ಕೊಡೆಯರಳಿ ಹೂವಾಗಿ

Author : ಲಲಿತಾ ಕೆ. ಹೊಸಪ್ಯಾಟಿ

Pages 104

₹ 54.00




Year of Publication: 2021
Published by: ತೇಜು ಪಬ್ಲಿಕೇಷನ್ಸ್‌
Address: ನಂ. 1014, 24ನೇ ಮುಖ್ಯರಸ್ತೆ, 16ನೇ ಕ್ರಾಸ್‌, ಬಿ.ಎಸ್.‌ಕೆ. 2ನೇ ಹಂತ ಬೆಂಗಳೂರು- 560 070
Phone: 9900195626

Synopsys

ಲೇಖಕಿ ಲಲಿತಾ ಹೊಸಪ್ಯಾಟಿ ಅವರ ಪ್ರಬಂಧ ಕೃತಿ ʼಕೊಡೆಯರಳಿ ಹೂವಾಗಿʼ  ಮುಚ್ಚಿದ್ದ ಕೊಡೆ ಹೇಗೆ ಬಿಚ್ಚಕೊಳ್ಳುತ್ತದೆಯೋ ಅದೇ ರೀತಿ ಲೇಖಕರ ಜೀವನಾನುಭವವೂ ಈ ಪುಸ್ತಕದಲ್ಲಿ ಅರಳಿದೆ. ಕೃತಿಯಲ್ಲಿ ಲೇಕಕರೇ ಹೇಳುವಂತೆ ಕೊಡೆ ಅಂದರೆ ಇಲ್ಲಿ ಕೇವಲ ಕೊಡೆಯಲ್ಲ, ಅದು ಬಳೆಗಳು, ಬಸ್ಸು ,ಹೂಗಳು, ಜಾತ್ರೆಗಳು, ಸೀರೆ ಮುಂತಾದವುಗಳು. ಹೀಗೆ ನಿರ್ಜೀವವಾದ ವಸ್ತುಗಳಿಗೆ ಜೀವ ತುಂಬಿ ಅದನ್ನು ಅರಳಿಸುವ ಕೆಲಸ ಈ ಪ್ರಬಂಧದಲ್ಲಿ ಕಾಣಬಹುದಾಗಿದೆ. ಅಲ್ಲದೆ, ತಮ್ಮ ಬಾಲ್ಯ ಜೀವನವಾಗಲಿ, ಶಿಕ್ಷಣದ ಬದುಕಾಗಲಿ, ದಾಂಪತ್ಯ ಜೀವನವೇ ಆಗಿರಲಿ ಅದನ್ನು ಅಲ್ಲಲ್ಲಿಯೇ ಅರಳಿಸಿ ಓದುಗರಿಗಾಗಿ ಸುಗಂಧವನ್ನ ಹರಡಿಸಿದ್ದಾರೆ.

About the Author

ಲಲಿತಾ ಕೆ. ಹೊಸಪ್ಯಾಟಿ

ಪ್ರಬಂಧಗಾರ್ತಿ ಲಲಿತ ಕೆ. ಹೊಸಪ್ಯಾಟಿ ಅವರು ಮೂಲತಃ ಹೊಸಪೇಟೆಯವರು. ಮಕ್ಕಳ ಸಾಹಿತ್ಯ ರಚನೆಯಲ್ಲಿ ಆಸಕ್ತರು. ಅವರ ‘ಚಂದ್ರ ಚುಕ್ಕಿಗಳು’ ಮಕ್ಕಳ ಕತಾ ಸಂಕಲನ. ಮಕ್ಕಳಿಗಾಗಿ ವಿಭಿನ್ನ ಕಥೆಗಳನ್ನು ರಚಿಸಿರುವ ಈ ಕೃತಿಗೆ ಅವರಿಗೆ 2016ನೇ ಸಾಲಿನ ಜಿ. ಬಿ.ಹೊಂಬಳ ಪುರಸ್ಕಾರ ಲಭಿಸಿದೆ. ಅವರ ಹಲವಾರು ಲೇಖನ, ಪ್ರಬಂಧಗಳು ಸುಧಾ, ಪ್ರಜಾವಾಣಿಯಲ್ಲಿ ಪ್ರಕಟಗೊಂಡಿವೆ. ...

READ MORE

Related Books