ಕಿರವಂತ

Author : ಡಿ.ಎಸ್.ಚೌಗಲೆ

Pages 112

₹ 80.00




Year of Publication: 2010
Published by: ಚಿತ್ರ ಪಲ್ಲವಿ ಪ್ರಕಾಶನ
Address: ನಂ. 17, 9ನೇ ಬ್ಲಾಕ್‌, ಭ್ರಮರಾಂಭ ಕಲಾಮಂಟಪ ಮುಖ್ಯ ರಸ್ತೆ, ಮಧುವನ, ಮೈಸೂರು- 23
Phone: 9743736204

Synopsys

ಲೇಖಕರಾದ ಡಿ. ಎಸ್.‌ ಚೌಗಲೆ ಹಾಗೂ ಪ್ರೇಮಾನಂದ ಗಜ್ವಿ ಅವರ ನಾಟಕ ಕೃತಿ ʼಕಿರಾವಂತʼ. ಪುಸ್ತಕದ ಬೆನ್ನುಡಿಯಲ್ಲಿ, “ಗ್ರೀಕ್ ದುರಂತಗಳು ಜಗತ್ತಿಗೆ ಪ್ರಸಿದ್ಧವಾದವು. ಗ್ರೀಕ್‌ನ ದುರಂತ ನಾಟಕದಂತೆ ಯಾರದ್ದು ದುಖಾಂತ್ಯವಾಗುತ್ತದೆಯೋ ಆ ವ್ಯಕ್ತಿ ದೊರೆ ಇಲ್ಲವೆ ಉಚ್ಚಪದ ವಿಭೂಷಿತನಾಗಿರುತ್ತಾನೆ. ದೈವವು ಆ ದುರಂತ ಘಟಿಸುವಂತೆ ಮಾಡುತ್ತದೆ. ಆದರೆ, ಕಿರವಂತದಲ್ಲಿ ದೊರೆಯೂ ಇಲ್ಲ, ದೈವವೂ ಇಲ್ಲ. ಆದರೂ ಸಿದ್ದೇಶ್ವರನದ್ದು ದುರಂತ ಘಟಿಸಿ ಬಿಡುತ್ತದೆ. ಕೇವಲ ಇದು ಸಿದ್ದೇಶ್ವರನ ದುರಂತವಲ್ಲ, ಇಡೀ ಅವನ ಕುಟುಂಬವೇ ದುರಂತದಲ್ಲಿ ಮುಳುಗುತ್ತದೆ. ಇಲ್ಲಿಯತನಕದ ನಾಟಕ ಪರಂಪರೆಯಲ್ಲಿ ಇದೊಂದು ಅಪಾರಂಪರಿಕ ದುರಂತವಾಗಿದೆ. ಕಿರವಂತ ಒಂದು ಅಪರೂಪದ ನಾಟಕವಾಗಿದೆ. ಇದರ ನಾಯಕ ಆರಂಭದಿಂದ ಅಂತ್ಯದವರೆಗೆ ಅಸಹಾಯಕನೇ ಆಗಿದ್ದಾನೆ ಹಾಗೂ ತನ್ನ ಅಸಹಾಯಕತನವನ್ನು ತಕರಾರಿಲ್ಲದೆ ಒಪ್ಪಿಕೊಂಡಿದ್ದಾನೆ. ಒಟ್ಟು ಇಡೀ ನಾಟಕವೇ ಈ ನಾಯಕನಲ್ಲದ ನಾಯಕನ ಸೋಲಿನ ಮನೋವೃತ್ತಿಯ ದ್ಯೋತಕವಾಗಿದೆ” ಎಂದು ಹೇಳಿದ್ದಾರೆ.

About the Author

ಡಿ.ಎಸ್.ಚೌಗಲೆ

ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಸದ್ಯ ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು. ’ದಿಶಾಂತರ’, ‘ವಖಾರಿಧೂಸ’, ’ಕಸ್ತೂರಬಾ’, ’ಉಧ್ವಸ್ಥ’, ‘ಉಚಲ್ಯಾ’, ‘ತಮಾಶಾ’, ‘ಜನ ಮೆಚ್ಚಿದ ಅರಸು’, ‘ಡಿ.ಎಸ್.ಚೌಗಲೆ ಅವರ ಏಳು ನಾಟಕಗಳು’ ಇವು ಬಹುಚರ್ಚಿತ ನಾಟಕಗಳು.  1998ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಇವರ ಅನುವಾದಿತ ನಾಟಕ ‘ಗಾಂಧಿ ವರ್ಸಸ್ ...

READ MORE

Related Books