ಕೂರಿಗೆ

Author : ದೇವೇಂದ್ರಪ್ಪ ಜೆ. (ಜಾಜಿ ದೇವೇಂದ್ರಪ್ಪ)

Pages 116

₹ 100.00




Year of Publication: 2020
Published by: ರೂಪ ಪ್ರಕಾಶನ
Address: #26, 11ನೇ ಬ್ಲಾಕ್, ಡಾ. ರಾಜ್ ಕುಮಾರ್ ರಸ್ತೆ, ಜೆಎಸ್‌ಎಸ್ ಲೇಔಟ್ ಮೈಸೂರು - 570011

Synopsys

ಲೇಖಕ ಜಾಜಿ ದೇವೇಂದ್ರಪ್ಪ ಅವರ ಲೇಖನಗಳ ಸಂಗ್ರಹ ಕೃತಿ ‘ಕೂರಿಗೆ’. ಆಂಧ್ರಪ್ರದೇಶದ ಅಡ್ಡ ಹೆಸರುಗಳು, ಕನ್ನಡ ಭಾಷೆಗೆ ಬಳ್ಳಾರಿ ಜಿಲ್ಲೆ ನೀಡಿದ ಕೊಡುಗೆ, ತೆಲುಗು ದಲಿತ ಕಾವ್ಯದ ತಾತ್ವಿಕ ಸ್ವರೂಪ ಸೇರಿದಂತೆ 13 ಲೇಖನಗಳು ಇಲ್ಲಿವೆ.

ಕೃತಿಗೆ ಬೆನ್ನುಡಿ ಬರೆದ ರಮೇಶ್ ಗಲ್ಲೂರ್ ‘ಅಪಾರವಾದ ಓದು ಮತ್ತು ಕಾಳಜಿಯನ್ನು ಇಟ್ಟುಕೊಳ್ಳದ ಯಾವುದೇ ಓದು ಮತ್ತು ಬರಹದಿಂದ ಏನೂ ಪ್ರಯೋಜನವಾಗದು ಎಂದು ಎಚ್ಚರಿಸುತ್ತಲೇ ಇರುವ ಜೀವಕಾಳಜಿಯ ಈ ಚಿಂತಕ, ಕವಿತೆ, ಲೇಖನ, ಕಥೆ, ವಿಮರ್ಶೆ, ಸಂಪಾದನೆ, ಅನುವಾದ, ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಲೇ ಅಪಾರವಾದ ವಿದ್ಯಾರ್ಥಿ ಸಮೂಹಕ್ಕೆ ಪ್ರೇರಣೆಯಾಗುವ ಮೂಲಕ ಶೈಕ್ಷಣಿಕ ಸಂಶೋಧನೆಯ ಮಾರ್ಗದಿಂದ ಹವ್ಯಾಸಿ ಸಂಶೋಧನೆಯ ಕಡೆಗೆ ವಿದ್ಯಾರ್ಥಿಗಳನ್ನು ತಿರುಗಿಸುತ್ತಾ, ಕಾಡು ಮೇಡು ಅಲೆಯುವ ಮೂಲಕ ಹೊಸ ಓದುಗಳಿಗೆ ಪ್ರೇರಣೆಯಾಗುವ ಜಾಜಿ ಅವರು, ಹಳಗನ್ನಡ ಪಠ್ಯಗಳನ್ನು ನಿರರ್ಗಳವಾಗಿ ಮಾತನಾಡುತ್ತಾ ವಿದ್ಯಾರ್ಥಿಗಳನ್ನು ವರ್ತಮಾನಕ್ಕೆ ಮುಖಾಮುಖಿಯಾಗಿಸುವ ಮಧ್ಯಮ ಮಾರ್ಗದ ಮಾತುಗಾರ, ಅವರ ಸಾಹಿತ್ಯದ ಪಯಣದ ದಾರಿ ಎಚ್ಚರಿಸುವ ಮತ್ತು ಎಚ್ಚರವಾಗಿರುವ ದಾರಿಯಾಗಲಿ’ ಎಂದು ಆಶಿಸಿದ್ದಾರೆ.

About the Author

ದೇವೇಂದ್ರಪ್ಪ ಜೆ. (ಜಾಜಿ ದೇವೇಂದ್ರಪ್ಪ)
(02 November 1976)

ಜಾಜಿ ದೇವೇಂದ್ರಪ್ಪ ಎಂದೇ ಖ್ಯಾತರಾಗಿರುವ ಕವಿ, ವಿಮರ್ಶಕ ಡಾ.ದೇವೇಂದ್ರಪ್ಪ ಜೆ ಅವರು ಮೂಲತಃ ಬಳ್ಳಾರಿಯವರು. ತಂದೆ ಜಾಜಿ ಚೆನ್ನಬಸಪ್ಪ, ತಾಯಿ ನೀಲಮ್ಮ. ಸದ್ಯ ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಜಾಜಿ ದೇವೇಂದ್ರಪ್ಪನವರು, ಸಾಹಿತ್ಯದ ಹಲವು ವಿಭಾಗಗಳಲ್ಲಿ ಕೃಷಿ ಮಾಡಿದ್ದಾರೆ. ಗುಲ್ಪರ್ಗ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಆಂಧ್ರ- ಕರ್ನಾಟಕ ಗಡಿಭಾಗದ ಸ್ಥಳನಾಮಗಳು ಎಂಬ ವಿಷಯದಡಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ದೇವೇಂದ್ರಪ್ಪನವರು ಹಳಗನ್ನಡ, ಮಧ್ಯಕಾಲೀನ ಕನ್ನಡ, ...

READ MORE

Related Books