ಕೊಕ್ಕರೆಗಳ ರಕ್ಷಣೆಗೆ ಲಾಮಾ ಸೇನೆ

Author : ನಾಗೇಶ ಹೆಗಡೆ

Pages 60

₹ 130.00




Year of Publication: 2019
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 080-26617100/26617755

Synopsys

‘ಕೊಕ್ಕರೆಗಳ ರಕ್ಷಣೆಗೆ ಲಾಮಾ ಸೇನೆ’ ನೀರಜ್ ವಾಘೋಲಿಕರ್ ಅವರ ಕೃತಿಯನ್ನು ನಾಗೇಶ ಹೆಗಡೆಯವರು ಕನ್ನಡೀಕರಿಸಿದ್ದಾರೆ. ಈ ಪುಸ್ತಕ ಮಕ್ಕಳ ಕೂತೂಹಲಕಾರಿ ಕಥೆ ಹೇಳುತ್ತದೆ. ಅರುಣಾಚಲ ಪ್ರದೇಶದ ಮೂವರು ಎಳೆಯರ ಸಾಹಸದ ಕತೆ ಇದು. ಅವರ ಊರಿನ ನದಿತೀರಕ್ಕೆ ವಲಸೆ ಬರುತ್ತಿದ್ದ ಕಪ್ಪು ಕೊರಳಿನ ಕೊಕ್ಕರೆಗಳಿಗೆ ಅಪಾಯ ಬಂದಿದೆ. ಅಲ್ಲೊಂದು ಅಣೆಕಟ್ಟು ಕಟ್ಟುವ ಯೋಜನೆಗೆ ಚಾಲನೆ ಸಿಕ್ಕಿದೆ. ಕೊಕ್ಕರೆಗಳ ಇಳಿದಾಣ ನಾಶವಾಗಲಿದೆ. ಈ ಮೂವರು ಅದನ್ನು ಹೇಗೆ ಬಜಾವು ಮಾಡುತ್ತಾರೆ. ಅವರಿಗೆ ಎದುರಾದ ಸಂಕಷ್ಟಗಳೇನು ಎಂಬ ರೋಚಕ ಕಥೆಯನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. 

 

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Related Books