ಕೆಂಡದ ಬೆರಗು

Author : ಬಸವಣ್ಣ ಎಂ. ಎಸ್

Pages 128

₹ 100.00




Year of Publication: 2016
Published by: ಉಷಾ ಪ್ರಕಾಶನ
Address: ಹೆಬ್ಬಾಳ ಎರಡನೆ ಹಂತ, ರೇಣುಕಾ ಎಲ್ಲಮ್ಮ ದೇವಸ್ಥಾನದ ಹತ್ತಿರ, ಮೈಸೂರು- 570017
Phone: 9880939952

Synopsys

‘ಕೆಂಡದ ಬೆರಗು’ ಬಸವಣ್ಣ ಎಂ.ಎಸ್. ಅವರು ಸಾಹಿತಿ ಡಾ. ವಿ. ಮುನಿವೆಂಕಟಪ್ಪ ಅವರ ಸಾಹಿತ್ಯಾವಲೋಕನ ಮಾಡಿದ ಕೃತಿ ಇದು.  ಹೋರಾಟದ ಹೊತೆಗೆ ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆ ಮತ್ತು ಸಾಮಾಜಿಕ ಸಮಾನತೆಗಾಗಿ ತಮ್ಮ ಅಭಿವ್ಯಕ್ತಿಗಳನ್ನು, ಚಿಂತನೆಗಳನ್ನು ಹೊರ ಹಾಕಿದ ಹಲವಾರು ಸಾಹಿತಿಗಳಲ್ಲಿ ವಿ ಮುನಿವೆಂಕಟಪ್ಪ ಅವರೂ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪ್ರಮುಖರು. ದಲಿತ ಬಂಡಾಯದ ಸಂದರ್ಭದಲ್ಲಿ ಗುರುತಿಸಿಕೊಂಡ ವಿ ಮುನಿವೆಂಕಟಪ್ಪ ಅವರು ವೃತ್ತಿಯಲ್ಲಿ ಸಹಾಯಕ ಕೃಷಿ ಅಧಿಕಾರಿಯಾಗಿದ್ದರೂ ಪ್ರವೃತ್ತಿಯಲ್ಲಿ ಕವಿ, ಹೋರಾಟಗಾರ ಚಿಂತಕರು. ಇವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೆಂಡದ ನಡುವೆ, ಸ್ವಾಭಿಮಾನದ ಬೀಡಿಗೆ, ಕಾಡು ಕಣಿವೆಯ ಹಕ್ಕಿ, ಬುದ್ಧ ಮತ್ತು ಅಂಗುಲಿ ಮಾಲ ಎಂಬ ಕವನ ಸಂಕಲನಗಳನ್ನು, ಬಾಲಕ ಅಂಬೇಡ್ಕರ್, ಮಹಾಚೇತನ ಅಂಬೇಡ್ಕರ್, ಎಂಬ ಮಕ್ಕಳ ನಾಟಕಗಳನ್ನು 'ಐಕ್ಯಗೀತೆ' ಎಂಬ ಮಕ್ಕಳ ಕಾವ್ಯವನ್ನು ಹಾಗೂ 'ದಲಿತ ಚಳವಳಿ-ಒಂದು ಅವಲೋಕನ' 'ದಲಿತ ಸಾಹಿತ್ಯ ದರ್ಶನ' 'ದಲಿತ ಚೇತನ' 'ಬಹುಜನ ಕಾವ್ಯ', 'ಮತಾಂತರ ಮತ್ತು ಇತರ ಲೇಖನಗಳು', 'ದಲಿತ ಸಾಹಿತ್ಯ ಸಂವಾದ', 'ದಲಿತ ಚಳವಳಿ ಮತ್ತು ಸಾಹಿತ್ಯ' ಎಂಬ ಸಂಪಾದಿತ ಕೃತಿಗಳನ್ನು ಮತ್ತು 'ಅಂತ್ಯಜನ ಅಂತರಂಗ' ಎಂಬ ಆತ್ಮಕಥೆಯನ್ನು 'ದಲಿತ ಚಳವಳಿ ಚರಿತ್ರೆ' ಎಂಬ ಹನ್ನೊಂದು ಸಂಪುಟಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಬಸವಣ್ಣ ಎಸ್ ಮೂಕಹಳ್ಳಿ ಅವರು ವಿ ಮುನಿವೆಂಕಟಪ್ಪ ಅವರ ಸಾಹಿತ್ಯ ಸೇವೆ ಮತ್ತು ಹೋರಾಟಗಳನ್ನು ಗುರುತಿಸಿ ಅವರ ಜೀವನ, ಕಾವ್ಯಗಳು, ಮಕ್ಕಳ ನಾಟಕಗಳು ಸಂಪಾದಿತ ಕೃತಿಗಳು ಹಾಗೂ ಅಂತ್ಯಜನ ಅಂತರಂಗ ಆತ್ಮಕಥೆಯಲ್ಲಿನ ಸಾಮಾಜಿಕ, ಸಾಂಸ್ಕೃತಿಕ ವೈವಿಧ್ಯತೆಗಳನ್ನು ಶೋಧಿಸುವುದರ ಜೊತೆಗೆ ಅವರ ಸಾಹಿತ್ಯದ ಆಶಯಗಳನ್ನು ಅವರ ಬಹುಜನಪ್ರಜ್ಞೆಯ ಪರಿಕಲ್ಪನೆಗಳನ್ನು ತಮ್ಮ ಈ ‘ಕೆಂಡದ ಬೆರಗು’ ಸಂಶೋದನಾ ಕೃತಿಯ ಮೂಲಕ ಮಾಡಿದ್ದಾರೆ..

 

About the Author

ಬಸವಣ್ಣ ಎಂ. ಎಸ್
(01 June 1987)

ಲೇಖಕ ಬಸವಣ್ಣ ಎಸ್ ಮೂಕಹಳ್ಳಿ ಅವರು ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲೂಕಿನ ಕೆ.‌ಮೂಕಹಳ್ಳಿ ಗ್ರಾಮದವರು. ತಂದೆ ಸುಬ್ಬಯ್ಯ, ತಾಯಿ ಶಿವಮ್ಮ. ತಮ್ಮ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ ಶಿಕ್ಷಣವನ್ನು ಕೆ.‌ಮೂಕಹಳ್ಳಿ, ಮಂಗಲ, ಕುದೇರು, ಚಾಮರಾಜನಗರದಲ್ಲಿ ಪೂರೈಸಿಕೊಂಡರು.  ಮೈಸೂರಿನ ಬಿಜಿಎಸ್ ಕಾಲೇಜಿನಲ್ಲಿ ಬಿಇಡಿ ಪದವೀಧರರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಫಿಲ್ ಪದವೀಧರರು. 2014-16 ರ ಅವದಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಹಾಗೂ ದೆಹಲಿಯ  ಐ.ಸಿ.ಎಸ್.ಎಸ್.ಆರ್.‌ ಸಂಯೋಜಿತ  'ತಳ ಸಮುದಾಯಗಳ ಪದಕೋಶ' ಯೋಜನೆಯಡಿ ಸಹ ಸಂಶೋಧಕರಾಗಿದ್ದರು. ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಚಾಮರಾಜನಗರದ  ಡಾ. ಬಿ ಆರ್ ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ, ಸುವರ್ಣ ಗಂಗೋತ್ರಿಯಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ.  ಕೃತಿಗಳು: ...

READ MORE

Related Books