ಡಾ. ಮಾದುಪ್ರಸಾದ್ ಹುಣಸೂರು ಅವರ ಕಥಾ ಸಂಕಲನ- ಕೂಳಿನ ಕಾಳಗ. ತಳಮಟ್ಟದ ಜನರು ತಮ್ಮ ಬದುಕಿಗಾಗಿ ನಡೆಸುವ ಹೋರಾಟದ ಫಲವು ಸಮಾಜದ ಬಲಿಷ್ಠರ ಪಾಲಾಗುವ ದುರಂತ ಹಾಗೂ ಬಡವರನ್ನೇ ದಮನಿಸುವ ಉಳ್ಳವರ ಹುನ್ನಾರಗಳನ್ನು ನಿರೂಪಿಸುವ ಕಥೆಗಳ ಸಂಕಲನವಿದು.
ಡಾ. ಮಾದುಪ್ರಸಾದ್ ಹುಣಸೂರು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ರಂಗಯ್ಯನಕೊಪ್ಪಲು ಗ್ರಾಮದವರು. ತಂದೆ ಕುಂಡಯ್ಯ, ತಾಯಿ ಕಾಳಮ್ಮ. ಜನನ 1982ರ ಮಾರ್ಚ್ 20 ರಂದು. ಪ್ರಾಥಮಿಕ ಶಿಕ್ಷಣ-ಹುಟ್ಟೂರಿನಲ್ಲಿ, ಮಾಧ್ಯಮಿಕ ಶಿಕ್ಷಣ-ಬೋಳನಹಳ್ಳಿಯಲ್ಲಿ, ಪ್ರೌಢಶಾಲಾ ಶಿಕ್ಷಣ-ಅರಸಿ ಹುಣಸೂರಿನಲ್ಲಿ ನಡೆಯಿತು. ಮೈಸೂರಿನ ವಸಂತ ಮಹಲ್ ನಲ್ಲಿ ಶಿಕ್ಷಕ ತರಬೇತಿ ಪಡೆದು, 2004 ರಲ್ಲಿ ಪಿರಿಯಾಪಟ್ಟಣದ ಭೂತನಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾದರು. ಕೃತಿಗಳು: ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ 'ಮಕ್ಕಳ ಕಥಾ ಸಾಹಿತ್ಯ ಸ್ವರೂಪ: ತಾತ್ವಿಕತೆ ' ವಿಷಯವಾಗಿ ಮಹಾಪ್ರಬಂಧ ಮಂಡಿಸಿ ಪಿ.ಎಚ್.ಡಿ, ಎಂ.ಎಸ್. ಪುಟ್ಟಣ್ಣರ ಮಕ್ಕಳ ಸಾಹಿತ್ಯದ ಕೊಡುಗೆ ಎಂಬುದು ಸಂಶೋಧನಾ ಗ್ರಂಥ ಪ್ರಕಟಣೆ, ‘ಹಾಡೋಣ ಬಾರೋ ಕಿಶೋರ, 'ಬೆಂದವರ ಬೆವರು, ಹಕ್ಕಿಗಾನ ...
READ MORE