ಕುಹು ಕುಹು ಕೋಗಿಲೆ

Author : ಬಾಗೂರು ಮಾರ್ಕಾಂಡೇಯ

Pages 80

₹ 50.00




Year of Publication: 2013
Published by: ಅರ್ಕಾವತಿ ಪ್ರಕಾಶನ, ಬೆಂಗಳೂರು
Address: ನಂ. 2, 91/2ನೇ ಮುಖ್ಯರಸ್ತೆ, ವಿ. ಆರ್. ಬ್ಲಾಕ್, ಜಿ.ಆರ್.ನಗರ, ಬೆಂಗಳೂರು-40
Phone: 08023114062

Synopsys

ಕುಹು ಕುಹು ಕೋಗಿಲೆ -ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ಬರೆದ ಕವನಗಳಿವು. ಪ್ರತಿ ಕವನಕ್ಕೂ ಅದರದೇ ಭಾವ ಚಿಮ್ಮುವ ಹಾಗೆ ಚಿತ್ರಗಳನ್ನು ವಿನ್ಯಾಸ ಮಾಡಿದ್ದು ವಿಶೇಷ. ಮಕ್ಕಳಿಗೆ ಇಷ್ಟವಾಗುವಂಥ ಕವಿತೆಗಳಿವೆ. ಮುನ್ನುಡಿ ಬರೆದ ಡಾ. ದೊಡ್ಡರಂಗೇಗೌಡರು ‘ಕವಿಯು ಈ ಕವಿತೆಗಳಲ್ಲಿ ತಮ್ಮ ಸಾಧನೆಯ ಹೆಜ್ಜೆಗಳನ್ನು ಗುರುತಿಸಿದ್ದಾರೆ. ಕಿರಿಯರ ಮನೋಲೋಕದ ನುಡಿನುಡಿಯಲ್ಲಿ ಈ ಕಲೆಯು ಅನಾವರಣಗೊಂಡಿದೆ. ಚಿತ್ರಗಳಿಂದ ತುಂಬಿದೆ. ಈ ಕವಿ ಲಯಗಾರಿಕೆಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ. ಇವುಗಳಿಗೆ ಸ್ವರ ಸಂಯೋಜನೆ ಬಹಳ ಸುಲಭ. ಸ್ವರಪ್ರಸ್ತಾರ ಹಾಕಲು ಈ ಹಾಡುಗಳು ಸೂಕ್ತವಾಗಿವೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books