ಕುಮಾರವ್ಯಾಸ ಮಹಾಕವಿಯ ಕರ್ನಾಟ ಭಾರತ ಕಥಾಮಂಜರಿ

Author : ಕುವೆಂಪು (ಕೆ.ವಿ. ಪುಟ್ಟಪ್ಪ)

Pages 676




Year of Publication: 1958
Published by: ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ
Address: ಮೈಸೂರು

Synopsys

ಕುಮಾರವ್ಯಾಸ ಭಾರತವು ಕಲಿಯದವರಿಗೂ ಕಾಮಧೇನು ಎನ್ನುವ ಮಾತು ಅದರ ಸರಳತೆಗೆ ಸಾಕ್ಷಿ ನುಡಿಯುತ್ತದೆ. ಈ ಮಹಾಕಾವ್ಯ ಬರೆದರೂ ಕವಿ ಕುಮಾರ ವ್ಯಾಸ ಮಾತ್ರ ತಾನು ಲಿಪಿಕಾರ ಎಂದೇ ಹೇಳಿಕೊಳ್ಳುತ್ತಾನೆ. ನೈಜ ಕವಿಗೆ ಇಂತಹ ವಿನಮ್ರತೆ ಇರಬೇಕು ಎನ್ನುವುದಕ್ಕೆ ಕುಮಾರವ್ಯಾಸನೇ ಸಾಕು.

ಆದಿಪರ್ವದಲ್ಲಿ ಭಾರತ ಕಥಾರಂಭ, ಕರ್ಣನನ ಜನನ, ಕುರುಪಾಂಡವ ಜನನ ಹೀಗೆ 20 ಅಧ್ಯಾಯಗಳಿದ್ದು, ಸಭಾಪರ್ವದಲ್ಲಿ ರಾಜಸಯಾರಂಭ, ಜರಾಸಂಧನ ವಧೆ ಹಾಗೂ ಪಾರ್ಥ ದಿಗ್ವಿಜಯ ಸೇರಿದಂತರೆ 16 ಅಧ್ಯಾಯಗಳು, ಅರಣ್ಯ ಪರ್ವದಲ್ಲಿ ವನ ಪ್ರವೇಶ, ಕಿಮ್ಮೂರು ವಧೆ, ಶ್ರೀಕೃಷ್ಣ ಸಂದರ್ಶನ ಸೇರಿದಂತೆ ಒಟ್ಟು 23 ಅಧ್ಯಾಯಗಳು, ವಿರಾಟ ಪರ್ವದಲ್ಲಿ ವಿರಾಟನಗರ ಪ್ರವೇಶ, ದ್ರೌಪದಿಯಲ್ಲಿ ಕೀಚಕ ನೆನೆದ ವಿಷಮ ಮೋಹ, ಭೀಮನಿಂದ ಕೀಚಕ ವಧೆ ಸೇರಿದಂತೆ 10 ಅಧ್ಯಾಯಗ:ಳು ಹಾಗೂ ಉದ್ಯೋಗ ಪರ್ವದಲ್ಲಿ ಭಕ್ತ ಕುಟುಂಬಿ ಅರ್ಜುನನ ಸಾರಥಿಯಾಗುವುದು, ಶಲ್ಯನನ್ನು ಕೌರವ ಒಲಿಸಿಕೊಂಡುದು ಸೇರಿದಂತೆ 10 ಅಧ್ಯಾಯಗಳು ಮತ್ತು ದ್ರೋಣಪರ್ವ, ಕರ್ಣಪರ್ವ, ಶಲ್ಯ ಪರ್ವ ಗದಾಪರ್ವ ಹೀಗೆ ಅಂತಿಮವಾಗಿ ಧರ್ಮರಾಜನ ಪಟ್ಟಾಭಿಷೇಕವರೆಗೂ ಕಥಾ ಸಾಹಿತ್ಯವು ನಿರರ್ಗಳವಾಗಿ ಧುಮ್ಮಿಕ್ಕುತ್ತದೆ. ಕವಿ ಕುವೆಂಪು ಹಾಗೂ ಕಥೆಗಾರ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕುಮಾರವ್ಯಾಸನ ಕಾವ್ಯ ಸೌರಭವನ್ನು ತುಂಬಾ ನಯನಾಜೂಕಾಗಿಯೇ ಒಂದೆಡೆ ಕಟ್ಟಿಕೊಟ್ಟ ಅದ್ಭುತ ಕೃತಿ ಇದು.

About the Author

ಕುವೆಂಪು (ಕೆ.ವಿ. ಪುಟ್ಟಪ್ಪ)
(29 December 1904 - 11 November 1994)

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...

READ MORE

Related Books