ಕೋಮುವಾದದ ಕರಾಳ ಮುಖಗಳು

Author : ಕೆ. ಫಣಿರಾಜ್

Pages 224

₹ 100.00




Year of Publication: 2012
Published by: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
Address: ನವಕರ್ನಾಟಕ ಪಬ್ಲಿಕೇಷನ್ಸ್‌ (ಪ್ರೈ.) ಲಿ. ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 9900998686

Synopsys

ಲೇಖಕರಾದ ಭಟ್ ಎಸ್ ಆರ್, ರಾಜಶೇಖರ್ ಜಿ, ಕೆ ಫಣಿರಾಜ್ ಅವರ ಕೃತಿ ಕೋಮುವಾದದ ಕರಾಳ ಮುಖಗಳು. ಯಾವುದೇ ಬಣವಾಗಲಿ, ಅದು ಕೋಮು ಘರ್ಷಣೆಯನ್ನು ಒಂದು ನಿರ್ದಿಷ್ಟ ಕಾರ್ಯಕ್ರಮವನ್ನಾಗಿ ಹಮ್ಮಿಕೊಂಡಾಗ, ಕೋಮುದ್ವೇಷವನ್ನು ಒಂದು ರಾಜಕೀಯ ಸಿದ್ಧಾಂತವನ್ನಾಗಿ ಸ್ವೀಕರಿಸಿದಾಗ, ಕೋಮುಜ್ವಾಲೆಯನ್ನು ನಿರಂತರವಾಗಿ ಹರಡಲು ಉಪಕ್ರಮಿಸಿದಾಗ ಅದರಲ್ಲಿ ಫ್ಯಾಸಿಸ್ಟ್ ಮನೋಭಾವ ಮತ್ತು ಪ್ರಕ್ರಿಯೆ ಮನೆ ಮಾಡಿಕೊಂಡಿರುತ್ತದೆ. ಫ್ಯಾಸಿಸಂ ಎಂಬುದು ಕೇವಲ ಅಮಾನವೀಯವಾದ ಪ್ರತಿಕ್ರಿಯೆಯಲ್ಲ. ಅದು ಬಂಡವಾಳಶಾಹಿಯ ಅತ್ಯಂತ ಮಾರಣಾಂತಿಕವಾದ ಆಯುಧ. ಮತೀಯ ಘರ್ಷಣೆಗಳು ಕಟ್ಟಕಡೆಗೆ ಸಮಾಜವನ್ನು ಕೊಂಡೊಯ್ಯುವುದು ಫ್ಯಾಸಿಸಂನತ್ತ ಎಂಬುದನ್ನು ಗಮನಿಸಿದರೆ, ಅವನ್ನು ನಿಯಂತ್ರಿಸುವ ಪ್ರಭುತ್ವವು ಒಂದು ರೀತಿಯಲ್ಲಿ ಫ್ಯಾಸಿಸಂಗೆ ಕುಮ್ಮಕ್ಕು ನೀಡುತ್ತಿರುತ್ತದೆ ಎಂಬುದು ಅರ್ಥವಾಗುತ್ತದೆ. ಆದ್ದರಿಂದ ಮತೀಯ ಘರ್ಷಣೆಗಳ ವಿರುದ್ಧದ ಸೈದ್ಧಾಂತಿಕ ಹೋರಾಟವು ಜನಪರವಾದ, ಪ್ರಜಾಪ್ರಭುತ್ವದ ಪರವಾದ ಮತ್ತು ಮೌಲ್ಯಯುತವಾದ ಸಂಸ್ಕೃತಿಯ ಪರವಾದ ಹೋರಾಟವಾಗಿರುತ್ತದೆ. ಪ್ರಸ್ತುತ ಗ್ರಂಥದ ಮಹತ್ವವನ್ನು ಈ ನಿಟ್ಟಿನಿಂದ ಗುರುತಿಸಬೇಕಾಗುತ್ತದೆ.

About the Author

ಕೆ. ಫಣಿರಾಜ್

ಲೇಖಕ, ಚಿಂತಕ ಕೆ.ಫಣಿರಾಜ್ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಕಂಪ್ಲಿಯವರು. ಕಂಪ್ಲಿಯಲ್ಲಿ 1962ರಲ್ಲಿ ಜನಿಸಿದ ಅವರು ಬಳ್ಳಾರಿ ಜಿಲ್ಲೆ ಹರಪನಹಳ್ಳಿ ಮತ್ತು ಹೊಸಪೇಟೆಗಳಲ್ಲಿ ಪದವಿ ಪೂರ್ವದವರೆಗಿನ ವಿದ್ಯಾಭ್ಯಾಸ. ಗುಲ್ಬರ್ಗ, ಹುಬ್ಬಳ್ಳಿಗಳಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ. ಸ್ನಾತಕೋತ್ತರ ಪದವಿಗಳಿಗಾಗಿ ವಿದ್ಯಾಭ್ಯಾಸ. ಕಳೆದ 25 ವರ್ಷಗಳಿಂದ ಮಣಿಪಾಲದ ಇಂಜನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮೇಷ್ಟ್ರಾಗಿ ಕೆಲಸ ಮಾಡಿತ್ತಿದ್ದಾರೆ. ಮುವತ್ತೈದು ವರ್ಷಗಳಿಂದ ಎಡ ಚಳುವಳಿಗಳ ಒಡನಾಡಿಯಾಗಿದ್ದಾರೆ.  ಕೋಮುವಾದದ ರಾಜಕೀಯ' (ಸಹ ಲೇಖಕ-ಜಿ.ರಾಜಶೇಖರ್‌, ಫಕೀರ್ ಮಹಮ್ಮದ್ ಕಟ್ಟಾಡಿಯವರೊಂದಿಗೆ), ' ಕೋಮುವಾದದ ಕರಾಳಮುಖಗಳು' (ಸಹಲೇಖಕ-ಎಸ್.ಆರ್.ಭಟ್, ಜಿ.ರಾಜಶೇಖರ್ ಅವರೊಂದಿಗೆ. ಅಂಟೋನಿಯೊ ಗ್ರಾಂಷಿ-ಸಮಾಜವಾದಿ ಚಿಂತಕ, ರಾಜಕಾರಣಿ', 'ಅಂಬೇಡ್ಕರರ ಆಯ್ದ ...

