ಕೆಟ್ಟಿತ್ತು ಕಲ್ಯಾಣ

Author : ಎಂ.ಎಂ. ಕಲಬುರ್ಗಿ

Pages 88

₹ 60.00




Year of Publication: 2011
Published by: ಸಂವಹನ
Address: ನಗರ ಕೇಂದ್ರ ಗ್ರಂಥಾಲಯ, ನ್ಯೂ ಸಯ್ಯಾಜಿ ರಾವ್ ರಸ್ತೆ ಮೈಸೂರು - 570 001
Phone: 2476019

Synopsys

ಶರಣ ಪರಂಪರೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಡಾ. ಎಂ.ಎಂ. ಕಲಬುರ್ಗಿ ಕಲ್ಯಾಣದ ಅವಸಾನದ ದಿನಗಳನ್ನು ನಾಟಕ ರೂಪದಲ್ಲಿ ಹೇಳಿದ್ದಾರೆ. ಶರಣ ಚಳವಳಿಯ ಅಂತ್ಯದ ಬಗ್ಗೆ ಅನೇಕ ಕೃತಿಗಳು ಬಂದಿವೆಯಾದರೂ ಈ ಕೃತಿ ಮುಖ್ಯವಾಗಿ ನಡೆದಿರಬಹುದಾದ ಒಂದು ಒಳಸಂಚನ್ನು ಪ್ರಸ್ತಾಪಿಸುತ್ತದೆ. ಒಟ್ಟು ನಲವತ್ತು ದೃಶ್ಯಗಳಿರುವ ಅಗ್ರಹಾರ ಸಂಸ್ಕೃತಿ, ದೇಗುಲ ಸಂಸ್ಕೃತಿ ಹಾಗೂ ರಾಜ ಸಂಸ್ಕೃತಿಯನ್ನು ಬಿಚ್ಚಿಡುತ್ತದೆ. ಹಿಂದಿ ಮಲಯಾಳಂ ಭಾಷೆಗಳಿಗೂ ನಾಟಕ ಅನುವಾದಗೊಂಡಿದೆ. ಈವರೆಗೆ ಕನ್ನಡದಲ್ಲಿ ಎರಡು ಮುದ್ರಣಗಳನ್ನು ಕಂಡಿದೆ.

ಕೃತಿಯ ಮಹತ್ವವನ್ನು ಹೇಳುತ್ತಾ ಕಲಬುರ್ಗಿ ಅವರು ’ಈ ನಾಟಕವನ್ನು ಬರೆಯುವಾಗ ರಿಚರ್ಡ ಆಟನ್ ಬರೊ ನಿರ್ದೇಶಿಸಿದ 'ಗಾಧೀ' ಚಲನ ಚಿತ್ರ ನನ್ನ ಕಣ್ಣ ಮುಂದಿದೆ, ಈ ನಾಟಕವನ್ನು ಬರೆದವನು ನಾನಾಗಿದ್ದರೂ ಬರೆಸಿಕೊಂಡವನು ನನ್ನೊಳಗಿದ್ದ ಬಸವಣ್ಣ’ ಎಂದಿದ್ದಾರೆ.

 

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books