ಕಿತ್ತಳೆ ನೇರಳೆ ಪೇರಳೆ

Author : ಸುಗತ ಶ್ರೀನಿವಾಸರಾಜು

Pages 192

₹ 175.00




Year of Publication: 2016
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು- 560001
Phone: 080-22392460

Synopsys

ಪತ್ರಕರ್ತ, ಲೇಖಕ ಸುಗತ ಶ್ರೀನಿವಾಸರಾಜು ಅವರ ಲೇಖನ ಸಂಕಲನ ‘ಕಿತ್ತಳೆ ನೇರಳೆ ಪೇರಳೆ’- ಭಾರತದ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿರುವ ಪತ್ರಕರ್ತ ಸುಗತ  ಶ್ರೀನಿವಾಸರಾಜು ಸೂಕ್ಷ್ಮ ಬರಹಗಾರರೂ ಹೌದು. ಏಕಮುಖತೆಯ ಭೀತಿಯಲ್ಲಿದ್ದ ಕನ್ನಡ ಪತ್ರಿಕೋದ್ಯಮಕ್ಕೆ ಅವರ ಪ್ರವೇಶ ಒಂದು ರೀತಿಯಲ್ಲಿ ಹೊಸಗಾಳಿ ಬೀಸಿದಂತಾಗಿತ್ತು. ಪತ್ರಿಕಾ ವೃತ್ತಿಯಲ್ಲಿನ ಅವರ ಅಪಾರ ಅನುಭವ, ತಿಳಿವಳಿಕೆ, ಆಲೋಚನೆ, ವೃತ್ತಿ ಕೌಶಲ್ಯ ಕನ್ನಡ ಪತ್ರಿಕೋದ್ಯಮಕ್ಕೆ ಹೊಸತನವನ್ನು ತಂದಿತ್ತು. ಈ ಹೊಸತನಕ್ಕೆ ಕಾರಣವಾದ ಅವರ ಆಲೋಚನೆಗಳು, ದೃಷ್ಠಿಕೋನ, ವಾದ ಸರಣಿ, ವಿಶ್ಲೇಷಣೆಯ ಸೂಕ್ಷ್ಮ ವಿಧಾನವನ್ನು ಸಹಜವಾಗಿಯೇ ಅವರ ಬರಹಗಳಲ್ಲಿ ಕಾಣಬಹುದು ಎನ್ನುತ್ತಾರೆ ಹಿರಿಯ ಪತ್ರಕರ್ತ ಡಿ.ವಿ.ರಾಜಶೇಖರ.

ಸಮಕಾಲೀನ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿಷಯಗಳನ್ನು ಅವುಗಳ ಎಲ್ಲಾ ಆಯಾಮಗಳೊಂದಿಗೆ ಅವರು ಕಟ್ಟಿಕೊಡುವ ರೀತಿ ಅನನ್ಯವಾದದ್ದು. ಎಡ-ಬಲ ಸಿದ್ಧಾಂತಗಳ ವರ್ಗೀಕರಣದ ಕ್ಲೀಷೆಯಲ್ಲಿ ಕನ್ನಡ ಪತ್ರಿಕಾ ಅಂಕಣ ಬರಹಗಳು ಸಿಕ್ಕಿಕೊಂಡಿರುವ ಹಿನ್ನೆಯಲ್ಲಿ ನೋಡಿದರೆ ಸುಗತ ಅವರ ಲೇಖನಗಳು ಕನ್ನಡದ ಸಿದ್ಧ ಮಾದರಿಗಳ ಕ್ಲೀಷೆಗಳಿಂದ ಬಿಡುಗಡೆ ಪಡೆದು, ಭಿನ್ನವಾದ ಉದಾರವಾದಿ ಚಿಂತನೆಗಳನ್ನು ಪ್ರಸ್ತುತಪಡಿಸಿವೆ.

About the Author

ಸುಗತ ಶ್ರೀನಿವಾಸರಾಜು
(25 November 1971)

ಪತ್ರಕರ್ತ ಮತ್ತು ಬರಹಗಾರರೂ ಆಗಿರುವ ಸುಗತ ಶ್ರೀನಿವಾಸರಾಜು ಅವರು ಕನ್ನಡದ ಪ್ರಸಿದ್ಧ ಪ್ರತಿಕೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ‘ಕನ್ನಡಪ್ರಭ’ ದಿನಪತ್ರಿಕೆಯ ಪ್ರಧಾನ ಸಂಪಾದಕರು ಮತ್ತು ‘ಏಷ್ಯಾನೆಟ್ ನ್ಯೂಸ್’ ನೆಟ್ ವರ್ಕ್ ಸಂಸ್ಥೆಯ ಸಂಪಾದಕೀಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಸುಗತ ಅವರು ಅದಕ್ಕೂ ಮೊದಲು ‘ವಿಜಯ ಕರ್ನಾಟಕ’ ದಿನಪತ್ರಿಕೆಯ ಪ್ರಧಾನ ಸಂಪಾದಕರಾಗಿ, ಮತ್ತು ‘ಔಟ್ ಲುಕ್’ ರಾಷ್ಟ್ರೀಯ ವಾರಪತ್ರಿಕೆಯ ದಕ್ಷಿಣ ಭಾರತದ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ಇದಕ್ಕೂ ಮೊದಲು ‘ಹಿಂದೂಸ್ತಾನ್ ಟೈಮ್ಸ್’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ. ಉತ್ತರ ಅಮೆರಿಕದ ಪ್ರತಿಷ್ಠಿತ ಆ್ಯಸ್ಪೆನ್ ಇನ್ಸ್ಟಿಟ್ಯೂಟ್ ನ ಫೆಲೋ ಕೂಡಾ ಆಗಿದ್ದರು. ಭಾರತದ ಇಂಗ್ಲಿಷ್ ...

READ MORE

Awards & Recognitions

Related Books