಳಿಲ್ಲವೆಂಬ ಸಾಂಕೇತಿಕಾರ್ಥವೂ ಇಲ್ಲಿದೆ. ಇಂತಹ ಕೃತಿ ರಚನೆಗೆ ಅಂದು ನಡೆದ ಘಟನೆಗಳ ವಾಸ್ತವದ ಅರಿವು ಅಗತ್ಯ. ಅರಿವಿಗೆ ಅಧ್ಯಯನ ಅಗತ್ಯ; ಅಧ್ಯಯನಕ್ಕೆ ತಾತ್ವಿಕ ಗ್ರಹಿಕೆಯ ಆಯಾಮವೂ ಅಗತ್ಯ. ಆಗ ಮಾತ್ರ ಚಾರಿತ್ರಿಕ ಸಂದರ್ಭವನ್ನು ಅಂದು-ಇಂದುಗಳನ್ನು ಒಂದುಗೂಡಿಸಿ ಮರು ಸೃಷ್ಟಿಸಲು ಸಾಧ್ಯ. ಇಂತಹ ಸಾಧ್ಯತೆಯನ್ನು ಸತ್ಯವಾಗಿಸುವುದಕ್ಕೆ ಸಮಕಾಲೀನ ಪ್ರಜ್ಞೆಯೂ ಬೇಕು, ಚಾರಿತ್ರಿಕ ಪ್ರಜ್ಞೆಯೂ ಬೇಕು. ಈ ಉಭಯ ಪ್ರಜ್ಞೆಗಳನ್ನು ಅಂತರ್ಗತ ಮಾಡಿಕೊಂಡ ಅಧ್ಯಯನ ಮತ್ತು ಅರಿವಿನ ಆಯಾಮ ಮಂಜುನಾಥ್‌ ಅವರಿಗಿದೆ’. ಎಂದಿದ್ದಾರೆ.

About the Author

ಬಿ.ಆರ್‌. ಮಂಜುನಾಥ್‌
(21 December 1940)

ಲೇಖಕ ಬಿ. ಆರ್‌. ಮಂಜುನಾಥ್ ಅವರು ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಎಡಪಂಥೀಯ ವಿದ್ಯಾರ್ಥಿ ಚಳುವಳಿಗೆ, ಸಾಂಸ್ಕೃತಿಕ ಆಂದೋಲನಕ್ಕೆ ಧುಮುಕಿದವರು. ಜಾನ್ ರೀಡ್ ಅವರ 'ಟೆನ್ ಡೇಸ್ ದಟ್ ಶುಕ್ ದ ವರ್ಲ್‌, ಸಮಾಜವಾದಿ ವೈದ್ಯಕೀಯದ ಕುರಿತಾದ 'ರೆಡ್ ಮೆಡಿಸಿನ್', ಇ.ಎಚ್.ಕಾರ್‌ ಅವರ 'ವಾಟ್ ಈಸ್ ಹಿಸ್ಟರಿ' ಅವರ ಅನುವಾದಿತ ಕೃತಿಗಳಲ್ಲಿ ಕೆಲವು. ವಿವಿಧ ಸಾಂಸ್ಕೃತಿಕ, ವಿದ್ಯಾರ್ಥಿ-ಯುವಜನ ಪತ್ರಿಕೆಗಳ ಸಂಪಾದಕರಾಗಿದ್ದ ಅವರು ಭಗತ್ ಸಿಂಗ್‌ರ ಕುರಿತು ಪುಸ್ತಕಗಳನ್ನು ಬರೆದಿರುವುದಲ್ಲದೆ ಅನೇಕ ನಾಟಕ, ಬೀದಿ ನಾಟಕಗಳನ್ನು ಸಹ ರಚಿಸಿ ಆಡಿಸಿದ್ದಾರೆ. ಪ್ರಸ್ತುತ ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾಗಿದ್ದು ವಿವಿಧ ಜನಪರ ಆಂದೋಲನಗಳಲ್ಲಿ ...

READ MORE

Related Books