ಕುಣಿಗಲ್ ಶೋಧ

Author : ಕೆ. ರೇವಣಸಿದ್ಧಯ್ಯ

Pages 184

₹ 200.00




Year of Publication: 2021
Published by: ಸುಹಾಸ್ ಗ್ರಾಫಿಕ್ಸ್
Address: ರಾಜಾಜಿನಗರ ಬೆಂಗಳೂರು, s
Phone: 9845355509

Synopsys

’ಕುಣಿಗಲ್ ಶೋಧ’ ಕೃತಿಯು ಲೇಖಕ  ಕ. ರೇವಣಸಿದ್ಧಯ್ಯ ಅಧ್ಯಯನ ಕೃತಿ. ಕುಣಿಗಲ್ ನಾಡಿನ ನೆಲೆ-ಬೆಲೆಗಳ ಬಗ್ಗೆ ಅರಿವು ಮೂಡಿಸುತ್ತದೆ. ಹಾಗೆಯೇ, ಚರಿತ್ರೆಯಲ್ಲಿನ ಸತ್ಯಾಸತ್ಯತೆಗಳನ್ನು ಒರೆಗೆ ಹಚ್ಚಿ ಅಧ್ಯಯನಕ್ಕೆ ಅವಶ್ಯಕವಾದ ಪಕ್ಷಿನೋಟವನ್ನು ತೆರೆದಿಡುತ್ತದೆ. ತಾಲ್ಲೂಕಿನ ಪ್ರಾಚೀನ ಸಂಸ್ಕೃತಿಯು ನೆಲೆಗಳು, ಪ್ರಾಚ್ಯಾವಶೇಷಗಳು ಸೇರಿದಂತೆ ಜಾನಪದ, ಪುರಾಣ, ಧಾರ್ಮಿಕ ಸಂಪ್ರದಾಯ, ಸಂಸ್ಕೃತಿ ಸೇರಿದಂತೆ ಆಧುನಿಕ ಹಾಗೂ ಸವಿಸ್ತಾರವಾದ ವಿವರಗಳೊಂದಿಗೆ ಕಾಣಿಸುವ ಈ ಕೃತಿ, ಶಾಸನೋಕ್ತ ಸ್ಥಳನಾಮಗಳು, ಪ್ರಾಚೀನ ಜೈನ ಕೇಂದ್ರ, ನವಶೋಧಿತ ಶಿಲಾಯುಗ ಸಂಸ್ಕೃತಿಯ ಹಿನ್ನೆಲೆಯಲ್ಲಿ ಕೋಟೆಗಳ ಅಧ್ಯಯನಗಳನ್ನೊಳಗೊಂಡ ಮಾಹಿತಿಗಳನ್ನು ವಿಶೇಷ ಛಾಯಾಚಿತ್ರಗಳ ಸಮೇತ ಪುಸ್ತಕದಲ್ಲಿ ಸಂಶೋಧಕರು ಕಟ್ಟಿಕೊಟ್ಟಿದ್ದಾರೆ.

About the Author

ಕೆ. ರೇವಣಸಿದ್ಧಯ್ಯ

ಲೇಖಕ ಕೆ. ರೇವಣಸಿದ್ಧಯ್ಯ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕುರುಪಾಳ್ಯ ಗ್ರಾಮದವರು. ರೈತಾಪಿ ಕುಟುಂಬದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ಕುಣಿಗಲ್ ನಾಡು-ಇತಿಹಾಸ ಮತ್ತು ಪುರಾತತ್ವ ಅಧ್ಯಯನ ’ ವಿಷಯವಾಗಿ  ಪಿಹೆಚ್ ಡಿ ಪದವೀಧರರು. ಕೃತಿಗಳು: ಕುಣಿಗಲ್ ಶೋಧ ...

READ MORE

Related Books