ಕೃತಿ ಛಾಯೆ ಪರ ಛಾಯೆ

Author : ಸರೋಜಿನಿ ಭದ್ರಾಪೂರ

Pages 224

₹ 205.00




Year of Publication: 2021
Published by: ನಂದಿತ ಪ್ರಕಾಶನ
Address: #177, ಬಿಲ್ವ ನಿಲಯ, ಎ- ಝೋನ್, 3 ನೇ ಹಂತ, ಜೆ.ಪಿ ನಗರ , ಮೈಸೂರು.
Phone: 9480325033

Synopsys

ಲೇಖಕಿ ಡಾ. ಸರೋಜಿನಿ ಭದ್ರಾಪೂರ ಅವರ ‘ಕೃತಿ ಛಾಯೆ ಪರ ಛಾಯೆ’. ವಿಮರ್ಶಾ ಲೇಖನಗಳ ಗೊಂಚಲವಿದು. ಕೃತಿಗೆ ಮುನ್ನುಡಿ ಬರೆದಿರುವ ಸುನಂದಾ ಕಡಮೆ ಅವರು, ‘ಈ ಕೃತಿಯು ಕೆಲವು ಪುಸ್ತಕಗಳ ಪರಿಚಯವನ್ನಷ್ಟೇ ಅಲ್ಲದೇ, ನಮ್ಮ ಉತ್ತರಕರ್ನಾಟಕದ ಪ್ರಾದೇಶಿಕತೆಯ ವೈಶಿಷ್ಟ್ಯ  ಮತ್ತು ಇಲ್ಲಿಯ ವಿಭಿನ್ನ ವ್ಯಕ್ತಿತ್ವಗಳ ಪರಿಚಯಾತ್ಮಕವಾದ ಹಲವು ಸಂಗತಿಗಳನ್ನೂ ತೆರೆದಿಡುತ್ತದೆ, ಎಂ.ಕೆ. ಶೇಖ ಅವರಂಥ ಯುವ ಕವಿಗಳಿಂದ ಹಿಡಿದು ವಿಜಯಪುರದ ಮಂಗಲಾ ವಿ ಕಪರೆ ಅವರ ಹುಚ್ಚಂಬಿ ಮತ್ತು ಇತರ ಕಥೆಗಳ ಕೃತಿಯತನಕ ಸರೋಜಿನಿಯಕ್ಕನ ಅಗಾಧ ಓದಿನ ವಿಸ್ತಾರವಿದೆ. ಕಲಘಟಗಿಯ ಬಣ್ಣದ ತೊಟ್ಟಿಲಿಂದ ಹಿಡಿದು, ಸವಣೂರಿನ ವೀಳ್ಯದೆಲೆಯತನಕ ಇವರ ಬರಹಗಳ ವೈಶಾಲ್ಯತೆಯಿದೆ. ರೋಣದ ಹೊಳೆ ಆಲೂರಿನ ಕಟ್ಟಿಗೆ ಬಾಗಿಲು, ನವಲಗುಂದದ ಜಮಖಾನೆಗಳ ಕುರಿತಾಗಿ ಸಮಗ್ರವಾಗಿ ಗ್ರಹಿಸುತ್ತ ಸರೋಜಿನಿಯಕ್ಕ ಮತ್ತೆ ಮತ್ತೆ ನಮ್ಮ ಶ್ರಮ ಸಂಸ್ಕೃತಿಗಳ ಕೊಡುಗೆಗಳನ್ನು ನೆನಪಿಸಿಕೊಳ್ಳುವಂತೆ ಬರೆಯುತ್ತಾರೆ. ಭವ್ಯ ಪರಂಪರೆಯ ಲಕ್ಕುಂಡಿ ಮತ್ತು ಕರ್ನಾಟಕದ ಕಸೂತಿ ಕಲೆ ಇಂಥ ಲೇಖನಗಳಲ್ಲಿ ಅವುಗಳ ಏಳು-ಬೀಳುಗಳನ್ನು ಚಿತ್ರಿಸುತ್ತಿವೆ. ಉತ್ಸಾಹೀ ಯುವ ಲೇಖಕ ಎಂಕೆ ಶೇಖ ಅವರ ಕವನದಲ್ಲಿರುವ ಕರುಣೆ ಪ್ರೀತಿ- ಕ್ರೋಧ-ಮಮತೆ- ಸಮಾಜಪರ ಕಳಕಳಿಯನ್ನು ಲೇಖಕಿಯು ಪರಿಚಯಿಸುತ್ತಲೇ ಅವರ ಇನ್ನೊಂದು ಕೃತಿ 'ಜಾತಿಗಳ ಜಾಲದಿಂದ' ಬಗ್ಗೆಯೂ 'ನೀನೂ ಬದುಕು, ಇತರರನ್ನೂ ಬದುಕಲು ಬಿಡು' ಎಂಬುದು ಈ ಕಾದಂಬರಿಯ ಆಶಯವಾಗಿದೆ ಎಂದು ಗುರುತಿಸುತ್ತಾರೆ. ಮಹೇಶ ಕೆ ವಡ್ಡಿನ ಅವರ 'ಹೃದಯ ಸ್ಪರ್ಶಿ' ಕೃತಿಯನ್ನು ಪರಿಚಯಿಸುತ್ತ, ಅವರ ಸಂವೇದನಾಶೀಲತೆ ಮತ್ತು ಸೃಜನಶೀಲತೆಯನ್ನು ಗುರುತಿಸಿ ಬರೆದಿದ್ದಾರೆ. ಕವಿತಾ ಮಳಗಿ ಅವರ ಜಂಗಮ ಜ್ಯೋತಿಯ ಕುರಿತು ಬರೆಯುತ್ತ, ಭಾವನೆಗಳಿಗೆ ತಕ್ಕಂತಹ ಅವರ ಪದಗಳ ಜೋಡಣೆಯನ್ನು ಮೆಚ್ಚಿಕೊಂಡಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. .

About the Author

ಸರೋಜಿನಿ ಭದ್ರಾಪೂರ - 20 May 2022)

ಡಾ. ಸರೋಜಿನಿ ಭದ್ರಾಪೂರ ಅವರು ಕವಯತ್ರಿ, ಕತೆಗಾರ್ತಿ. ವಚನ ವಿಶ್ಲೇಷಣಾಕಾರ್ತಿ. ಕವನ ಸಂಕಲನ, ಸಣ್ಣಕತೆ, ಕಾದಂಬರಿಗಳನ್ನು ಬರೆದಿದ್ದಾರೆ. ‘ಹೆಸ್ಕಾಂ’ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 2022 ಮೇ 20 ರಂದು ಮರಣ ...

READ MORE

Related Books