ಕುವೆಂಪು ಕಥನ ಗೀತೆಗಳು

Author : ಸಿ.ಕೆ ನಾವಲಗಿ

Pages 60

₹ 50.00




Year of Publication: 2016
Published by: ಸಂಕಲ್ಪ ಪ್ರಕಾಶನ
Address: #1, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ದೀಪಾಂಜಲಿನಗರ, ಬೆಂಗಳೂರು-560026

Synopsys

ಕುವೆಂಪು ಅವರ ಕಥನ ಗೀತೆಗಳನ್ನು ಜಾನಪದೀಯ ನೆಲೆಯಲ್ಲಿ ಸಂಶೋಧನೆ ನಡೆಸಿ ರಚಿಸಲಾಗಿರುವ ಕೃತಿ ಕುವೆಂಪು ಕಥನ ಗೀತೆಗಳು. ಈ ಕೃತಿಯಲ್ಲಿ ಜಾನಪದ ನೆಲೆಯ ಸಂಶೋಧನಾ ಅಧ್ಯಯನ: ಅಧ್ಯಯನದ ಮಹತ್ವ: ಉದ್ದೇಶ, ಅಧ್ಯಯನದ ತಾಂತ್ರಿಕ ವಿಧಾನಗಳು: ಕಥನ ಕವನಗಳ ಒಳನೋಟ, ಕವಿ ಪರಿಚಯ: ಕುವೆಂಪು, ಪ್ರಸ್ತಾವನೆ: ಕಥನ ಕವನ, ಜಾನಪದ ಮಹತ್ವ-ವ್ಯಾಪ್ತಿ, ಕುವೆಂಪು: ಜಾನಪದ, ಕಥನ ಕವನಗಳು (ಜಾನಪದ ನೆಲೆಯ ಅಧ್ಯಯನ) ನಾಗಿ, ಕರಿಸಿದ್ದ ಮರಸು ಬೇಟೆ, ಘಂಟಾಕರ್ಣ, ಮಂಜಣ್ಣ ಹೇಳಿದ ಸ್ಥಳಗತೆ, ದೂಲಿ, ರಕ್ತರಜನಿ, ತಾನಾಜೆ, ಜಯಸಿಂಹನ ಕೊನೆಗಾಲ, ಕುಮುದಿನಿ, ಪ್ರತಾಪಸಿಂಹ ಮುಂತಾದ ವಿಷಯಗಳ ಕುರಿತು ಸಂಪೂರ್ಣ ಮಾಹಿತಿ ಈ ಕೃತಿಯಲ್ಲಿದೆ.

About the Author

ಸಿ.ಕೆ ನಾವಲಗಿ
(01 August 1956)

ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್‌ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.  ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...

READ MORE

Related Books