ಕೋಳೂರು ಶಂಕರ ಕವಿಯ ಮಾಧವಾಂಕ ಚರಿತೆ

Author : ಎಫ್.ಟಿ.ಹಳ್ಳಿಕೇರಿ

Pages 398

₹ 360.00
Year of Publication: 2020
Published by: ಪ್ರಸಾರಾಂಗ, ಹಂಪಿ
Address: ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ- 583276

Synopsys

‘ಕೋಳೂರು ಶಂಕರ ಕವಿಯ ಮಾಧವಾಂಕ ಚರಿತೆ’ ಲೇಖಕ ಎಫ್. ಟಿ. ಹಳ್ಳಿಕೇರಿ ಅವರ ಸಂಪಾದನಾ ಕೃತಿ. ದಕ್ಷಿಣ ಭಾರತದ ಭಾಷೆ ಸಾಹಿತ್ಯ ಮತ್ತು ಶಿಲ್ಪಗಳಲ್ಲಿ ಸತ್ಯೇಂದ್ರಚೋಳನ ಕತೆ ಪ್ರಸಿದ್ಧವಾಗಿದೆ. ವಿಶೇಷವಾಗಿ ತಮಿಳು ಸಾಹಿತ್ಯದಲ್ಲಿ ಕುಡಿಯೊಡೆದ ಈ ಕತೆ ಮುಂದೆ ಕನ್ನಡ ತೆಲುಗು ಮಲೆಯಾಳ ಸಾಹಿತ್ಯದ ಅನೇಕ ಕವಿಗಳ ಕಾವ್ಯಕ್ಕೆ ವಸ್ತುವಾಗಿದೆ. ಕನ್ನಡದ ಮಧ್ಯಕಾಲೀನ ಸಾಹಿತ್ಯ ಸಂದರ್ಭದಲ್ಲಿಯಂತೂ ಈ ಕಥೆ ವೈವಿಧ್ಯಮಯವಾಗಿ ಬೆಳವಣಿಗೆಯಾಗಿದೆ, ಹರಿಹರ(ಮನುಚೋಳ ರಗಳೆ), ಗುಬ್ಬಿ ಮಲ್ಲಣಾರ್ಯ(ಭಾವಚಿಂತಾರತ್ನ), ಷಡಕ್ಷರದೇವ(ರಾಜಶೇಖರ ವಿಳಾಸ), ಧೂಪದಹಳ್ಳಿ ಶಾಂತಕವಿ(ಮಾಧವಾಂಕ ಚರಿತೆ) ಮೊದಲಾದವರು ಈ ಕತೆಯನ್ನಾಧರಿಸಿ ಕಾವ್ಯಗಳನ್ನು ರಚನೆ ಮಾಡಿದ್ದಾರೆ.

ಮನುಷ್ಯನು ನ್ಯಾಯ ನೀತಿ ಧರ್ಮ ಸತ್ಯ ಸಾಧನಗಳಿಂದ ಪಾರಮಾರ್ಥಿಕ ಬದುಕನ್ನು ಪರಿಪೂರ್ಣವಾಗಿ ಅನುಭವಿಸುತ್ತಾನೆ ಎಂಬುದನ್ನು ಮಾಧವಾಂಕ ಚರಿತೆ ಚೆನ್ನಾಗಿ ತಿಳಿಸಿಕೊಡುತ್ತದೆ. ನಡುಗನ್ನಡ ಭಾಷೆ ಮತ್ತು ದೇಶೀಯ ಸೊಗಡಿನಿಂದ ಕೂಡಿದ ಈ ಕಾವ್ಯ ಕವಿಯ ಸಮಕಾಲೀನ ಸಂದರ್ಭದ ಸಾಮಾಜಿಕ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ಅನಾವರಣಗೊಳಿಸಿರುವುದನ್ನು ಗಮನಿಸಬಹುದು. ಈವರೆಗೆ ಅಪ್ರಕಟಿತ ರೂಪದಲ್ಲಿದ್ದ ಕೋಳೂರು ಶಂಕರಕವಿಯ ಮಾಧವಾಂಕ ಚರಿತೆಯನ್ನು ಮೂರು ಹಸ್ತಪ್ರತಿಗಳ ನೆರವಿನಿಂದ ಪರಿಷ್ಕರಿಸಿದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಫ್.ಟಿ. ಹಳ್ಳಿಕೇರಿ ಅವರು ಸಂಪಾದಿಸಿದ್ದಾರೆ.

About the Author

ಎಫ್.ಟಿ.ಹಳ್ಳಿಕೇರಿ
(01 June 1966)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತ್ರಪ್ರತಿಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕ ಮತ್ತು ಮುಖ್ಯಸ್ಥರು. ಎಂ.ಎ, ಎಂಫಿಲ್ ಪಿಎಚ್‌.ಡಿ ಪದವಿ ಪಡೆದಿರುವ ಅವರಿಗೆ ಹಸ್ತಪ್ರತಿ-ಗ್ರಂಥಸಂಪಾದನೆ, ಹಾಲುಮತ ಸಂಸ್ಕ್ರತಿ, ಹಳೆಗನ್ನಡ-ನಡುಗನ್ನಡ -ನಡುಗನ್ನಡ ಸಾಹಿತ್ಯ, ಯೋಗವಿಜ್ಞಾನ ಆಸಕ್ತಿಯ  ಅಧ್ಯಯನದ ಕ್ಷೇತ್ರಗಳು. ’ಕೆರೆಯ ಪದ್ಮರಸ ಮತ್ತು ಆತನ ವಂಶಜರು , ಕಂಠಪತ್ರ (1,2,3), ಹಾಲುಪತ್ರ’ ಪ್ರಕಟಿತ ಕೃತಿಗಳು. ಹಾಲುಮಠ ಅಧ್ಯಯನ ಪೀಠದ ಸಂಚಾಲಕ, ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ  ಮುಖ್ಯಸ್ಥರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾನಿಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅತ್ಯುನ್ನತ ಸಂಶೋಧನಾ ಗ್ರಂಥ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು ಇವರಿಗೆ ...

READ MORE

Related Books