ಕುರುಡ ಮತ್ತು ಕಂದೀಲು

Author : ಚಂದ್ರಕಾಂತ ಕರದಳ್ಳಿ

Pages 100

₹ 75.00
Published by: ವಿಚಾರ ಪ್ರಕಾಶನ
Address: 'ಶಿವ ಪ್ರಸಾದ’, ಲಕ್ಷ್ಮೀ ನಗರ, ಶಹಾಪುರ- 585223
Phone: 08419-243192 / 9448595212

Synopsys

“ಕುರುಡ ಮತ್ತು ಕಂದೀಲು" ಕಥಾ ಪುಸ್ತಕದಲ್ಲಿ ಚಂದ್ರಕಾಂತ ಕರದಳ್ಳಿಯವರು ಮಕ್ಕಳಿಗಾಗಿ ರಚಿಸಿದ ಇಪ್ಪತ್ತೈದು ಕಥೆಗಳ ಗುಚ್ಛ. ಕಥೆಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು, ಕಥೆಯನ್ನು ಹೆಣೆದ ಪರಿ, ಕತೆಗೆ ಆಯ್ಕೆಮಾಡಿಕೊಂಡ ವಿಷಯ ವಿಶಿಷ್ಟವಾಗಿದೆ. ಓದುತ್ತಾ ಹೋದಂತೆ ಕಥೆಗಳಜೊತೆಗೆ ಮಕ್ಕಳ  ಸಂವಹನ ಏರ್ಪಡುವಂತೆ ಇಲ್ಲಿನ ಕತೆಗಳನ್ನು ರಚಿಸಲಾಗಿದೆ.

About the Author

ಚಂದ್ರಕಾಂತ ಕರದಳ್ಳಿ
(25 August 1952)

ಮಕ್ಕಳ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿರುವ ಚಂದ್ರಕಾಂತ ಕರದಳ್ಳಿಯವರು‌ ಯಾದಗಿರಿ ಜಿಲ್ಲೆಯ ಶಹಾಪುರದವರು.‌ 1952ರ ಆಗಸ್ಟ್ 25ರಂದು ಜನಿಸಿದರು. ತಂದೆ ರಾಚಯ್ಯಸ್ವಾಮಿ ಕರದಳ್ಳಿ. ತಾಯಿ ಮುರಿಗೆಮ್ಮ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ (1985) ಪದವಿ‌ ಪಡೆದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಪ್ರೌಢಶಾಲಾ ಶಿಕ್ಷಕರಾದರು. 2012ರಲ್ಲಿ ನಿವೃತ್ತರಾದರು.  ಮಕ್ಕಳ ಕತೆ, ಕಾದಂಬರಿ, ಕಾವ್ಯ ರಚಿಸಿರುವ ಕರದಳ್ಳಿ ಅವರಿಗೆ ಕೇಂದ್ರ ಸರ್ಕಾರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ. ಯಾದಗಿರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ...

READ MORE

Related Books