ಕುಂಚಿಟಿಗರ ಮಹಾಪುರಾಣ

Author : ಶಿವರಾಮಯ್ಯ

Pages 71

₹ 50.00




Year of Publication: 2012
Published by: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್
Address: # 176, ಗೌಂಡ್ ಫ್ಲೋರ್‌, 12ನೇ ಮೇನ್, ಮಾಗಡಿ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ, ಬೆಂಗಳೂರು - 79

Synopsys

"ಕುಂಚಿಟಿಗ" ಜನಾಂಗ ಶತಶತಮಾನಗಳಿಂದ ತಮ್ಮದೇ ಆದ ಸಂಸ್ಕೃತಿ ಹಾಗು ಸಂಪ್ರದಾಯಗಳನ್ನು ಕಾಪಾಡಿಕೊಂಡುಬಂದವರು. ತಮ್ಮ ಸಂಸ್ಕೃತಿ ಹಾಗು ಸಂಪ್ರದಾಯಗಳಿಗೆ ಧಕ್ಕೆಯಾದಾಗ, ಪರಕೀಯರಿಂದ ದಾಳಿಯಾದಾಗ ತಮ್ಮ ಕುಲ, ಗೋತ್ರ, ಬೆಡಗುಗಳನ್ನು ಬಿಟ್ಟು ಕೊಡದೆ, ತಾವು ನೂರಾರು ವರ್ಷಗಳಿಂದ ನೆಲೆಸಿದ ನಾಡನ್ನೇ ತೊರೆದು ಬಂದವರು. ಕುಂಚಿಟಿಗರ 48 ಕುಲಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕುಂಚಿಟಿಗರು ತಮ್ಮ ಕುಲ, ಗೋತ್ರ, ಬೆಡಗುಗಳ ವಿಭಾಗವನ್ನು ಪ್ರಾಣಿಪಕ್ಷಿ, ಗಿಡಮರಬಳ್ಳಿ, ದವಸಧಾನ್ಯ, ರಾಜಮನೆತನ, ಸೈನಿಕ, ನಂಬಿಕೆ ಮತ್ತು ವಿವಿಧ ವೃತ್ತಿಗಳ ಹೆಸರಿನಲ್ಲಿ ವಿಂಗಡಿಸಿಲಾಗಿದೆ. ಹೀಗೆ ಹಲವಾರು ವರ್ಷಗಳ ಇತಿಹಾಸಗಳನ್ನೊಳಗೊಂಡ ’ಕುಂಚಿಟಿಗ’ ಸಮುದಾಯದ ಸಂಪೂರ್ಣ ಮಾಹಿತಿ ’ಕುಂಚಿಟಿಗರ ಮಹಾಪುರಾಣ’ದಲ್ಲಿದೆ. ಆಲೇನಳ್ಳಿ ಕರೇಗೌಡ ವಿರಚಿತ (ಕ್ರಿ.ಶ.೧೯೩೫) ಈ ಕೃತಿಯನ್ನು ಪ್ರೊ. ಶಿವರಾಮಯ್ಯನವರು ಪರಿಷ್ಕರಿಸಿ ಇಲ್ಲಿ ನೀಡಿದ್ದಾರೆ.

About the Author

ಶಿವರಾಮಯ್ಯ
(10 August 1940)

ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್‌ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.  ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...

READ MORE

Related Books