ಕುಡ್ಪಿ ವಾಸುದೇವ ಶೆಣೈ

Author : ಸಬಿಹಾ ಭೂಮಿಗೌಡ

Pages 48

₹ 33.00




Year of Publication: 2007
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

  ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 18ನೇ ಪುಸ್ತಕ ಒಂದಾಣೆ ಮಾಲೆಯ ಸಾಹಸಿ ಕುಡ್ಪಿ ವಾಸುದೇವ ಶೆಣೈ. ಹೊಸಗನ್ನಡ ಸಾಹಿತ್ಯದಲ್ಲಿ ದಕ್ಷಿಣ ಕನ್ನಡದ ಎರಡನೇ ತಲೆಮಾರಿನ ಬರಹಗಾರರಲ್ಲಿ ಕುಡ್ಪಿ ವಾಸುದೇವ ಶೆಣೈ ಅವರ ಕೊಡುಗೆ ಅನನ್ಯ. ಕತೆಗಾರ, ನಾಟಕಕಾರ, ವಿನೋದ ಮತ್ತು ವಿಡಂಬನಾ ಸಾಹಿತ್ಯದಲ್ಲಿ ಗಣನೀಯ ಕೆಲಸ ಮಾಡಿದ ಅವರು ಪತ್ರಿಕೋದ್ಯಮಿಯೂ ಹೌದು. ರಂಗಪ್ರಯೋಗಕರ್ತರಾಗಿದ್ದ ಅವರು ಕನ್ನಡ ಸಾಹಿತ್ಯದ ಆಳ ಅಗಲವನ್ನು ಸದ್ದಿಲ್ಲದೆ ವಿಸ್ತರಿಸಿದವರು. ಕನ್ನಡ ಓದುಗ ವಲಯವನ್ನು ಬೆಳೆಸುವಲ್ಲಿ, ಸಾಹಿತ್ಯವನ್ನು ಓದುಗರ ಬಳಿ ಕೊಂಡೊಯ್ಯುವಲ್ಲಿ, ಹೊಸ ತಲೆಮಾರಿನ ಲೇಖಕರ ಪಡೆಯನ್ನು ನಿರ್ಮಾಣ ಮಾಡುವಲ್ಲಿ, ತನಗಿಂತ ಹಿರಿಯ ಕಿರಿಯ ಮತ್ತು ಸಮಕಾಲೀನ ಬರಹಗಾರರನ್ನು ಒಗ್ಗೂಡಿಸುವಲ್ಲಿ ಅವರ ಕಾಯಕ ದೊಡ್ಡದು. ಅವರ ಜೀವನ ನಿಷ್ಠೆ, ಪ್ರಾಮಾಣಿಕತೆ ಮತ್ತು ಶ್ರದ್ಧೆ ಇಂದು ಕನ್ನಡ ಕಟ್ಟುವವರ ಮುಂದೆ ಹಚ್ಚಿಟ್ಟ ನಂದಾದೀಪ.  ಅವರನ್ನು ಪರಿಚಯಿಸುವ ಕೃತಿ.

About the Author

ಸಬಿಹಾ ಭೂಮಿಗೌಡ
(04 July 1959)

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಸಬಿಹಾ ಭೂಮಿಗೌಡ ಮೂಲತಃ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡದವರು.  ತಂದೆ ಎಂ.ಆರ್. ಗಜೇಂದ್ರಗಡ, ತಾಯಿ ಸಾಹಿರಾ. ಎಂ.ಎ., ಪಿಎಚ್.ಡಿ. ಪಡೆದು ಪ್ರಾಧ್ಯಾಪಕಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು, ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಗೆ (ವಿಮರ್ಶೆ) 2001, ಚಿತ್ತಾರ (ಕಾವ್ಯ) 2004, ಕನ್ನಡ ಭಾಷಾ ಪ್ರವೇಶ (ಸಹಲೇಖಕರೊಂದಿಗೆ) 2005, ನಿಲುಮೆ (ವಿಮರ್ಶೆ) 2005, ನುಡಿಗವಳ ...

READ MORE

Related Books