ಕಿರಾತಾರ್ಜುನೀಯಂ

Author : ಪಿ.ಎಸ್. ರಾಮಾನುಜಂ

Pages 552

₹ 300.00




Year of Publication: 2010
Published by: ಹೇಮಂತ ಸಾಹಿತ್ಯ
Address: 972-ಸಿ, 4ನೇ ಇ ವಿಭಾಗ, 10-ಎ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560010
Phone: 23354619

Synopsys

ಇದು ಭಾರವಿ ಮಹಾಕವಿಯ 'ಕಿರಾತಾರ್ಜುನೀಯಂ' ಮಹಾಕಾವ್ಯದ ಕನ್ನಡಾನುವಾದ. ’ಕಿರಾತಾರ್ಜುನೀಯಂ’ ಸಂಸ್ಕೃತದ ಪಂಚಮಹಾಕಾವ್ಯಗಳಲ್ಲಿ ಒಂದು. ಸಂಸ್ಕೃತ ಸಾಹಿತ್ಯ ಪ್ರಪಂಚದಲ್ಲಿ ಮಹಾಕಾವ್ಯಗಳು ಎಷ್ಟಿವೆ ಎಂಬುದು ಎಣಿಕೆಗೆ ಸಿಗಲಾರದು. ಆದರೆ ಯಾವುದೇ ಎಣಿಕೆಯಲ್ಲೂ ಭಾರವಿಯ ಕಿರಾತಾರ್ಜುನೀಯಂ ತಪ್ಪದೇ ಸೇರುತ್ತದೆ. ಅದಕ್ಕೊಂದು ವಿಶೇಷವಾದ ಸ್ಥಾನವೂ ಇದೆ. ಈ ಮಹಾಕಾವ್ಯದ ಸಮಗ್ರ ಚಿತ್ರ ಇದುವರೆಗೆ ಕನ್ನಡಿಗರಿಗೆ ದೊರೆತಿರಲಿಲ್ಲ. ಈ ಕೊರತೆಯನ್ನು ನಮ್ಮ ಸರಸಪ್ರಬಂಧ ಪ್ರಣೇತಾರರಲ್ಲಿ ಒಬ್ಬರೂ, ಪ್ರೌಢಚಿಂತಕರೂ ಆದ ಡಾ. ಪಿ.ಎಸ್. ರಾಮಾನುಜಂ ಅವರು ತೀರಿಸಿದ್ದಾರೆ. ಕಿರಾತಾರ್ಜುನೀಯಂ ಮಹಾಕಾವ್ಯ ಕುರಿತಂತೆ ಅವರ ಈ ಮಹಾಪ್ರಬಂಧ ಕನ್ನಡದಲ್ಲಿ ಅಪೂರ್ವವಾದ, ವಿಶಿಷ್ಟವಾದ ಕೊಡುಗೆಯಾಗಿ ನಿಲ್ಲುತ್ತದೆ ಎಂದಿದ್ದಾರೆ ಸಂಶೋಧಕ ಸಾ.ಕೃ. ರಾಮಚಂದ್ರರಾವ್.

About the Author

ಪಿ.ಎಸ್. ರಾಮಾನುಜಂ
(16 October 1941)

ಪಿ.ಎಸ್. ರಾಮಾನುಜಂ ಕರ್ನಾಟಕ ರಾಜ್ಯ ಪೊಲಿಸ್ ಇಲಾಖೆಯಲ್ಲಿ IPS ಅಧಿಕಾರಿಗಳಾಗಿದ್ದು ಎಡಿಶನಲ್ ಡೈರೆಕ್ಟರ್ ಜನರಲ್ ಆಫ್ ಪೊಲಿಸ್ (ADGP) ಆಗಿ ಕಾರ್ಯನಿರ್ವಹಿಸಿ 2001ರಲ್ಲಿ ನಿವೃತ್ತರಾದರು. ಸಾಹಿತ್ಯ, ಆಡಳಿತ ಎರಡನ್ನೂ ಸಮರ್ಥವಾಗಿ ನಿರ್ವಹಿಸಿದ ಅವರ ಹುಟ್ಟೂರು ಚಾಮರಾಜನಗರ ಜಿಲ್ಲೆಯ ಬೇಡಮೂಡಲು ಗ್ರಾಮ. ತಂದೆ ಪ್ರತಿವಾದಿ ಭಯಂಕರ ಎಂದೇ ಬಿರುದಾಂಕಿತರಾಗಿದ್ದ ಸಂಪತ್ ಕುಮಾರ ಆಚಾರ್ಯ, ತಾಯಿ ಇಂದಿರಮ್ಮ. ಆರಂಭಿಕ ಶಿಕ್ಷಣ ಹರದನಹಳ್ಳಿ, ಚಾಮರಾಜನಗರದಲ್ಲಿ ಪೂರ್ಣಗೊಳಿಸಿದ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ(ಆನರ್ಸ್) ಪದವಿ ಪಡೆದರು,ಆನಂತರ ಕನ್ನಡ ಪಂಡಿತ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್, ಎಂ.ಎ ಪ್ರಥಮ ರ್ಯಾಂಕ್ ಸೇರಿದಂತೆ ಐದು ಚಿನ್ನದ ...

READ MORE

Related Books