ಕುವೆಂಪು ಸಾಹಿತ್ಯ ಲೋಕ-೨

Author : ಹ.ಕ. ರಾಜೇಗೌಡ

Pages 404

₹ 300.00




Published by: ಸಿ.ವಿ.ಜಿ. ಪಬ್ಲಿಕೇಷನ್ಸ್
Address: ನಂ.277, 5ನೇ ತಿರುವು, ವಿಧಾನಸೌಧ ಲೇಔಟ್, ಲಗ್ಗೆರೆ, ಬೆಂಗಳೂರು- 560058

Synopsys

‘ಕುವೆಂಪು ಸಾಹಿತ್ಯ ಲೋಕ’ ಸಂಪುಟ-2 ಲೇಖಕ ಹ.ಕ. ರಾಜೇಗೌಡ ಅವರು ಸಂಪಾದಿಸಿರುವ ಕುವೆಂಪು ಅವರ ಸಾಹಿತ್ಯದ ಅವಲೋಕನದ ಸಂಕಲನ.  ಕೃತಿಯಲ್ಲಿ ಸಂಪಾದಕನ ಮಾತು-ಹ. ಕ.ರಾಜೇಗೌಡ, ಪ್ರಕಾಶಕರ ಮಾತು- ಹೆಚ್. ಆರ್. ದಾಸೇಗೌಡ, ಬ್ರೌಪದಿಯ ಶ್ರೀಮುಡಿ ಮತ್ತು ವಿಭೂತಿ ಪೂಜೆ- ಮಾ. ಶ್ರೀ ನಾಗರಾಜರಾವ್,  ಶ್ರೀರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದ- ಡಿ. ಕೆ. ರಾಜೇಂದ್ರ, ಕುವೆಂಪು ಅವರ ಮಕ್ಕಳ ಪುಸ್ತಕಗಳು- ನಗುವನಹಳ್ಳಿ ಪಿ. ರತ್ನ, 'ನಾನಿನ್ನ ಮರೆಯೆ' - ಒಂದು ನೋಟ- ವಲ್ಲಿ ಅಯ್ಯಂಗಾರ್, ಮಲೆಗಳಲ್ಲಿ ಮದುಮಗಳು- ಕಡೂರು ರಂಗನಾಥ, ಕಾನೂರು ಹೆಗ್ಗಡಿತಿ ಮತ್ತು ಬಂಡಾಯ- ಕೆ. ಎಸ್. ಭಗವಾನ್, ಮಲೆನಾಡಿನ ಚಿತ್ರಗಳು- ಎಂ ಪಿ. ಮಂಜಪ್ಪಶೆಟ್ಟಿ, ನಿರಂಕುಶಮತಿಗಳಾಗಿ, ಮನುಜಮತ ವಿಶ್ವಪಥ-ಇತ್ಯಾದಿ- ಎಂ. ಜಯಂತೀಬಾಯಿ, ಜೇನಾಗುವ, ಷೋಡಶಿ, ಅನುತ್ತರಾ- ವೈ. ಸಿ. ಭಾನುಮತಿ, ಕುವೆಂಪು ಅವರ ಕಥನಗೀತೆಗಳು- ಜಿ.ಜಿ. ಮಂಜುನಾಥನ್, ಹೊನ್ನ ಹೊತ್ತಾರೆ ಮತ್ತು ಪ್ರೇತಕ್ಕೂ- ಕೆ. ನಾರಾಯಣ ಪ್ರಸಾದ್, ಅಗ್ನಿಹಂಸ, ಅನಿಕೇತನ ಸಂಕಿರಣ ಸಮೀಕ್ಷೆ- ಬಿ. ಶಾಮಸುಂದರ, ಸ್ವಾಗತ- ಎಂ. ಜೆ. ಕೋದಂಡರಾಮಶೆಟ್ಟಿ, ಉದ್ಘಾಟನಾ ಭಾಷಣ- ಹಾ. ಮಾ. ನಾಯಕ, ಅಧ್ಯಕ್ಷ ಭಾಷಣ- ಡಿ. ವಿ. ಅರಸ್, ಸ್ವಾಗತ- ಎ. ಎಂ. ಬಸವೇಗೌಡ, ಸಂಕಿರಣವನ್ನು ಕುರಿತು- ಜೀ. ಶಂ. ಪರಮಶಿವಯ್ಯ, ಸಮಾರೋಪ ಭಾಷಣ- ಜಿ. ಎಸ್. ಶಿವರುದ್ರಪ್ಪ- ಅಧ್ಯಕ್ಷ ಭಾಷಣ- ಜಿ. ನಾರಾಯಣ ಸೇರಿದಂತೆ ಹಲವು ಮಹತ್ವದ ಅವಲೋಕನ ಬರಹಗಳಿವೆ.

About the Author

ಹ.ಕ. ರಾಜೇಗೌಡ

ಹ.ಕ. ರಾಜೇಗೌಡರು ಮೂಲತಃ ಮಂಡ್ಯ ನಾಗಮಂಗಲ ತಾಲ್ಲೂಕು ಹನುಮನಹಳ್ಳಿಯವರು. ಕೃಷಿಕ ಕುಟುಂಬದಲ್ಲಿ ಜನಿಸಿದ ರಾಜೇಗೌಡರು ನಾಡಿನ ಪ್ರಮುಖ ಸಂಶೋಧಕರಲ್ಲಿ ಒಬ್ಬರು. ಕನ್ನಡ (ಎಂ.ಎ) ಸ್ನಾತಕೋತ್ತರ ಪದವೀಧರರಾದ ಅವರು ಬೆಂಗಳೂರು, ಕನಕಪುರದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ವಿಭಾಗಕ್ಕೆ ಸೇರಿದರು. ರಾಷ್ಟ್ರಕವಿ ಕುವೆಂಪು, ದೇಜಗೌ, ಹಾ.ಮಾ.ನಾಯಕ ಅವರ ಪ್ರಭಾವಲಯದಲ್ಲಿ ಗುರುತಿಸಿಕೊಂಡಿದ್ದ ಅವರು ತಮ್ಮ ಸಂಶೋಧನಾ ಕೃತಿಗಳ ಮೂಲಕ ಸಾಹಿತ್ಯಕ ವಲಯದಲ್ಲಿ ಗಣನೀಯ ಕೆಲಸ ಮಾಡಿದ್ದಾರೆ. ವಿಮರ್ಶಾ ಕೃತಿ ’ವಿವೇಚನೆ’ ಕಥಾಸಂಕಲನಗಳಾದ ’ಜಗ್ಗಿನ ಜನಪದ ಕಥೆಗಳು’,’ಮಳೆ ಹುಯ್ಯುತ್ತಿದೆ’ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books