ಕುಮಾರವ್ಯಾಸನ ಕಾವ್ಯ ಚಿತ್ರಗಳು

Author : ಎ.ವಿ. ಪ್ರಸನ್ನ

Pages 748

₹ 300.00




Year of Publication: 2010
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560071
Phone: 080-22107773

Synopsys

ಗದುಗಿನ ನಾರಾಯಣಪ್ಪರವರು ’ಕುಮಾರವ್ಯಾಸ “ ಎಂಬ ಕಾವ್ಯ ನಾಮದಿಂದ ಪ್ರಸಿದ್ದಿಯಾದವರು. ಅವರು ಕನ್ನಡದ ಅತ್ಯುನ್ನತ ಕವಿ ಮತ್ತು ಮಾತ್ರವಲ್ಲದೆ , ಕನ್ನಡ ಸಾಹಿತ್ಯ ದಿಗ್ಗಜರಲ್ಲಿ ಒಬ್ಬರು. ಕುಮಾರವ್ಯಾಸನ ಕುರಿತು ಇಲ್ಲಿಯವರೆಗೆ ಬಂದಿರುವ ಅನೇಕ ಕೃತಿಗಳಲ್ಲಿ ಈ ಕೃತಿಯೂ ವಿಶಿಷ್ಟವಾದುದು. ಈ ಮಹಾ ಪ್ರಬಂಧದಲ್ಲಿ ಮೊದಲ ಸಲ ಕುಮಾರವ್ಯಾಸ ಭಾರತವನ್ನು ಲಕ್ಷ್ಯದಲ್ಲಿಟ್ಟುಕೊಂಡು ಕ್ರಮವಾಗಿ ಅದರ ಸನ್ನಿವೇಶಗಳನ್ನು ವ್ಯಾಖ್ಯಾನಿಸುವ ಮತ್ತು ವಿಮರ್ಶಿಸುವ ಪ್ರಯತ್ನವನ್ನು ಡಾ. ಎ.ವಿ.ಪ್ರಸನ್ನ ಮಾಡಿದ್ದಾರೆ.

About the Author

ಎ.ವಿ. ಪ್ರಸನ್ನ
(18 August 1950)

ಕುಮಾರವ್ಯಾಸನ  ಭಾರತ ಕಥೆಯನ್ನು ಗಮಕ ವ್ಯಾಖ್ಯಾನ ಮಾಡುವ ಮೂಲಕ ತಮ್ಮದೇ ಛಾಪು ಮೂಡಿಸಿದವರು ಎ.ವಿ.ಪ್ರಸನ್ನ. ಹಾಸನ ಜಿಲ್ಲೆಯ ಆಲೂರು ತಾಲೂಕಿನ (ಜನನ: 18-08-1950) ಪೊನ್ನಾಥಪುರದವರು. ತಾಯಿ ಪಾರ್ವತಮ್ಮ ತಂದೆ ಎ.ಜಿ.ವೆಂಕಟನಾರಾಯಣಪ್ಪ. ಪೊನ್ನಾಥಪುರ ಮತ್ತು ಗೊರೂರಿನಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಬೆಂಗಳೂರಿನಲ್ಲಿ ವೃತ್ತಿಜೀವನದ ಜೊತೆ ಜೊತೆಗೆ ಸಂಜೆ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪೂರೈಸಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಕಾನೂನು ಪದವೀಧರರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೂಲಕ ‘ಕುಮಾರವ್ಯಾಸನ ಕಾವ್ಯ ಚಿತ್ರಗಳು ಒಂದು ಅಧ್ಯಯನ’ ವಿಷಯ ಕುರಿತು ಮಹಾಪ್ರಬಂಧ ಮಂಡಿಸಿ ಡಿ.ಲಿಟ್ ಪದವಿಗೆ ಭಾಜನರಾದರು. ಬೆಂಗಳೂರಿನ ಜೆ.ಕೆ.ಡಬ್ಲ್ಯೂ ಕಾರ್ಖಾನೆಯಲ್ಲಿ ಉದ್ಯೋಗ,  ಎಂ.ಇ.ಎಸ್ ಸಂಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಕರ್ನಾಟಕ ಆಡಳಿತ ಪರೀಕ್ಷೆಯಲ್ಲಿ ...

READ MORE

Related Books