ಕೊರಕಲಿನ ಜಾಡಿನಲ್ಲಿ

Author : ಮಂಜುನಾಥ್ ಡಿ.ಎಸ್

Pages 224

₹ 625.00




Year of Publication: 2022
Published by: ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ
Address: ಬೆಂಗಳೂರು- 560068
Phone: 9845062131

Synopsys

`ಕೊರಕಲಿನ ಜಾಡಿನಲ್ಲಿ’ ಕೃತಿಯು ಮಂಜುನಾಥ್ ಡಿ.ಎಸ್ ಅವರ ಪ್ರವಾಸ ಕಥನ. . ಈ ಕೃತಿಯ ಕುರಿತು ಬೇಲೂರು ರಾಮಮೂರ್ತಿ ಅವರು, ಪ್ರಸ್ತುತ ಕೊರಕಲಿನ ಜಾಡಿನಲ್ಲಿ ಕೃತಿಯೊಳಗೆ ತುಂಬಾ ಕುತೂಹಲ ತರುವ ಅನೇಕ ತಾಣಗಳಿವೆ. ಇವುಗಳಲ್ಲಿ ಸ್ವಲ್ಪ ಅಪರೂಪ ಎನ್ನಬಹುದಾದ ನಕ್ಕಿ ಸರೋವರ, ಜಸ್‌ವಂಥ್ ಥಡಾ, ಜೈಸಲ್ಮೇರ್ ನಗರದ ಮೂಲ ಝರಿ, ಮೇಘಾಲಯದ ಉಮಿಯಂ ಸರೋವರ ತುಂಬಾ ಮನೋಹರವಾಗಿವೆ. ಷಿಲ್ಲಾಂಗ್‌ನ ಉಂಗಟ್ ನದಿಯ ಹೆಸರನ್ನು ತುಂಬಾ ಅಪರೂಪವಾಗಿ ಕೇಳಿದವರಿದ್ದಾರೆ. ಮಾಹೇಶ್ವರ್ ಪಟ್ಟಣದ ವಿವರಗಳು ಸೊಗಸಾಗಿವೆ. ನಮ್ಮ ದೇಶದ ಪ್ರತಿಯೊಂದು ಪಟ್ಟಣವೂ ಒಂದಲ್ಲಾ ಒಂದು ವಿಶೇಷತೆಗೆ ಹೆಸರಾಗಿದೆ. ಆದರೆ ಆ ಪಟ್ಟಣಗಳಿಗೆ ಹೋದವರು ಅವುಗಳನ್ನು ಹೆಕ್ಕಿ ತೆಗೆಯಬೇಕು. ಯಾರಾದರೂ ಒಂದು ಸ್ಥಳಕ್ಕೆ ಪ್ರವಾಸ ಹೋಗಿದ್ದಾರೆ ಎಂದರೆ ಅಲ್ಲಿನ ಪ್ರತಿಯೊಂದು ವಿಷಯಗಳನ್ನೂ ನೋಡಿದ್ದಾರೆ ಎನ್ನಲು ಸಾಧ್ಯವಿಲ್ಲ. ಹೀಗಾಗಿ ಒಂದೇ ಪ್ರದೇಶಕ್ಕೆ ಎಷ್ಟೇ ಜನ ಪ್ರವಾಸ ಹೋದರೂ ಹೊಸದೊಂದು ವಿಷಯ ಸಿಗುತ್ತದೆ. ಹಾಗೆ ಸಿಕ್ಕ ವಿಷಯಗಳನ್ನು ಅಚ್ಚುಕಟ್ಟಾಗಿ ಜೋಡಿಸುವ ಕೆಲಸವನ್ನು ಸಮರ್ಥವಾಗಿ ಡಿ.ಎಸ್. ಮಂಜುನಾಥ್ ಅವರು ಮಾಡಿದ್ದಾರೆ ಎಂದರೆ ಅವರಿಗೆ ಪ್ರವಾಸದಲ್ಲಿ ಮಾತ್ರ ಆಸಕ್ತಿಯಿಲ್ಲ, ಜೊತೆಗೆ ಅಲ್ಲಿ ಅವರು ಕಂಡ ಮಾಹಿತಿಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಕಳಕಳಿ ಹೊಂದಿದ್ದಾರೆ ಎಂದು ಅರ್ಥವಾಗುತ್ತದೆ. ಹಳೇಬೀಡಿನಂಥಾ ಸಣ್ಣ ಊರಿಗೆ ಹೋಗುವವರು ಅಲ್ಲಿನ ಪ್ರಸಿದ್ಧ ಹೊಯ್ಸಳೇಶ್ವರ ದೇವಾಲಯವನ್ನು ನೋಡಿ ಬಂದುಬಿಡುತ್ತಾರೆ. ಆದರೆ ಅಲ್ಲಿ ಇಂಥಾ ಒಂದು ಹುಲಿಕೆರೆಯ ಪುಷ್ಕರಣಿ ಇರುವುದು ಎಷ್ಟು ಜನರಿಗೆ ತಿಳಿದಿದ್ದೀತು ಎಂದಿದ್ದಾರೆ.

About the Author

ಮಂಜುನಾಥ್ ಡಿ.ಎಸ್

ಲೇಖಕ ಮಂಜುನಾಥ್ ಡಿ.ಎಸ್‌ ಅವರು ಮೂಲತಃ ಕೋಲಾರ ತಾಲ್ಲೂಕಿನ ಕ್ಯಾಲನೂರು ಗ್ರಾಮದವರು. ಅವರಿಗೆ ಕನ್ನಡ ಭಾಷೆಯಲ್ಲಿ ವಿಶೇಷ ಆಸಕ್ತಿ ಮೂಡಿಸಿದ್ದು, ನ್ಯಾಷನಲ್ ಕಾಲೇಜಿನಲ್ಲಿ ಕನ್ನಡದ ಅಧ್ಯಾಪಕರಾಗಿದ್ದ ಕಿ.ರಂ.ನಾಗರಾಜರ ಬೋಧನಾಕ್ರಮ. ಅವರ ಮಾರ್ಗದರ್ಶನ ಇವರನ್ನ ಬರವಣಿಗೆಯತ್ತ ಆಕರ್ಷಿಸಿತು. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಅವರು ತಮ್ಮ ನಿವೃತ್ತಿ ಜೀವನದಲ್ಲಿ ಕಳೆದ ಏಳೆಂಟು ವರ್ಷಗಳಲ್ಲಿ ದೇಶ ವಿದೇಶಗಳ ಪ್ರವಾಸವನ್ನು ಕೈಗೊಂಡಿದ್ದಾರೆ. ಪತ್ರಿಕೆಗಳ ಯಾತ್ರಾ ಪುರವಣಿಗಳಲ್ಲಿ ಅವರ ಬರವಣಿಗೆಗಳು ಪ್ರಟಕವಾಗಿವೆ. ಕೃತಿಗಳು: ಕೊರಕಲಿನ ಜಾಡಿನಲ್ಲಿ ...

READ MORE

Related Books