ಕಿಚ್ಚಿಲ್ಲದ ಬೇಗೆ

Author : ಟಿ.ಎಚ್.ಲವಕುಮಾರ್

Pages 46

₹ 75.00




Year of Publication: 2019
Published by: ಶ್ರಮಣ ಪ್ರಕಾಶನ
Address: ತಿಪ್ಪೂರು(ಗ್ರಾಮ ಮತ್ತು ಅಂಚೆ), ದೊಡ್ಡಬಳ್ಳಾಪುರ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ- 561203
Phone: 9902100881

Synopsys

‘ಕಿಚ್ಚಿಲ್ಲದ ಬೇಗೆ’ ರಂಗಕರ್ಮಿ ಡಾ. ಟಿ.ಎಚ್. ಲವಕುಮಾರ್ ಅವರ ನಾಟಕ. ಅವರು ಸ್ವತಃ ನಾಟಕಕಾರರೂ, ರಂಗ ನಿರ್ದೇಶಕರೂ ಆಗಿದ್ದು, ರಂಗ ಸಜ್ಜಿಕೆಯನ್ನು ನಿಭಾಹಿಸಿಕೊಂಡಿರುವ ಪರಿ, ರಂಗಕ್ರಿಯೆಗಳಿಗೆ ನಾಟಕದ ಚಲನೆಗೆ ಪೂರಕವಾಗಿದೆ. ಮಾತ್ರವಲ್ಲ; ಒಡೆದುಕೊಳ್ಳುವ, ಅಸ್ತವ್ಯಸ್ತಗೊಳ್ಳುವ ಬಿಡಿ ಪ್ರತಿಮೆಗಳಾಗಿ ನಾಟಕಕ್ಕೆ ವಿಶಿಷ್ಟ ಧ್ವನಿ ಆಯಾಮವನ್ನು ನೀಡುತ್ತದೆ. ವೈಯಕ್ತಿಕ ನೆಲೆ ಅಂತೆಯೇ ಸಾಮಾಜಿಕ ನೆಲೆ ರಂಗದ ಮೇಲೆ ಹಾಗೂ ರಂಗದಾಚೆ ಒಡೆದು, ಅಸ್ತವ್ಯಸ್ತಗೊಳ್ಳುತ್ತಾ, ಪ್ರಕ್ಷುಬ್ಧಗೊಳ್ಳುತ್ತಾ, ಪಾತ್ರಗಳ ಮನೋಲೋಕವು ವಿಕೃತ ಆಕೃತಿಗಳ ಮೂಲಕ ಬಿಚ್ಚಿಕೊಳ್ಳುತ್ತಾ ನೀರಿನಾಳದ ಕೊಚ್ಚೆ, ಕಸಗಳು ಮೇಲೇಳುವಂತೆ ದೇಶವೊಂದರ ಸಮಕಾಲೀನ ವಾಸ್ತವ ಭೀಕರತೆಯನ್ನು ಈ ನಾಟಕ ಕಟ್ಟಿಕೊಡುತ್ತದೆ.

About the Author

ಟಿ.ಎಚ್.ಲವಕುಮಾರ್

ದೊಡ್ಡಬಳ್ಳಾಪುರದ ತಾಲೂಕು ತಿಪ್ಪೂರಿನ ಡಾ. ಟಿ.ಎಚ್.ಲವಕುಮಾರ್ ನಾಟಕಕಾರ, ನಿರ್ದೇಶಕ ಹಾಗೂ ಕನ್ನಡ -ಇಂಗ್ಲಿಷ್ ಎರಡೂ ರಂಗಭೂಮಿಯಲಿ ಕೆಲಸ ಮಾಡುತ್ತಿದ್ದಾರೆ. ನೀನಾಸಂ ಪದವಿಯೊಂದಿಗೆ ಪ್ರದರ್ಶನ ಕಲೆ, ಕನ್ನಡ, ಇಂಗ್ಲಿಷ್ ಹಾಗೂ ಮನಶಾಸ್ತ್ರದಲ್ಲಿ ಪದವೀಧರರು. ಪ್ರಸ್ತುತ ಬೆಂಗಳೂರಿನ ಸಂತ ಜೋಸೆಫರ ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕರು.  ಹೆಣದ ಮನೆ, ಕಣಿವೆಯ ನೆರಳಲ್ಲಿ, ಯಶೋಧರೆ ಮಲಗಿರಲಿಲ್ಲ, ಜತೆಗಿರುವನು ಚಂದಿರ, ಉರಿಯ ಉಯ್ಯಾಲೆ, ತುಕ್ರನ ಕನಸು, ಕತ್ತಲೆ ದಾರಿ ದೂರ ಸೇರಿದಂತೆ 22 ಕನ್ನಡ ನಾಟಕಗಳನ್ನು ನಿರ್ದೇಶಿಸಿದ್ದಾರೆ. 16ಕ್ಕೂ ಹೆಚ್ಚು ರಂಗಭೂಮಿ ಕುರಿತ ಲೇಖನಗಳು ಹೊಸತು, ಅಗ್ನಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 35ಕ್ಕೂ ಹೆಚ್ಚು ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಕಿರಣಗಳಲ್ಲಿ ...

READ MORE

Related Books