ಕುರುಬ ಮಹಿಳೆ

Author : ಚನ್ನಪ್ಪ ಕಟ್ಟಿ

Pages 116

₹ 120.00




Year of Publication: 2017
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ಪುರಾಣ, ಚರಿತ್ರೆ, ಸಂಪ್ರದಾಯ, ಸಮಾಜ ಹೀಗೆ ವಿವಿಧ ನೆಲೆಗಳಲ್ಲಿ ಕುರುಬ ಮಹಿಳೆಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಎಷ್ಟೆಲ್ಲ ಒತ್ತಡಗಳ ಮಧ್ಯೆಯೂ ಕುರುಬ ಮಹಿಳೆಯರು ತಮ್ಮ ಕರ್ತವ್ಯದಿಂದ ವಿಮುಖರಾಗುವುದಿಲ್ಲ. ಈ ಮನೋಧರ್ಮ ಅವರ ಕಾಯಕದ ಪರಿಣಾಮವೂ ಆಗಿರುತ್ತದೆ. ಇಂತಹ ಕೆಲ ಅಚ್ಚರಿಯ ಸಂಗತಿಗಳ ಭಾಗವಾಗಿ ’ಕುರುಬ ಮಹಿಳೆ’ ಕೃತಿ ಗಮನಾರ್ಹ ಹೊಳವುಗಳನ್ನು ನೀಡುತ್ತದೆ.

About the Author

ಚನ್ನಪ್ಪ ಕಟ್ಟಿ
(01 May 1956)

ಡಾ. ಚನ್ನಪ್ಪ ಕಟ್ಟಿಯವರ ಪೂರ್ಣ ಹೆಸರು ಚನ್ನಪ್ಪ ಕನಕಪ್ಪ ಕಟ್ಟಿ. ಮೂಲತಃ  ಗದಗ ಜಿಲ್ಲೆ, ರೋಣ ತಾಲ್ಲೂಕು ಹಿರೇಹಾಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಹಿರೇಹಾಳ ಗ್ರಾಮದಲ್ಲಿ ಮುಗಿಸಿದ ಅವರು ಮಾಧ್ಯಮಿಕ ಶಿಕ್ಷಣವನ್ನು ಶ್ರೀ ವೀರಪುಲಿಕೇಶಿ ಮಾಧ್ಯಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಆನಂತರ ಶ್ರೀವೀರಪುಲಿಕೇಶಿ ಪದವಿ ಪೂರ್ವ ಮಹಾವಿದ್ಯಾಲಯ, ಬಾದಾಮಿಯಲ್ಲಿ ಪದವಿ ಪೂರ್ಣ ಶಿಕ್ಷಣ ಪಡೆದ ಅವರು, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡದಲ್ಲಿ ಇಂಗ್ಲಿಷ್ ನಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ಸಿಂದಗಿಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ...

READ MORE

Related Books