ಕ್ಷತ್ರಿಯ ಕುಲಾವತಂಸ

Author : ಶೋಭಾ ರಾವ್

Pages 300

₹ 210.00




Year of Publication: 2022
Published by: ಅವನಿ ಪ್ರಕಾಶನ

Synopsys

ಲೇಖಕಿ ಶೋಭಾ ರಾವ್‌ ಅವರು ಬರೆದ ಛತ್ರಪತಿ ಶಿವಾಜಿ ಅವರ ಜೀವನ ಚರಿತ್ರೆ ಕೃತಿ ʻಕ್ಷತ್ರಿಯ ಕುಲಾವತಂಸ: ಹುಲಿಯ ಹೆಜ್ಜೆಯ ಗುರುತುʼ. ಪುಸ್ತಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜೀವನದ ವಿಚಾರಗಳನ್ನು, ಅವರು ಸ್ಥಾಪಿಸಿದ ಮರಾಠಾ ರಾಜ್ಯ, ಶೌರ್ಯ, ಸಾಹಸ ಹಾಗೂ ರಾಷ್ಟ್ರಭಕ್ತ ಆಡಳಿತಗಾರೆರಾಗಿ ಭಾರತದಚರಿತ್ರೆಯಲ್ಲಿ ಸ್ಥಾನಪಡೆದುಕೊಂಡದ್ದು ಹೀಗೆ ಹಲವಾರು ಮಾಹಿತಿಗಳನ್ನು ಹೇಳಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ ಲೇಖಕ ಮುನಿಯಾಲ್‌ ಗಣೇಶ್‌ ಶೆಣೈ ಅವರು, “ಸಹೋದರಿ ಶೋಭಾ ರಾವ್ ಅವರು ನಾಡಿಗೆ ನೀಡಿರುವ ಈ ಕೃತಿ ಇಂದು ಮತ್ತು ಮುಂದೂ ಅಸಂಖ್ಯಾತ ಜನರಲ್ಲಿ ಒಂದು ನಿಟ್ಟುಸಿರು ಮೂಡಿಸುವುದರಲ್ಲಿ ಸಂದೇಹವಿಲ್ಲ” ಎಂದು ಹೇಳಿದ್ದಾರೆ.

About the Author

ಶೋಭಾ ರಾವ್

ಶೋಭಾ ರಾವ್ ಮಲೆನಾಡಿನ ತೀರ್ಥಹಳ್ಳಿಯವರು. ಚಿಕ್ಕಂದಿನಿಂದ ಓದುವ, ಬರೆಯುವ ಹವ್ಯಾಸ. ಕನ್ನಡದ ಹಲವಾರು ಪತ್ರಿಕೆಗಳಿಗೆ ಅಂಕಣಗಳನ್ನು ಬರೆದಿದ್ದಾರೆ. ಅಂಕಣಗಳ ಮೂಲಕ ಶುರುವಾದ ಪಯಣ ಕಾದಂಬರಿಯವರೆಗೆ ಬಂದು ನಿಂತಿದೆ. ಈವರೆಗೆ ಎರಡು ಚಾರಿತ್ರಿಕ ಕಾದಂಬರಿ ಹಾಗೂ ಎರಡು ಪ್ರಬಂಧ ಸಂಕಲನಗಳು ಪ್ರಕಟವಾಗಿವೆ. ಕೃತಿಗಳು: ಮಹಾ ಮಾರಣಹೋಮ!, ಧೃತಿಗೆಡದ ಹೆಜ್ಜೆಗಳು, ಕ್ಷತ್ರಿಯ ಕುಲಾವತಂಸ, ಹನಿ ಕಡಿಯದ ಮಳೆ. ...

READ MORE

Related Books