ಕುವೆಂಪು ಕಾದಂಬರಿಗಳು

Author : ಗುರುಪಾದ ಮರಿಗುದ್ದಿ

Pages 380

₹ 150.00




Year of Publication: 2004
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002

Synopsys

ಕಳೆದ ಶತಮಾನದಲ್ಲಿ ಕನ್ನಡ ವಿಮರ್ಶಕರು, ನಮ್ಮಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಕವಿಗಳ ಮಹತ್ವದ ಕೃತಿಗಳನ್ನು ಕುರಿತು ಬಿಟ್ಟೂಬಿಡದೆ. ಚಿಂತನೆ ನಡೆಸಿದ್ದಾರೆ. ಕೃತಿಯ ವಸ್ತು, ತಂತ್ರ, ಭಾವ, ಭಾಷೆ, ಒಲವು, ನಿಲುವು – ಇತ್ಯಾದಿಗಳನ್ನು ವಿವರಿಸಿದ್ದಾರೆ, ವಿಶ್ಲೇಷಿಸಿದ್ದಾರೆ, ಬೆಲೆ ಕಟ್ಟಿದ್ದಾರೆ. ಈ ಸಂಕಲನ ಗ್ರಂಥದಿಂದ ಕವಿ ಕೃತಿಯ ಅಥವಾ ಕೃತಿಗಳ ಅಧ್ಯಯನಕ್ಕೆ ಮತ್ತು ಹೊಸಚಿಂತನೆಗೆ ತುಂಬ . ಪ್ರಯೋಜನವಾಗುವುದೆಂದು ನಂಬಲಾಗಿದೆ. ಸಾಹಿತ್ಯ ವಿದ್ಯಾರ್ಥಿಗಳಿಗಂತೂ ಅಪ್ರಯತ್ನಿಕವಾಗಿ. ಒಂದೆಡೆಯಲ್ಲಿ ದೊರೆಯುವ ಅಮೌಲ್ಯನಿಧಿ ಇದೆಂದು ಹೇಳಬಹುದು. ಪ್ರಸ್ತುತ "ಕುವೆಂಪು ಕಾದಂಬರಿಗಳು” ಕುರಿತಾದ ವಿಮರ್ಶಾಸಂಕಲನವನ್ನು ಸಿದ್ಧಪಡಿಸಿಕೊಟ್ಟವರು ಡಾ. ಗುರುಪಾದ ಮರಿಗುದ್ದಿಯವರು. ಸುಮಾರು. ಎರಡು... ದಶಕಗಳಿಂದಕುವೆಂಪು ಸಾಹಿತ್ಯವನ್ನು. ಸಮಗ್ರವಾಗಿ. ಅಧ್ಯಯನ ಮಾಡಿದಡಾ. ಮರಿಗುದ್ದಿಯವರು ಬಹುಪರಿಶ್ರಮದಿಂದ ಸಿದ್ಧಪಡಿಸಿದಈ ಸಂಕಲನ ಅಧ್ಯಯನ ಶೀಲರ ಗಮನ ಸೆಳೆಯುವುದರಲ್ಲಿ ಸಂದೇಹವಿಲ್ಲ.

About the Author

ಗುರುಪಾದ ಮರಿಗುದ್ದಿ
(20 June 1956)

ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’.  ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...

READ MORE

Related Books