ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ

Author : ಎಸ್. ದಿವಾಕರ್‌

Pages 176

₹ 160.00




Year of Publication: 2018
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮಿಭವನ, ಸುಭಾಷ್ ರಸ್ತೆ, ಧಾರವಾಡ - 580001.
Phone: 08362441822

Synopsys

ಲೇಖಕ ಎಸ್. ದಿವಾಕರ್ ಅವರು ಸಂಗ್ರಹಿಸಿದ ಈ ಪುಸ್ತಕವು ಹಲವು ದೇಶಗಳ ಅತಿಸಣ್ಣ ಕತೆಗಳನ್ನು ಒಳಗೊಂಡಿರುವಂತದ್ದು. ಸುಮಾರು 66 ಕತೆಗಳನ್ನು ಒಳಗೊಂಡಿರುವ ಈ ಹೊತ್ತಿಗೆ ಫ್ರಾನ್ಸ್, ರಷ್ಯಾ, ಪೋರ್ಚುಗೀಸ್, ಸ್ಪ್ಯಾನಿಶ್, ಅಮೆರಿಕ, ಸ್ವಿಡನ್, ದಕ್ಷಿಣ ಆಫ್ರಿಕಾ, ಅರ್ಜೆಂಟೀನಾ, ಇಸ್ರೆಲ್, ಗ್ರೀಸ್, ಹಂಗೇರಿ ಇನ್ನೂ ಹಲವಾರು ದೇಶಗಳ ಲೇಖಕರ ಕತೆಗಳನ್ನು ಕನ್ನಡಕ್ಕೆ ತಂದಿರುವುದು ಲೇಖಕರ ಎಲ್ಲ ಭಾಷೆಯ, ಎಲ್ಲ ಕಾಲದ, ಎಲ್ಲ ರೀತಿಯ ಬರಹಗಳ ಆಸಕ್ತಿಯನ್ನು ತಿಳಿಸುವಂತದ್ದು. ಸಾಹಿತ್ಯ ಲೋಕದ ಎಲ್ಲಾ ಆಯಾಮಗಳನ್ನೂ ದಿವಾಕರ್ ಮನಗಂಡವರು, ಅಂತೆಯೇ ಅವರ ಈ ಪುಸ್ತಕವು ಹಲವು ದೇಶಗಳ ಅತಿಸಣ್ಣ ಕತೆಗಳ ವಿವಿಧ ಸ್ತರಗಳನ್ನೂ ನಮಗೆ ಪರಿಚಯಿಸುವ ಬೃಹತ್ ಕಥಾ ವೃಕ್ಷವಾಗಿದೆ. ಜಗತ್ತಿನ ಸಣ್ಣಕತೆಗಳ ಹೊಸ ಸಾಧ್ಯತೆಗಳನ್ನು ತೆರೆದು, ದೇಸೀ ನೆಲೆಯಲ್ಲಿ ಕನ್ನಡಕ್ಕೆ ತಂದಿರುವ ಈ ಪುಸ್ತಕವು ಕನ್ನಡ ಕಥನ ಲೋಕಕ್ಕೆ ಅಪೂರ್ವ ಕೃತಿಯೆಂದೇ ಹೇಳಬಹುದು.

ಕನ್ನಡಕ ಸಾಹಿತ್ಯ ಜಗತ್ತಿಗೆ ಹೊರಗಿನ ಗಾಳಿ, ಬೆಳಕು ತಂದು ಸುರಿಯುವ ಮೂಲಕ ಒಳಗಿನ ಜಗತ್ತಿನ ಆರೋಗ್ಯ ಕಾಪಿಡುವ ಕೆಲಸವನ್ನೂ ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಈ ಕೃತಿಯಲ್ಲಿರುವ ಹಲವು ಸಣ್ಣ ಕಥೆಗಳು ಪುಟದಲ್ಲಿ ಬಹುಬೇಗ ಮುಗಿದು ಹೋದರೂ ಮನಸಲ್ಲಿ ಬೆಳೆಯುತ್ತಲೇ ಹೋಗುತ್ತವೆ. ರಾಜಕೀಯ, ಸಾಮಾಜಿಕ, ಮಹಿಳಾ ಸಬಲೀಕರಣ, ಯುದ್ಧ, ಕ್ರೌರ್ಯ, ಅಸಹಾಯಕತೆ, ವ್ಯವಸ್ಥೆಯ ಮುಖವಾಡಗಳ ಬಿಂಬಗಳನ್ನು ‌ಬಹುಸೂಚ್ಯವಾಗಿ, ಸ್ಪಷ್ಟವಾಗಿ ಲೇಖಕರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

About the Author

ಎಸ್. ದಿವಾಕರ್‌
(28 November 1944)

ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು.  ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್‌, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು. ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ  ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ ...

READ MORE

Related Books