READ MORE

Reviews

ಹೊಸತು- ನವೆಂಬರ್‌ -2005

 

ಮತಾ೦ಧತೆಯು ಸಮಾಜದ ಮೇಲೆ ಬೀರಿರುವ ಕೆಟ್ಟ ಪರಿಣಾಮವನ್ನು ಹಲವಾರು ಉದಾಹರಣೆಗಳ ಮೂಲಕ ಚಿತ್ರಿಸಿದ್ದಾರೆ. ಇತಿಹಾಸ ಹಾಗೂ ಸಮಾಜಶಾಸ್ತ್ರದ ತಿಳುವಳಿಕೆ ಪುಸ್ತಕ ರಚನೆಯ ಹಿನ್ನೆಲೆಯಲ್ಲಿ ಇದೆ. ಆರ್.ಎಸ್‌.ಎಸ್. ಮತ್ತು ಜಮಾತೆ ಇಸ್ಲಾಮ್ ಸಂಸ್ಥೆಗಳ ಮೂಲಭೂತವಾದವನ್ನು ಲೇಖಕರು ವಿಶ್ಲೇಷಿಸಿದ್ದಾರೆ. 'ಹಿಂದೂ ಧರ್ಮದಲ್ಲಿ ಗೋವು : ಸತ್ಯ ಮತ್ತು ಮಿಥ್ಯ' ಎಂಬ ಲೇಖನ ಅನುಬಂಧದ ರೂಪದಲ್ಲಿದೆ. ಎಸ್. ಆರ್. ಭಟ್ ಅವರ ಕೃತಿ ಪ್ರಕಟವಾದ ನಂತರದ ವರ್ಷಗಳಲ್ಲಿ ಕೋಮುವಾದ ಮತ್ತಷ್ಟು ಉಗ್ರವಾಗಿ ಹಿಂದೂ ಮತಾಂಧತೆ ವಿಶೇಷವಾಗಿ ಕಂಡುಬಂದಿದೆ. ಈ ಸಮಕಾಲೀನ ಇತಿಹಾಸವನ್ನು ಜಿ. ರಾಜಶೇಖರ್ ಮತ್ತು ಕೆ. ಫಣಿರಾಜ್ ಅವರು ಪುಸ್ತಕದ ಎರಡನೆಯ ಭಾಗದಲ್ಲಿ ಬರೆದಿದ್ದಾರೆ. ೧೯೮೪ರ ದೆಹಲಿಯ ಸಿಖ್ ನರಮೇಧ, ೧೯೯೨-೯೩ರ ಮುಂಬೈ ಕೋಮುಗಲಭೆ, ಗೋದ್ರಾ ಹಿನ್ನೆಲೆಯ ಗುಜರಾತ್ ಚಳುವಳಿಗಳ ವಿಶ್ಲೇಷಣೆಗಳನ್ನು ಇಲ್ಲಿ ಕಾಣಬಹುದು. ಬಿ.ಜೆ.ಪಿ. ಪ್ರೇರೇಪಿತ ಕೋಮು ಗಲಭೆಗಳು ಕರ್ನಾಟಕದ ಕುಂದಾಪುರ, ಉಡುಪಿ ಮುಂತಾದ ಕಡೆ ನಡೆದಿದ್ದು ಅವುಗಳ ವಿವರಣೆಯನ್ನು ಸಹ ಪುಸ್ತಕ ದಾಖಲಿಸಿದೆ. ಬಾಬಾಬುಡನ್ ಗಿರಿಯ ಗಲಭೆಗಳ ವಿವರಣೆ ಅಷ್ಟಾಗಿ ಕೃತಿಯಲ್ಲಿ ಕಂಡುಬಂದಿಲ್ಲ. ಕೆ. ವಿ. ಸುಬ್ಬಣ್ಣನವರ ವಿಚಾರಗಳ ಹಿನ್ನೆಲೆಯಲ್ಲಿ ಬರೆದಿರುವ 'ಹಿಂಸೆಯ ಅಭಿಜ್ಞಾನ' ಲೇಖನ ಸಾಕಷ್ಟು ಚಿಂತನೆಗೆ ಅವಕಾಶ ಮಾಡಿಕೊಡುತ್ತದೆ. ಜಿ. ರಾಮಕೃಷ್ಣ ಅವರು ಉಪಯುಕ್ತ ಮುನ್ನುಡಿ ಬರೆದಿದ್ದಾರೆ. ಕೋಮುವಾದದ ಕರಾಳಮುಖವನ್ನು ಚಿತ್ರಿಸುವ ಈ ಕೃತಿಯನ್ನು ನವಕರ್ನಾಟಕ ಪ್ರಕಾಶನ ಇಷ್ಟು ಅಂದವಾಗಿ ಪ್ರಕಟಿಸಿರುವುದು ವಿಪರ್ಯಾಸವಾಗಿದೆ !

Related Books