ಕ್ರೀಡಾಮಿಂಚು

Author : ಅಂತಃಕರಣ

Pages 300

₹ 270.00
Year of Publication: 2020
Published by: ಮಡಿಲು ಪ್ರಕಾಶನ
Address: ನಂ.77, 2ನೇ ಮುಖ್ಯರಸ್ತೆ, ಐಶ್ವರ್ಯ ನಗರ, ಕುವೆಂಪು ನಗರ, ಎನ್. ಬ್ಲಾಕ್, ಮೈಸೂರು- 570023
Phone: 9844212231

Synopsys

‘ಕ್ರೀಡಾ ಮಿಂಚು’ ಬಾಲ ಸಾಹಿತಿ ಅಂತಃಕರಣನ ಅಂಕಣ ಪ್ರಬಂಧಗಳ ಸಂಕಲನ. 4ನೇ ತರಗತಿಯಿಂದಲೇ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರವಣಿಗೆಯ ಛಾಪು ಮೂಡಿಸುತ್ತಿರುವ ಅಂತಃಕರಣನ ಉತ್ಕಟ ಕ್ರಿಡಾಪ್ರೇಮಿ. ಈತನ ಬರಹಕ್ಕೆ ಬೆರಗಾದರೆಷ್ಟೋ, ಆಡುವ ವಯಸ್ಸಲ್ಲಿ ಅಂಕಣಕಾರನಾದ ಈ ಹುಡುಗ ಇದುವರೆಗೆ 33 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಯಾವ ವ್ಯಕ್ತಿನಿಷ್ಠ ಧೋರಣೆಗಳಿಲ್ಲದೆ. ತನ್ನ ಸೂಕ್ಷ್ಮಮತಿಯಿಂದ ಆಟವನ್ನು, ಆಡುವವರನ್ನು ಆ ಕುರಿತ ಮಾಹಿತಿಯನ್ನು ಹಲವು ಆಯಾಮಗಳಲ್ಲಿ ಕಂಡು, ಬರೆದ ರೀತಿ ಅಚ್ಚರಿ ಮೂಡಿಸುತ್ತದೆ. ಕ್ರೀಡೆಯಲ್ಲಿ ನಿರಾಸಕ್ತಿ ಹೊಂದಿದವರನ್ನೂ ನಿರಾಯಾಸವಾಗಿ ಓದಿಸಬಲ್ಲ ವಿಶೇಷತೆ ಈ ಬರಹಗಳಿವೆ. ಅಂತಃಕರಣನ ಬರಹ ಅತ್ಯಂತ ಸರಳ, ನೇರ, ಸುಲಲಿತವಾಗಿದೆ.

About the Author

ಅಂತಃಕರಣ

ಅಂತಃಕರಣ  ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ  ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ  ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...

READ MORE

Related Books