ಕೂರ್ಗ ರೆಜಿಮೆಂಟ್ -ಎಂಬುದು ಮೇ. ಡಾ. ಕುಶ್ವಂತ ಕೋಳಿಬೈಲು ಅವರ ಸಣ್ಣ ಕಥೆಗಳ ಸಂಕಲನ. ಪುಸ್ತಕದ ಅಡಿಬರಹ ಬಂದೂಕು ಹಿಡಿದವರ ನಾಡಿಮಿಡಿತ ಅಂತಿದೆ ಹಾಗಂತ ಈ ಕತೆಗಳಲ್ಲಿ ಹೊಡಿ ಬಡಿ ಇಲ್ಲ ಬದಲು ನಮ್ಮ ಸೈನಿಕರು ನಿವೃತ್ತಿ ಹೊಂದಿದ ನಂತರ ಅನುಭವಿಸುವ ಬವಣೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಲೇಖಕರು ಹತ್ತಿರದಿಂದ ನೋಡಿದ ತಮ್ಮ ಕೊಡಗು ನಾಡಿನ ಚಿತ್ರಣ ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. 12 ಕತೆಗಳ ಈ ಸಂಕಲನ ಲೇಖಕರ ಮೊದಲ ಪ್ರಕಟಿತ ಕೃತಿ.
ವೃತ್ತಿಯಿಂದ ವೈದ್ಯರಾದ ಮೇ ಡಾ. ಕುಶ್ವಂತ ಕೋಳಿಬೈಲು ಅವರು ಹುಟ್ಟಿದ್ದು ಕೊಡಗಿನ ಭಾಗಮಂಡಲದಲ್ಲಿ. ಮಂಗಳೂರಿನ ಫಾದರ್ ಮುಲ್ಲರ್ಸ್ ಕಾಲೇಜಿನಿಂದ ವೈದ್ಯಕೀಯ ಪದವಿ.ನಂತರ ಸೈನ್ಯ ಸೇರಿ ಆರ್ಮಿಮೆಡಿಕಲ್ ಕೋರ್ ವಿಭಾಗದಲ್ಲಿ ಭರ್ತಿ.ನಿವೃತ್ತಿಯ ನಂತರ ಪುಣೆಯಲ್ಲಿ ಪಿಡಿಯಾಟ್ರಿಸಿಯ್ನ್ ಆಗಿ ಕೆಲಸ ಈಗ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದು, ಸಾಹಿತ್ಯ ಮೆಚ್ಚಿನ ಹವ್ಯಾಸ. ಪತ್ರಿಕೆಗಳಿಗೆ ನಿಯಮಿತವಾಗಿ ಅಂಕಣ ಬರೆಯುತ್ತಿದ್ದಾರೆ. .ಕೂರ್ಗ ರೆಜಿಮೆಂಟ್ ಎಂಬುದು ಇವರ ಪ್ರಬಮಧಗಳ ಸಂಕಲನ. ...
READ MORE