ಕುಂದಾಪ್ರ ಕನ್ನಡ ನಿಘಂಟು

Author : ಪಂಜು ಗಂಗೊಳ್ಳಿ

Pages 700

₹ 600.00




Year of Publication: 2020
Published by: ಪ್ರೊ-ಡಿಜಿ ಪ್ರಿಂಟಿಂಗ್
Address: ಉಡುಪಿ, ತಳ ಅಂತಸ್ತು, ಕೆನರಾ ಟವರ್, ಮಿಷನ್ ಆಸ್ಪತ್ರೆ ರಸ್ತೆ, ಉಡುಪಿ

Synopsys

‘ಕುಂದಾಪ್ರ ಕನ್ನಡ ನಿಘಂಟು’ ಈ ಕೃತಿಯು ವ್ಯಂಗ್ಯಚಿತ್ರಕಾರ  ಲೇಖಕ ಪಂಜು ಗಂಗೊಳ್ಳಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ಪ್ರೊ-ಡಿಜಿ ಪ್ರಿಂಟಿಂಗ್ ಪ್ರಕಾಶನದಿಂದ ಪ್ರಕಟವಾಗುತ್ತಿರುವ ಈ ಕೃತಿ ಪಂಜು ಗಂಗೊಳ್ಳಿ ಅವರ 20 ವರ್ಷಗಳ ಸುದೀರ್ಘ ತಪಸ್ಸಿನ ಫಲ, ಈ ಕೃತಿಗೆ ಅಕ್ಷರಗಳು, ಶಬ್ದಗಳು, ನುಡಿಗಟ್ಟುಗಳು, ಅರ್ಥಗಳಿಗೆ ಮಿಗಿಲಾದ ಒಂದು ಭಾವನಾತ್ಮಕ ಮಗ್ಗುಲೂ ಇದೆ ಎನ್ನುತ್ತಾರೆ ಪ್ರಕಾಶಕ ರಾಜಾರಾಂ ತಲ್ಲೂರು. ಕಲ್ಯಾಣಪುರ ಹೊಳೆಯಿಂದ ಶಿರೂರು ಭಟ್ಕಳ ತನ್ನಕ ಕೇಳಿಬರುವ ಒಂದು ವಿಶಿಷ್ಟ ಉಪಭಾಷೆ- ಕುಂದಾಪ್ರ ಕನ್ನಡ. ಇದು ಸೀಮಿತ ಪ್ರದೇಶದ ಭಾಷೆಯಾಗಿದ್ದರೂ ಕುಂದಾಪ್ರ ಕನ್ನಡದ ಆಳ ವಿಸ್ತಾರ ಅಗಾಧವಾದುದು. ಸಿದ್ಧಾಪುರದ ಕನ್ನಡಕ್ಕಿಂತ ಕೋಟ-ಕೋಟೇಶ್ವರ ಕನ್ನಡ ಭಿನ್ನವಾದುದು. ತಲ್ಲೂರು, ಹೆಮ್ಮಾಡಿ, ಗಂಗೊಳ್ಳಿ ಕನ್ನಡದಂತೆ ನಾವುಂದ, ಉಪ್ಪುಂದ, ಬೈಂದೂರು ಕನ್ನಡವಿಲ್ಲ. ವರ್ಷದ ಹನ್ನೆರಡು ತಿಂಗಳುಗಳಿಗೆ ತನ್ನದೇ ಆದ ಪ್ರತ್ಯೇಕ ಹೆಸರನ್ನೂ ಕುಂದಾಪ್ರ ಕನ್ನಡ ಹೊಂದಿದೆ. ಶಿಷ್ಟ ಅಥವಾ ಗ್ರಾಂಥಿಕ ಕನ್ನಡದಲ್ಲಿ ಕಂಡುಬಾರದ ಹಳಗನ್ನಡದ ಎಷ್ಟೋ ಪದಪ್ರಯೋಗಗಳು ಕುಂದಾಪ್ರ ಕನ್ನಡದಲ್ಲಿ ಇನ್ನೂ ಚಾಲ್ತಿಯಲ್ಲಿವೆ. ಪ್ರಾಚೀನತೆ ಹಾಗೂ ಭಾಷಾ ಸಿರಿವಂತಿಗೆಯಲ್ಲಿ ಕುಂದಾಪ್ರಕನ್ನಡ ಎಂಬ ಈ ಉಪಭಾಷೆ ತನ್ನ ಮುಖ್ಯಭಾಷೆಗೆ ಸರಿಮಿಗಿಲೆಂಬಂತಿದೆ. ಈ ಭಾಷೆಯ ನಿಘಂಟು ಆಗಿರುವ ಮಹತ್ವದ ಕೃತಿಯ ಸಂಪಾದಕರಾಗಿ ಸಿ.ಎ. ಪೂಜಾರಿ, ಹಾಗೂ ರಾಮಚಂದ್ರ ಉಪ್ಪುಂದ ಅವರು ಕಾರ್ಯನಿರ್ವಹಿಸಿದ್ದಾರೆ.

About the Author

ಪಂಜು ಗಂಗೊಳ್ಳಿ
(01 August 1962)

ಪಂಜು ಗಂಗೊಳ್ಳಿ ಅವರು 1962ರ ಆಗಸ್ಟ್‌ 01ರಂದು ಕುಂದಾಪುರದ ಗಂಗೊಳ್ಳಿಯಲ್ಲಿ ಜನಿಸಿದರು. ಪ್ರಸ್ತುತ ಮುಂಬೈನಲ್ಲಿ ವಾಸ. ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿಎಸ್.ಸಿ. ಪೂರೈಸಿ, ಮುಂಗಾರು ದಿನಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. 'ಲಂಕೇಶ್ ಪತ್ರಿಕೆ'ಯಲ್ಲಿ ಕೆಲವು ವರ್ಷಗಳ ಕಾಲ ಕಾರ್ಟೂನಿಸ್ಟ್ ಆಗಿದ್ದರು. ಬಳಿಕ ಪ್ರೀತೀಶ್ ನಂದಿ ಸಂಪಾದಕತ್ವದ 'ದಿ ಸಂಡೇ ಆಬ್ಬರ್ವರ್' ಪತ್ರಿಕೆಯ ಮೂಲಕ ಇಂಗ್ಲಿಷ್ ಪತ್ರಿಕೋದ್ಯಮ ಪ್ರವೇಶಿಸಿದರು. ಕಳೆದ 20ವರ್ಷಗಳಿಂದ 'ಬ್ಯುಸಿನೆಸ್ ಇಂಡಿಯಾ' ಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಂಜು ಗಂಗೊಳ್ಳಿ ಅವರಿಗೆ ಆನುವಂಶಿಕವಾಗಿ ಬಂದ ಚಿತ್ರಕಲೆ ವೃತ್ತಿಯಾದರೆ, ಬರವಣಿಗೆ ಪ್ರವೃತ್ತಿ. 'ಮೂಢನಂಬಿಕೆಗಳ ವಿಶ್ವರೂಪ', 'ರುಜು' ...

READ MORE

Related Books