ಕೆಂಡದ ಮಳೆ ಕರೆವಲ್ಲಿ

Author : ಸಾಸ್ವೆಹಳ್ಳಿ ಸತೀಶ್

Pages 164

₹ 130.00




Published by: ಹೊಂಗಿರಣ ಪ್ರಕಾಶನ
Address: ಚಂದ್ರಕಮಲ, 3ನೇ ಮುಖ್ಯರಸ್ತೆ, ಮೂರನೇ ತಿರುವು, ವಿಠ್ಠಲ ದೇವಸ್ಥಾನ ಹತ್ತಿರ,ಶರಾವತಿ ನಗರ, ಶಿವಮೊಗ್ಗ - 577201

Synopsys

ಸಾಸ್ವೆಹಳ್ಳಿ ಸತೀಶ್ ಅವರ ಕೆಂಡದ ಮಳೆ ಕರೆವಲ್ಲಿ ಕೃತಿಯು ಕುಂ.ವೀರಭದ್ರಪ್ಪ ಕಥೆಯಾಧಾರಿತ ನಾಟಕವಾಗಿದೆ. ಈ ಕೃತಿಗೆ ಎಂ.ಬಿ.ನಟರಾಜ್ ಬೆನ್ನುಡಿ ಬರೆದಿದ್ದು, ‘ಈ ರಂಗರೂಪದ ಕೃತಿ ಒಂದು ಅತ್ಯುತ್ತಮ ಪ್ರಯತ್ನ. ನಮ್ಮ ಗ್ರಾಮೀಣ ಬದುಕಿನ ಅನೇಕ ಕ್ರೂರ ಮುಖಗಳಲ್ಲಿ ಜಾತಿ ಮತದ ಕ್ರೌರ್ಯ ಬಲವಾಗಿ ಬೇರೂರಿದೆ. ಅದರ ಅವತಾರ ಯಾವಾಗ ಹೇಗೆ ಏರಿ ಬರುತ್ತದೆ ಎಂಬುದು ಹೇಳಲು ಅಸಾಧ್ಯ. ಇದರ ಮುಳ್ಳಿನ ಚಕ್ರಕ್ಕೆ ಸಿಲುಕಿಕೊಂಡ ಅಮಾಯಕರ ಪಾಡನ್ನು ಈ ಕಥೆ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಇಂಥದ್ದೊಂದು ದಬ್ಬಾಳಿಕೆಯ ಪ್ರಸಂಗದಲ್ಲಿ ಅಡಕವಾಗಿರುವ ಅನೇಕ ಸೂಕ್ಷ್ಮಗಳೊಂದಿಗೆ ಇದನ್ನು ರಂಗರೂಪಕ್ಕೆ ತಂದಿರುವುದು ಬಹುಮುಖ್ಯ ಕಾರ್ಯ. ಇದರ ಆಯ್ಕೆಯಲ್ಲಿ ಸಾಮಾಜಿಕ ಬದ್ಧತೆಯೂ ಇದೆ. ಅದರ ರಂಗಸಾಧ್ಯತೆಗಳನ್ನು ಅನ್ವೇಷಿಸಿಕೊಳ್ಳುತ್ತಾ, ಕಠೋರ ಸತ್ಯವೊಂದನ್ನು ಕಣ್ಣೆದುರು ನಿಲ್ಲುವಂತೆ ಮಾಡುವ ಪ್ರಯತ್ನವೂ ಇದೆ. ರಂಗರೂಪದ ಆರಂಭದಿಂದ ಮುಕ್ತಾಯದವರೆಗೂ ಕುತೂಹಲ, ಔಚಿತ್ಯವನ್ನು ಉಳಿಸಿಕೊಂಡು ನಾಟಕ ಕಟ್ಟಿರುವ ಕ್ರಿಯೆ ನಿಜಕ್ಕೂ ಸಾರ್ಥಕವಾಗಿದೆ ಎಂದಿದ್ದಾರೆ.

About the Author

ಸಾಸ್ವೆಹಳ್ಳಿ ಸತೀಶ್
(27 January 1967)

ಅಧ್ಯಾಪಕ ವೃತ್ತಿಯೊಂದಿಗೆ ಸೃಜನಶೀಲ ನಾಟಕ ಬರವಣಿಗೆ, ನಿರಂತರ ರಂಗ ಪ್ರಯೋಗ ಹೀಗೆ ನಾನಾ ಪ್ರವೃತ್ತಿಗಳಲ್ಲಿ ಬಿಡುವಿಲ್ಲದೆ ತಮ್ಮನ್ನು ತಾವು ತೊಡಗಿಸಿಕೊಂಡವರು ಸಾಸ್ವೆಹಳ್ಳಿ ಸತೀಶ್. ಶಿವಮೊಗ್ಗದವರು. (ಜನನ: 1967 ಜನೆವರಿ 27) ‘ಏಕಲವ್ಯ, ಕನಸಿನವರು, ಧನ್ವಂತರಿ ಚಿಕಿತ್ಸೆ, ದೇವರ ಹೆಣ, ಮದಗದ ಕೆಂಚವ್ವ, ಮೃತ್ಯು, ಕಡಿದಾಳು ಶಾಮಣ್ಣ, ಭಳಾರೆ ವಿಚಿತ್ರಂ!’ ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. ‘ನಾಗನ ಕಥೆ, ದೇವರ ಹೆಣ, ಕೆಂಡದ ಮಳೆ ಕರೆವಲ್ಲಿ ಉದಕವಾದವರ ಕಥೆ, ಸಂಸ್ಕಾರ, ಬೆಟ್ಟದಾಚೆ’ ಮುಂತಾದ ಕಥೆಗಳನ್ನು ರಂಗಕ್ಕೆ ಅಳವಡಿಸಿದ್ದಾರೆ.  ‘ಕರ್ಣ’ ಹಾಗೂ ‘ದಾರಾಶಿಕೋ’ ಏಕವ್ಯಕ್ತಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ...

READ MORE

Related Books