ಕೃಪಾಕರ- ಸೇನಾನಿ ನಾಡು ಕಂಡ ಇಬ್ಬರು ಅಪರೂಪದ ವನ್ಯಜೀವಿ ತಜ್ಞರು. ತಮ್ಮ ಬಹುಪಾಲು ಬದುಕನ್ನು ಕಾಡಿನಲ್ಲೇ ಕಳೆದ ಅವರು ಕೆನ್ನಾಯಿಗಳ ಕುರಿತು ಇಂಗ್ಲಿಷ್ ನಲ್ಲಿ ಸಾಕ್ಷ್ಯಚಿತ್ರವನ್ನೂ ನಿರ್ಮಿಸಿ ಅದು ನ್ಯಾಷನಲ್ ಜಿಯಾಗ್ರಫಿಕ್ ನಂತಹ ಪರಿಸರ ವಾಹಿನಿಗಳಲ್ಲಿ ಮೂಡಿಬಂದು ರೋಮಾಂಚನ ಮೂಡಿಸಿದ್ದೂ ಇದೆ.
ಅದೇ ಕೆನ್ನಾಯಿಗಳ ಕುರಿತಂತೆ ಕನ್ನಡದಲ್ಲಿ ಬರೆದ ಕೃತಿ ಇದು. ಆ ವನ್ಯಜೀವಿಗಳ ಅನಾಟಮಿಯನ್ನಷ್ಟೇ ಅವರು ಹೇಳದೆ ಚೆನ್ನ ಬೊಮ್ಮರಂತಹ ಕಾಡಿನ ಮಕ್ಕಳನ್ನೂ ಸೇರಿಸಿ ಕತೆ ಹೆಣೆದಿದ್ದಾರೆ. ಎಂದಿನಂತೆ ಈ ಇಬ್ಬರಿಗೆ ಮಾತ್ರ ಸಾಧ್ಯವಾಗುವ ಚೇತೋಹಾರಿ ನಿರೂಪಣಾ ಶೈಲಿ ಈ ಪುಸ್ತಕದಲ್ಲೂ ಇದೆ.