ಕೃಷ್ಣ ಮಾಸಡಿ ಸಮಗ್ರ ಕತೆಗಳು

Author : ಕೃಷ್ಣ ಮಾಸಡಿ

Pages 320

₹ 350.00




Year of Publication: 2022
Published by: ಶಶಿ ಪಬ್ಲಿಕೇಶನ್ಸ್‌
Address: ರಾಮನಗರ ತಾಲೂಕು, ಜಾಲಮಂಗಲ 562159
Phone: 9448747281

Synopsys

ಕೃಷ್ಣ ಮಾಸಡಿ ಸಮಗ್ರ ಕತೆಗಳು ಅವರ ಈವರೆಗಿನ ಎಲ್ಲ ಕತೆಗಳನ್ನು ಒಳಗೊಂಡು ಪ್ರಕಟವಾಗಿದೆ. ವಿಭಿನ್ನ ಸಂವೇದನೆಯ ಕಥೆಗಾರರಾಗಿರುವ ಮಾಸಡಿಯವರ ಎಲ್ಲ ಕಥೆಗಳನ್ನು ಒಂದೆಡೆಗೆ ಓದಿಕೊಳ್ಳುವ ಅವಕಾಶ ಈ ಕೃತಿಯಿಂದ ದೊರಕಿದಂತಾಗಿದೆ. ಅವರ ಕಥೆಗಳ ವಸ್ತು, ನಿಲುವು ಮತ್ತು ನಿರೂಪಣೆಗಳೆರಡರಲ್ಲೂ ಸೂಕ್ಷ್ಮವಾದ ಬೆಳವಣಿಗೆ ಇರುವುದನ್ನು ಗುರುತಿಸಬಹುದು. ಈ ಬೆಳವಣಿಗೆಗೆ ಅವರು ಅಂತರಂಗ ಮತ್ತು ಬಹಿರಂಗಗಳನ್ನು ಗಮನಿಸಿ ಮಾಗಿರುವುದೇ ಕಾರಣ. ಇನ್ನು ಮುಂದೆ ಈ ಬೆಳವಣಿಗೆಯ ಹಾದಿಯನ್ನು ಕಂಡುಕೊಳ್ಳುವ ಪ್ರಯತ್ನವಿದೆ. ಎಂದು ಎಚ್‌.ಎಸ್‌.ರಾಘವೇಂದ್ರ ರಾವ್‌ ಅವರು ಮುನ್ನುಡಿಯಲ್ಲಿ ಬರೆದಿದ್ದಾರೆ.

About the Author

ಕೃಷ್ಣ ಮಾಸಡಿ

ಹೊನ್ನಾಳಿ ತಾಲ್ಲೂಕಿನ ಮಾಸಡಿಯಲ್ಲಿ ಜನಿಸಿದ ಕೃಷ್ಣ ಮಾಸಡಿಯವರು ಪತ್ರಕರ್ತರಾಗಿ, ಸಾಹಿತಿಯಾಗಿ, ಚಲನಚಿತ್ರ ನಿರ್ದೇಶಕರಾಗಿ ತಮ್ಮ ಪ್ರತಿಭೆಯನ್ನು ಕಾಣಿಸಿದ್ದಾರೆ. 'ಲಂಕೇಶ್ ಪತ್ರಿಕೆ'ಯಲ್ಲಿ ಆರಂಭಿಕ ವರದಿಗಾರರಾಗಿ, ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.ಕರ್ನಾಟಕ ಸರ್ಕಾರದ ಚಲನಚಿತ್ರ ಸಹಾಯಧನ (2012) ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಸಮಿತಿ ಸದಸ್ಯರೂ ಆಗಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಯು.ಆರ್. ಅನಂತಮೂರ್ತಿಯವರ 'ಅವಸ್ಥೆ' ಕಾದಂಬರಿ ಆಧಾರಿತ ಚಲನಚಿತ್ರವನ್ನು ನಿರ್ದೇಶಿಸಿದ್ದವರು ಮಾಸಡಿಯವರು. ತಮ್ಮದೇ ಕಾದಂಬರಿ 'ನಂಬಿಕೆಗಳು ಆಧರಿಸಿದ ಚಲನಚಿತ್ರವನ್ನೂ ನಿರ್ದೇಶಿಸಿದವರು. ಎಸ್. ನಿಜಲಿಂಗಪ್ಪ, ಡಿ. ದೇವರಾಜ ಅರಸು, ಪು.ತಿ.ನ., ಜಿ.ಎಸ್.ಎಸ್., ...

READ MORE

Related Books