ಕೊರಳಾರ

Author : ಎಂ. ಪ್ರಭಾಕರ ಜೋಷಿ

Pages 106

₹ 150.00




Year of Publication: 2016
Published by: ಆಕೃತಿ ಆಶಯ ಪ್ರಕಾಶನ
Address: ಲೈಟ್‌ ಹೌಸ್ ಹಿಲ್‌ ರೋಡ್‌, ಮಂಗಳೂರು
Phone: 8242443002

Synopsys

ಯಕ್ಷಗಾನ ಕುರಿತು ಬೇರೆ ಬೇರೆ ಸಂದರ್ಭಗಳಲ್ಲಿ ಎಂ. ಪ್ರಭಾಕರ ಜೋಶಿ ಅವರು ಬರೆದ ಲೇಖನಗಳು, ಮಾಡಿದ ಉಪನ್ಯಾಸಗಳ ಲಿಖಿತ ರೂಪ ’ಕೊರಳಾರ’. ಕೊರಳಾರ ಎಂದರೆ ಯಕ್ಷಗಾನ ವೇಷಧಾರಿಗಳ ಕಂಠಾಭರಣ. ಈ ಕೃತಿಯಲ್ಲಿ ಸಮಕಾಲೀನ ಶ್ರೇಷ್ಠರ ಸಾಧನೆಗಳನ್ನು ವಿವರಿಸಿದ್ದಾರೆ. ಯಕ್ಷಗಾನ ಕಲೆಯು ವಿವಿಧ ವಿನ್ಯಾಸಗಳಲ್ಲಿ ಬೆಳೆಯುತ್ತಿದೆ. ವಿಮರ್ಶೆ ಸಂಶೋಧನೆಗಳೂ ಹೆಚ್ಚುತ್ತಿವೆ. ಸಮಸ್ಯೆ ಎಂದರೆ, ವಿಮರ್ಶೆ ಸಂಶೋಧನೆಗಳಿಗೂ ವೃತ್ತಿ, ಹವ್ಯಾಸ ಪ್ರದರ್ಶನ ನಿರತರಿಗೂ ಸಂಬಂಧವೇ ಇಲ್ಲವೆಂಬಂತೆ ಸಾಗುತ್ತಿದೆ. ಕಲೆಯ ಕ್ಷೇತ್ರದಲ್ಲಿ ಕಲಾವಿದ, ಸಂಘಟಕ, ವ್ಯವಸ್ಥಾಪಕ, ಪೋಷಕರಾಗಿರುವವರ ವಿಷಯಗಳು ಮಾತ್ರವೇ ಮುನ್ನಲೆಗೆ ಬರುತ್ತವೆ ಎನ್ನುವ ಲೇಖಕರು, ರಂಗದ ಕಲಾವಿದರೂ ಹಾಗೂ ಇತರೆ ಸಂಬಂಧಿತ ವ್ಯಕ್ತಿಗಳೂ ನೋಡುವ ನಿಟ್ಟಿನಲ್ಲಿ ವಿಶ್ಲೇಷಿಸಿದ್ದಾರೆ.

About the Author

ಎಂ. ಪ್ರಭಾಕರ ಜೋಷಿ

ಎಂ. ಪ್ರಭಾಕರ್ ಜೋಷಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮಾಳದಲ್ಲಿ 1946 ರಲ್ಲಿ ಜನಿಸಿದರು. ಇವರ ತಂದೆ ನಾರಾಯಣ ಜೋಷಿ; ಪ್ರಸಿದ್ದ  ವಿದ್ವಾಂಸರು ಹಾಗೂ ವಾಗ್ಮಿಗಳು. ಅನಿರುದ್ಧ ಭಟ್ಟರು ಯಕ್ಷಗಾನದ ಅರ್ಥಧಾರಿಗಳು. ಜೋಷಿಯವರು ಇವರಲ್ಲೇ ಯಕ್ಷಗಾನ ಕಲಿತರು. ಎಂ.ಕಾಂ.ಪದವೀಧರರಾದ ಜೋಷಿ, ಹಿಂದಿ ಸಾಹಿತ್ಯ ರತ್ನ ಹಾಗೂ "ಯಕ್ಷಗಾನದಲ್ಲಿ ’ಕೃಷ್ಣ ಸಂಧಾನ`ಪ್ರಸಂಗ" ವಿಷಯದಲ್ಲಿ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದವರು. ಯಕ್ಷಗಾನ ಪರಂಪರೆ, ಅದು ನಡೆದು ಬಂದ ದಾರಿ,ಇತ್ತೀಚೆಗೆ ಬದಲಾವಣೆಗೊಂಡಿರುವ ಕೆಲವು ಸಂಪ್ರದಾಯಗಳ ಸಾಧಕ-ಬಾಧಕಗಳ ಜ್ಞಾನ ಇರುವ ಜೋಷಿ, ಶ್ರೇಷ್ಠ ವಿಮರ್ಶಕರೂ ಹೌದು. ವಿದೇಶಗಳಲ್ಲೂ ಯಕ್ಷಗಾನದ ನೂರಾರು ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ನೂರಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೃಷ್ಣ ಸಂಧಾನ: ಪ್ರಸಂಗ ...

READ MORE

Related Books