ಕ್ರಿಯೆ ಪ್ರತಿಕ್ರಿಯೆ

Author : ಕೆ. ಕೇಶವ ಶರ್ಮ

Pages 144

₹ 28.00




Year of Publication: 1992
Published by: ಅನ್ವೇಷಣೆ ಪ್ರಕಾಶನ
Address: 10-11, ಮಾತಾ ತನಿಷಾ ಅಪಾರ್ಟ್ಸ್ ಮೆಂಟ್ಸ್, 4ನೇ ತಿರುವು, ಕೆ.ಎಸ್.ಆರ್.ಟಿ.ಸಿ ಲೇಔಟ್, ಚಿಕ್ಕಲಸಂದ್ರ- 560061
Phone: 99005 66020

Synopsys

‘ಕ್ರಿಯೆ ಪ್ರತಿಕ್ರಿಯೆ’ ಲೇಖಕ, ವಿಮರ್ಶಕ ಕೇಶವ ಶರ್ಮ ಅವರ ಲೇಖನ ಸಂಕಲನ. ಸಮಕಾಲೀನ ಬಂಡಾಯ ಸಾಹಿತ್ಯ ಚಳವಳಿಯ ಕ್ರಿಯಾಶೀಲ ವಿಮರ್ಶಕರಲ್ಲಿ ಡಾ|| ಕೇಶವ ಶರ್ಮ ಪ್ರಮುಖರು. ಪಾಶ್ಚಾತ್ಯ ಸಾಹಿತ್ಯ ಮೀಮಾಂಸೆಯ ಆಳ ಅಧ್ಯಯನದ ಜೊತೆಗೆ, ಭಾರತೀಯ ಸಾಹಿತ್ಯ ಸಿದ್ಧಾಂತಗಳನ್ನು ಮೇಲೈಸುವ ಇವರ ವಿಮರ್ಶೆಯ ದಿಕ್ಕು ಜನಪರ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಕಬ್ಬಿಣದ ಕಡಲೆಯಂಥ ವಿಷಯಗಳನ್ನು ಕುರಿತು ಓದುಗರೊಂದಿಗೆ ಇಲ್ಲಿ ಶರ್ಮ ಸಂವಾದ ನಡೆಸಿದ್ದಾರೆ. ವಿಮರ್ಶೆಯ ತತ್ವಗಳಿಂದ ಪ್ರಾರಂಭಿಸಿ, ಸಾಹಿತ್ಯದಲ್ಲಿ ವಸ್ತು ವಿನ್ಯಾಸ ಹಾಗೂ ರಚನೆಯ ಸಮಸ್ಯೆಗಳನ್ನು ಕುರಿತೂ ಚರ್ಚಿಸಿದ್ದಾರೆ. ಪ್ರಾಚೀನ ಸಾಹಿತ್ಯದಿಂದ ಬಂಡಾಯ - ಸಾಹಿತ್ಯದವರೆಗೆ ಮುಕ್ತ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ತವಕ ತೋರಿಸಿದ್ದಾರೆ.

ವಿಮರ್ಶೆಯ ಹೊಸ ಸಾಧ್ಯತೆಗಳನ್ನು ತೆರೆಯುವ ಸ್ತ್ರೀವಾದಿ ವಿಮರ್ಶೆಯು ಇವರ ಮತ್ತೊಂದು ಆಸಕ್ತಿ, ಸ್ತ್ರೀವಾದಿ ವಿಮರ್ಶೆಯನ್ನು ಕುರಿತ ಇಲ್ಲಿನ ಸುದೀರ್ಘ ಲೇಖನ ಪುರುಷ ಕೇಂದ್ರಿತ ಚಿಂತನವಾಗದೆ, ಹೆಂಗರುಳಿನಿಂದ ಚಿಮ್ಮುವ ಜೀವ ಕಾರಂಜಿಯೆನ್ನಿಸುತ್ತದೆ. ಹೆಣ್ತನದ ಆರೋಪದಿಂದ ಮಹಿಳಾ ಸಾಹಿತ್ಯವನ್ನು ಮುಕ್ತಗೊಳಿಸುವ ಪ್ರಾಮಾಣಿಕ ಮನಸ್ಸು ಶರ್ಮ ಅವರ ಚಿಂತನ ಕ್ರಮದ ಒತ್ತಾಸೆಯಾಗಿ ಕೆಲಸ ಮಾಡಿದೆ. ಮಾರ್ಕ್ಸ್‌ವಾದಿ ಸಿದ್ಧಾಂತದ ಆರೋಗ್ಯಕಾರಿ ನಿಲುವುಗಳ ಜೊತೆ ಸಮಾಜಶಾಸ್ತ್ರ, ಮನಃಶಾಸ್ತ್ರಗಳು ಇವರ ವಿಮರ್ಶೆಯ ಮುಖ್ಯ ಕಾಳಜಿಗಳಾಗಿದ್ದರೂ, ಫೆಮಿನಿಸ್ಟರೂ ಒಪ್ಪಬಹುದಾದ ವಿಚಾರಗಳನ್ನು ನಮ್ಮ ಮುಂದಿಡುವುದು ವಿಸ್ಮಯಕರ ಸಂಗತಿಯಾಗಿದೆ. ಈವರೆಗಿನ ವಿಮರ್ಶೆಯ ಅಧ್ಯಯನದ ಸೂಕ್ಷ್ಮಗ್ರಾಹಿ ಪ್ರತಿಕ್ರಿಯೆಯೊಂದು ತೆರೆದ ಮನಸ್ಸಿನಿಂದ ಇಲ್ಲಿ ಬಿಚ್ಚಿಕೊಳ್ಳುತ್ತದೆ. ಇಲ್ಲಿ ಸರಳತೆಗಿಂತಲೂ ಸಂಕೀರ್ಣತೆ ಮೇಲುಗೈ ಪಡೆದಿದೆಯೆನ್ನಿಸಿದರೂ, ಸೀರಿಯಸ್ ವಿದ್ಯಾರ್ಥಿಗಳ ಚಿಂತನೆಗೆ ಸಮೃದ್ಧ ಆಹಾರವನ್ನು ಶರ್ಮರು ಈ ಕೃತಿಯಲ್ಲಿ ನೀಡುತ್ತಾರೆ.

 

About the Author

ಕೆ. ಕೇಶವ ಶರ್ಮ

ಲೇಖಕ ಕೇಶವ ಶರ್ಮ ಕೆ. ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ಹತ್ತಿರವಿರುವ ಕೋಡಂದೂರಿನವರು. ತಂದೆ ದಿವಂಗತ ಕೆ.ಕೆ. ನರಸಿಂಹಭಟ್ಟ, ತಾಯಿ ಕೆ.ಎನ್.ಸೀತಾ. ಲೇಖಕಿ ಸಬಿತಾ ಬನ್ನಾಡಿ ಕೇಶವ ಶರ್ಮ ಅವರ ಬಾಳ ಸಂಗಾತಿ. ಯಕ್ಷಗಾನದತ್ತ ಒಲವಿದ್ದ ಕೇಶವ ಶರ್ಮ ಅವರು ಹವ್ಯಾಸಿ ಯಕ್ಷಗಾನದ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿಂಗನ ಮನೆ ಗ್ರಾಮ ಶಾಂತಿನಗರದಲ್ಲಿ ನೆಲೆಸಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೇಶವ ಶರ್ಮ ಅವರು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ವಿಷಯದಡಿ ಪಿಎಚ್.ಡಿ ...

READ MORE

Related Books